ಮಂಗಳೂರು ಸಮಾಚಾರ (1843ರಲ್ಲಿ) ಕರ್ನಾಟಕದ ಮೊತ್ತ ಮೊದಲ ಪತ್ರಿಕೆ ಎಂದು ಗುರುತಿಸಿಕೊಂಡಿದೆ. ಇದರ 13ನೆ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ನನ್ನನ್ನು ತೀವ್ರವಾಗಿ ಸೆಳೆಯಿತು. ಮಂಗಳೂರಿನಲ್ಲಿ ಬಾಷೆಲ್ ಮಿಶನ್ ನಡೆಸಿದ ಮೊತ್ತ ಮೊದಲ ಮತಾಂತರ ಪ್ರಕರಣವೊಂದು ಈ ಸಂಚಿಕೆಯಲ್ಲಿ ವರದಿಯಾಗಿತ್ತು. ಮತ್ತು ಅದು ಅಂದು ಮಂಗಳೂರಿನಲ್ಲಿ ತೀವ್ರ ಉದ್ವಿಗ್ನ ವಾತಾವರಣವನ್ನೂ ಸಷ್ಟಿಸಿತ್ತು. ಸಾಧಾರಣವಾಗಿ ಮತಾಂತರ ಎಂದಾಗ ನಮ್ಮ ಕಣ್ಮುಂದೆ ನಿಲ್ಲುವುದು ದಲಿತರು. ಆದರೆ ಈ ಪ್ರಪ್ರಥಮ ಪ್ರಕರಣದಲ್ಲಿ ಮತಾಂತರವಾದ ಮೂವರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ವಿಶೇಷವೆಂದರೆ, ಅವರು ತಾವು ಮತಾಂತರವಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಇನ್ನೂ ಒಂದು ವಿಶೇಷವಿದೆ. ಮತಾಂತರವಾದವರು ಬ್ರಾಹ್ಮಣರು, ಮತಾಂತರ ಮಾಡಿಸಿದ್ದು ಕ್ರೈಸ್ತ ಮಿಶನರಿಗಳು. ಆದರೆ ದುಷ್ಕರ್ಮಿಗಳು ಹಂದಿಯನ್ನು ಕಡಿದು ಹಾಕಿದ್ದು ಮಾತ್ರ ಮಸೀದಿಯ ಕೆರೆಗೆ. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಮಾಚಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇದ್ದಂತೆಯೇ ಇಲ್ಲಿ ನಿಮ್ಮ ಮುಂದಿಟ್ಟಿದ್ದೇನೆ. ಆ ಕಾಲಘಟ್ಟದ ಪತ್ರಿಕಾ ಭಾಷೆಯನ್ನು ಕೂಡ ನೀವು ಗಮನಿಸಬೇಕಾಗಿದೆ.
ಮಂಗಳೂರು ಸಮಾಚಾರ 1844(13ನೇ ಸಂಚಿಕೆ)
ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ ಮೂವರು ಬ್ರಾಹ್ಮಣರು, ಕ್ರೈಸ್ತ ಮತವನ್ನು ಅವಲಂಬಿಸಿದಾಗ ಮಂಗಳೂರಲ್ಲಿ ತುಂಬಾ ಗಲಾಟೆಯಾಯಿತು. ಬಾಷೆಲ್ ಮಿಶನ್ನಿನ ಪ್ರಥಮ ಮತಾಂತರ ಕಾರ್ಯವಿದು.
ಅವರನ್ನು ಹಿಂದೂ ಧರ್ಮಕ್ಕೆ ತಿರುಗಿಸಬೇಕೆಂದು ಊರವರು ತುಂಬಾ ಪ್ರಯತ್ನ ಮಾಡಿದವರಾದರೂ ಮತಾಂತರ ಹೊಂದಿದ್ದ ಈ ತರುಣರು ವಿಮುಖರಾಗಲಿಲ್ಲವಂತೆ. ಆಗ ‘‘ಈ ದುಷ್ಟ ಜನರು ಊರಲ್ಲಿ ಏನಾದರೂ ಗುಬಾರು ಎಬ್ಬಿಸಬೇಕೆಂಬ ಉಮೇದಿನಿಂದ ಮುಸಲ್ಮಾನದವರಿಗೆ ಅತೀ ವಿರೋಧವಾಗಿರುವಂಥ ಸೌಹಾರ್ದ ಹಂದಿಯನ್ನು ರಾತ್ರಿಯಲ್ಲಿ ಕೊಂದು ಹಾಕಿದರು. ಆಗ ಜಿಲ್ಲಾ ಮೆಜಿಸ್ಟ್ರೇಟ್ ಸಾಹೇಬನು ಕೂಡಲೇ ಈ ರೀತಿಯ ಪ್ರಕಟನೆಯನ್ನು ಹೊರಡಿಸಿದನು.
ಮುಸಲ್ಮಾನ ಜನರಿಗೆ ಚಾಳಿಸುವ ಇರ್ಯಾದೆಯಿಂದ ಈ ಕೆಟ್ಟ ಕತ್ಯ ಮಾಡಿರುತ್ತಾರೆ ಎಂಬುದರಲ್ಲಿ ಏನೂ ಅನುಮಾನವಿಲ್ಲ. ಈ ವಿಷಯದಲ್ಲಿ ಕೂಲಂಕುