Monday, November 3, 2014

ನಂದಿತಾ ಎಂಬ ಅಬಲೆಯೊಬ್ಬಳ ಕೊಲೆಯ ಹಿಂದಿರುವ ನೂರು ಕೈಗಳು

ನಂದಿತಾಳನ್ನು ಕೊಂದವರು ಯಾರು? ಉತ್ತರಿಸುವುದು ಅಷ್ಟು ಸುಲಭವಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ನಾನೂ ಒತ್ತಾಯಿಸುತ್ತಿದ್ದೇನೆ. ಆದರೆ ಆರೋಪಿಗಳು ಯಾರು? ಅವರನ್ನು ಶಿಕ್ಷಿಸುವ ಬಗೆ ಹೇಗೆ. ನನ್ನ ಅರಿವಿಗೆ ಬಂದಂತೆ ನಂದಿತಾಳ ಸಾವಿನ ಹಿಂದಿರುವವರು ಒಬ್ಬರಲ್ಲ. ಹಲವು ಕೈಗಳು ಸೇರಿ ಆಕೆಯನ್ನು ಕೊಂದಿವೆ. ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆ ಮಗುವಿನ ಕೊಲೆಯ ಪಾಲುದಾರರು. ಅವರೆಲ್ಲರನ್ನೂ ಶಿಕ್ಷಿಸಲು ನಮ್ಮ ಕಾನೂನಿಗೆ ಸಾಧ್ಯವೆ?
1. ಪ್ರಕರಣದ ಮೊತ್ತ ಮೊದಲ ಆರೋಪಿ ಸ್ಥಳೀಯ ಮುಸ್ಲಿಮ್ ಯುವಕ. ಈತನಿಗೂ ನಂದಿತಾಳಿಗೂ ಪರಿಚಯವಿದ್ದುದೆ ಪ್ರಕರಣ ಇವನ ವಿರುದ್ಧ ತಿರುಗಲು ಮುಖ್ಯ ಕಾರಣ.  ಒಬ್ಬ ಹೈಸ್ಕೂಲ್ ಹುಡುಗಿಯೊಂದಿಗೆ ಸಾರ್ವಜನಿಕವಾಗಿ ಮಾತುಕತೆ ನಡೆಸುವಾಗ, ವ್ಯವಹರಿಸುವಾಗ, ಅದು ಅವಳ ಮೇಲೆ, ಅವಳ ಕುಟುಂಬದ ಮೇಲೆ ಬೀರಬಹುದಾದ ಪರಿಣಾಮದ ಕುರಿತಂತೆ ಈತನಿಗೆ ಎಚ್ಚರಿಕೆಯಿರಬೇಕಾಗಿತ್ತು.  ತನ್ನದೇ ತಂಗಿಯ ಜೊತೆಗೆ ಇನ್ನೊಬ್ಬರು ಆ ರೀತಿ ವರ್ತಿಸಿದ್ದೇ ಆದರೆ ಅದು ಈತನ ಪಾಲಿಗೆ ಎಷ್ಟು ಕೆಟ್ಟದಾಗಿರುತ್ತಿತ್ತು ಎನ್ನುವುದನ್ನು ಆತ ಯೋಚಿಸಬೇಕಾಗಿತ್ತು. ಹುಡುಗಿ ಪರಿಚಯಸ್ಥೆ. ಹುಡುಗನ ಕುರಿತಂತೆ ವಿಶೇಷ ಆಸಕ್ತಿಯನ್ನು ವಹಿಸಿದ್ದಾಳೆ. ಆದರೆ ಆಕೆ ಇನ್ನೂ 14 ವರ್ಷದ ಹುಡುಗಿ. ಈ ಹಿನ್ನೆಲೆಯಲ್ಲಿಯೇ ರಾಜಕೀಯ ಶಕ್ತಿಗಳ ಸಂಶಯ ಈತನ ಮೇಲೆ ತಿರುಗಿದೆ. ತನ್ನ ಬೇಜವಾಬ್ದಾರಿಗೆ  ಈತ ಕೆಲವು ವರ್ಷಗಳಾದರೂ ಜೈಲಲ್ಲಿ ಕೊಳೆಯಬೇಕು. ಅದು ಉಳಿದ ಹುಡುಗರಿಗೆ ಪಾಠವಾಗಬೇಕು.
2. ಎರಡನೆ ಆರೋಪಿಗಳು, ಇವರನ್ನು  ಅಪರಾಧಿಗಳಂತೆ ಕಂಡು, ಅದನ್ನು ಪ್ರಶ್ನಿಸಿರುವ ಕೆಲವು ನೈತಿಕ ಪೋಲಿಸರು. ಹೈಸ್ಕೂಲ್‌ನಲ್ಲಿ ಓದುವ ಎಳೆ ಹುಡುಗಿ ಇದರಿಂದ ಆಘಾತಗೊಂಡಿದ್ದಾಳೆ. ಈಕೆಯ ತಂದೆಗೆ ದೂರು ನೀಡಿದ್ದಾರೆ. ಇದರಿಂದ ಆ ಮಗು ಎಷ್ಟು ನೊಂದಿರಬಹುದು? ಕೆಲವರಿಗೆ ಈ ವಿಷಯ ವಿಷಯ ಸಾರ್ವಜನಿಕವಾಗುವುದು ಬೇಕಾಗಿತ್ತು. ರಾಜಕೀಯಗೊಳ್ಳುವ ಅಗತ್ಯವಿತ್ತು. ಆದರೆ ಅದು ಹುಡುಗಿಯ ಬದುಕಿನ ಮೇಲೆ ಬೀರಿದ ಪರಿಣಾಮ?
  3. ಮೂರನೆಯ ಆರೋಪಿ ಆಕೆಯ ತಂದೆ. ಬಾಲಕಿಯೊಂದಿಗೆ ತಂದೆಯ ವರ್ತನೆ ತೀರಾ ಬಿರುಸಾಗಿದೆ.  ತನ್ನ ಎಳೆ ಮಗುವಿಗೆ ಪರಿಸ್ಥಿತಿಯನ್ನು ಮೃದುವಾಗಿ ವಿವರಿಸಿ, ಅವಳಿಗೆ ಅರ್ಥ ಮಾಡಿಸಬೇಕಾಗಿತ್ತು. ಈ ಎಳೆ ಪ್ರಾಯದಲ್ಲಿ ಇದೆಲ್ಲ ಸರಿಯಲ್ಲ, ವಿದ್ಯಾಭ್ಯಾಸದ ಕಡೆ ಗಮನಕೊಡು ಎಂದು ಮನವೊಲಿಸಬೇಕಾಗಿತ್ತು. ಆದರೆ ಎಲ್ಲ ಮಧ್ಯಮವರ್ಗದ ತಂದೆಯಂತೆ ಈತನೂ ಮಗಳ ಮೇಲೆ ಎಗರಿ ಬಿದ್ದಿದ್ದಾರೆ. ಇದರಿಂದ ಮುಖಭಂಗಕ್ಕೊಳಗಾದ ಅವಮಾನಕ್ಕೊಳಗಾದ ಈ ಎಳೆ ಮಗು ಇನ್ನಷ್ಟು ಜರ್ಝರಿತವಾಗಿದೆ. ಮನೆಯಿಂದ ಹೊರ ಹೋಗಿ ವಿಷ ಪದಾರ್ಥ ಸೇವಿಸಿದೆ.  ತಂದೆಗೆ ತಿಳಿಯುವಾಗ ತಡವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವೈದ್ಯರು  ಕೈ ಚೆಲ್ಲಿದ್ದಾರೆ. ಎರಡು ದಿನಗಳ ಕಾಲ ತಂದೆ ಯಾವುದೇ ದೂರು ನೀಡಿರಲಿಲ್ಲ.  ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ ಹುಡುಗಿ ಮೃತ ಪಟ್ಟ ಬಳಿಕ ದೂರು ನೀಡಿದ್ದಾರೆ. ಆದರೆ ಆಕೆಯ ಸಾವಿನಲ್ಲಿ ತಂದೆಯ ಪಾತ್ರವೂ ಇದೆಯಲ್ಲವೆ?
4. ನಂದಿತಾ ಮೃತಪಟ್ಟ ಸುದ್ದಿ ಕೇಳಿದಾಕ್ಷಣ ಸ್ಥಳೀಯ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಚುರುಕಾದರು. ತಕ್ಷಣ ಹುಡುಗಿಯ ತಂದೆಗೆ ಒತ್ತಡ ಹಾಕಿದರು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ, ಆಕೆಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಲಾಗಿದೆ. ಸ್ಥಳೀಯರು ರಕ್ಷಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು ಎಂದೆಲ್ಲ ವದಂತಿಗಳನ್ನು ಹಬ್ಬಿಸಿದರು. ಇಡೀ ಪ್ರಕರಣವನ್ನು ರಾಜಕೀಯಗೊಳಿಸಿ, ಮುಸ್ಲಿಮರ ಮನೆ, ಮಠಗಳಿಗೆ ಕಲ್ಲು ತೂರಿದರು. ಸಾರ್ವಜನಿಕವಾಗಿ ದಾಂಧಲೆ ನಡೆಸಿದರು. ಆದರೆ ಹುಡುಗಿಯ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸುವಲ್ಲಿ ಇವರ ಕಾರ್ಯಕರ್ತರ ಪಾತ್ರವೂ ಇದೆ. ಬದುಕಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಡ ಹಾಕಿದವರು ಇವರೇ. ಇದೀಗ ಆಕೆಯ ಹೆಸರಿನಲ್ಲಿ ಮತ್ತೆ ರಾಜಕೀಯ ನಡೆಸುತ್ತಿದ್ದಾರೆ. ಇವರಿಗೆ ಯಾವ ಕಾನೂನು, ಯಾವ ರೀತಿಯ ಶಿಕ್ಷೆಯನ್ನು ನೀಡೀತು?
5. ಆಕೆಯ ಕೊಲೆಯಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಆಕೆ ತೀರಿ ಹೋದ ಬೆನ್ನಿಗೇ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಹುತೇಕ ಪತ್ರಿಕೆಗಳು ದೊಡ್ಡ ಅಕ್ಷರದಲ್ಲಿ ಬರೆದವು. ಆಕೆ ಸತ್ತಿರಬಹುದು ನಿಜ. ಆದರೆ ಮೃತ ಶರೀರಕ್ಕೂ ಒಂದು ಘನತೆಯಿದೆ. ಆಕೆಯ ದೇಹವನ್ನು ಮಾಧ್ಯಮಗಳು ರವಿವಾರದ ಮುಖಪುಟದಲ್ಲಿ ಕುಕ್ಕಿ ಕುಕ್ಕಿ ತಿಂದವು. ಇದನ್ನು ಓದಿದ ಆಕೆಯ ಕುಟುಂಬ ಅದೆಷ್ಟು ನೊಂದು ಕೊಳ್ಳಬಹುದು. ಒಂದು ರೀತಿಯಲ್ಲಿ ಇಡೀ ಕುಟುಂಬವನ್ನೇ ಮಾಧ್ಯಮಗಳು ನರಕಕ್ಕೆ ತಳ್ಳಿದವು. ಆದರೆ ಇದೀಗ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ಬಲಪಡೆಯುತ್ತಿದ್ದಂತೆ, ಮಾಧ್ಯಮಗಳು ಜಾಣ ವೌನ ತಾಳಿವೆ. ಇವರಿಗೆ ಯಾವ ಕಾನೂನು, ಯಾವ ರೀತಿಯ ಶಿಕ್ಷೆಯನ್ನು ನೀಡೀತು?


ನಂದಿತಾ ಪ್ರಕರಣದಂತಹ ಹಲವು ಘಟನೆಗಳು ಈ ಹಿಂದೆ ಕರಾವಳಿಯಲ್ಲಿ ನಡೆದಿವೆ. ವನಿತಾ ಎಂಬ ಬಿಲ್ಲವ ಸಮುದಾಯದ ಬಡ ಹೆಣ್ಣು ಮಗಳ ದುರಂತದ ಗಾಯ ಇನ್ನೂ ಒಣಗಿಲ್ಲ. ತೀರಾ ಬಡ ಕುಟುಂಬದ ಹೆಣ್ಣು ಈಕೆ. ಸ್ಥಳೀಯವಾಗಿ ಒಬ್ಬ ಮುಸ್ಲಿಮ್ ಹುಡುಗ ಒಂದು ಸಂಸ್ಥೆಯಲ್ಲಿ ಈಕೆಗೆ ಕೆಲಸ ಕೊಡಿಸಿದ್ದ. ಅವರಿಬ್ಬರು ಪರಿಚಯಸ್ಥರು. ಒಂದು ದಿನ ಇವರಿಬ್ಬರು ನಗರದಲ್ಲಿ ಒಟ್ಟಿಗೆ ನಿಂತು ಮಾತನಾಡುತ್ತಿದ್ದಾಗ ಅಲ್ಲಿಗೆ ಸಂಘಪರಿವಾರ ಕಾರ್ಯಕರ್ತರು ಆಗಮಿಸಿದ್ದಾರೆ. ಇಬ್ಬರಿಗೂ ಥಳಿಸಿದ್ದಾರೆ. ಹುಡುಗಿ ಅದನ್ನು ಪ್ರತಿಭಟಿಸಿದ್ದಾಳೆ. ಆಕೆಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಮನೆಗೆ ತೆರಳಿ ತಂದೆತಾಯಿಗೂ ‘ಬ್ಯಾರಿ ಹುಡುಗನ ಜೊತೆ ತಿರುಗಾಡುತ್ತಿದ್ದಾಳೆ’ ಎಂದು ಬೆದರಿಕೆ ಹಾಕಿದ್ದಾರೆ. ಹೆಣ್ಣೊಬ್ಬಳ ಸೂಕ್ಷ್ಮ ಮನಸ್ಸು ಛಿದ್ರವಾಗಿದೆ. ಮನೆಯಲ್ಲಿ ಪಾಲಕರೂ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದು ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಳು.
ಇನ್ನೊಂದು ಪ್ರಕರಣ ಮೂಡಬಿದ್ರೆಯಲ್ಲಿ ಸಂಭವಿಸಿತು. ಅಶ್ವಿನಿ ಮೂಲ್ಯ ಎನ್ನುವ ಕುಲಾಲ ಸಮುದಾಯದ ತರುಣಿಗೆ ದಿನಾ ಬಸ್ಸಲ್ಲಿ ಪ್ರಯಾಣಿಸುವ ಸಲೀಂ ಎಂಬ ಬಸ್ ಕಂಡಕ್ಟರ್ ಜೊತೆಗೆ ಸ್ನೇಹವಾಗಿದೆ. ಒಂದು ದಿನ ಇಬ್ಬರು ಜೊತೆಯಾಗಿರುವಾಗ ಅವರು ಸಂಘಪರಿವಾರ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ. ಇಬ್ಬರಿಗೂ ಥಳಿಸಿದ್ದಾರೆ. ಬಳಿಕ ಮೂಡಬಿದ್ರೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಹುಡುಗಿಯ ಕುರಿತಂತೆ ಸಂಜೆ ಪತ್ರಿಕೆಗಳಲ್ಲಿ ಅದೇನೇನೋ ವರದಿ ಬಂದಾಗಿತ್ತು. ಮನೆಯಲ್ಲಿ ಪೋಷಕರು ಹುಡುಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಕೆಯ ಮನಸ್ಸು ಒಡೆದು ಹೋಗಿದೆ. ಸಮಾಜದಲ್ಲಿ ಆದ ಅವಮಾನ ತಲೆಯೆತ್ತಲಾಗದಂತೆ ಮಾಡಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಬಳಿಕ ಸಿಓಡಿ ತನಿಖೆಯಾಯಿತು. ಹುಡುಗನಿಗೆ ಶಿಕ್ಷೆಯಾಯಿತು. ಆದರೆ ಆಕೆಯ ಸಾವಿಗೆ ಕೇವಲ ಆ ಹುಡುಗ ಮಾತ್ರ ಹೊಣೆಯೇ? ಆಕೆಯನ್ನು ಆತ್ಮಹತ್ಯೆಯ ಕಡೆಗೆ ದೂಡುವಲ್ಲಿ ಸಮಾಜದ ಪಾಲು, ಮಾಧ್ಯಮಗಳ ಪಾಲು ಇಲ್ಲವೆ?
ತೀರ್ಥಹಳ್ಳಿಯ ನಂದಿತಾ, ಮಂಗಳೂರಿನ ವನಿತಾ, ಕಿನ್ನಿಗೋಳಿಯ ಅಶ್ವಿನಿ....ಈ ಸಮಾಜದ ಕ್ರೌರ್ಯಕ್ಕೆ ಇನ್ನೆಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕೋ...!

12 comments:

  1. ಮೊದಲ ಅಪರಾಧ ನಡೆಯದಿದ್ದರೆ ಮುಂದಿನದು ನಡೆಯುವುದೇ ಇಲ್ಲ ಎಂಬ ಕನಿಷ್ಠ ಪ್ರಜ್ಞೆ ನಿಮಗೇಕಿಲ್ಲ. ಬಶೀರ್

    ReplyDelete
    Replies
    1. modala aparada nanninda nimminda nadeyuvudu mundinadu nadeyvudu ........
      ???????

      Delete
  2. Nimma gujari angadiyalli barediruvudu tumbaa chenagide....olle kategaara nivu...mechhabedde....hage ful storylu niv nintu madisidante Kate barediddira....

    ReplyDelete
  3. ಲೋ ಬಶೀರ ಏನೋ ನಿನ್ನ ಕಲ್ಪನೆ ಯಾವ ಕವಿಗೂ ಕಮ್ಮಿ ಇಲ್ಲ ನಿನ್ನ ಕಲ್ಪನೆ ಥೂ......... ನಿನ್ನ್ ದರಿದ್ರ ಜಾನ್ಮಕೆ

    ReplyDelete
  4. Better change your profession as a story writer. Shame on you.

    ReplyDelete
  5. ಬ್ಯಾರಿ ಹುಡುಗರಿಗೆ ಬ್ಯಾರಿ ಸಮಾಜದ ಹಿರಿಯರು ಬುದ್ಧಿ ಹೇಳಬೇಕು ತಮ್ಮ ಸಮಾಜದ ಹೊರಗಿನ ಹೆಣ್ಣು ಮಕ್ಕಳೊಂದಿಗೆ ಸರಸ ಸಲ್ಲಾಪ ಮಾಡುವುದು ಬೇಡ ಅಂತ.

    ReplyDelete
  6. ಬಷೀರ್ ಅವರಿಗೆ--- ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದಿನ ಪತ್ರಿಕೆಗಳಲ್ಲಿ ವೈದ್ಯರ, ಪೋಲಿಸಿನವರ ಕೆಲವು ನಡೆಗಳು ಹೇಗೆ ಅನುಮಾನಕ್ಕೆ ಕಾರಣ ಎಂಬ ಬಗ್ಗೆ ದೀರ್ಘವಾದ ವಿವರಣೆ ಇದೆ. ಎಲ್ಲೋ ಒಂದುಕಡೆ ಆರೋಪಿಯನ್ನು ರಕ್ಷಿಸುವಂತೆ ಕಾಣದ ಕೈಗಳು ಕೆಲಸ ಮಾಡುತ್ತಿರಬಹುದೇನೋ ಎಂಬ ಅನುಮಾನ ಸಹಜವಾಗಿ ಜನರಲ್ಲಿ ಮೂಡುತ್ತಿದೆ. -----ಎಂ ಎ ಶ್ರೀರಂಗ ಬೆಂಗಳೂರು

    ReplyDelete
  7. nimma maneyalli aadre neevu baitha eralillava ? mr basheer

    ReplyDelete
  8. nimma byari hudugarige mosada gelethana madalu namma hindu hudugire sigoda gujari bhasheera, ondu vele hindu hudugaru manasu madidare nimma byari hudugiru rasthe illilikku sadhya illa adare namma hiriyaru namage neethi pata kalisi belesiddu nimma hage jihadi pata alla, nimma mosada mukavada kalachi biddu neevu byarigalu yenthaha krurigalu yendu jaga jahiragide swalpa manashakshi iddare ninna poli byari hudugarige buddi helu illadiddare nimma byari samaja thakka bele thetthabeku

    ReplyDelete
  9. ಲವ್ ಜಿಹಾದ್ ಬಗ್ಗೆ ಲೇಖಕರು ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕು ಅಂತ ಅವರಲ್ಲಿ ಸವಿನಯ ಕೋರಿಕೆ.

    ReplyDelete
  10. ಅರ್ಥೈಸುವವರಿಗೆ ಉತ್ತಮವಾದ ಬರಹ ವೆಂದು ಹೇಳದೆ ನಿರ್ವಾಹವಿಲ್ಲ. ಧನ್ಯವಾದಗಳು ಬಷೀರ್ ಸಾರ್

    ReplyDelete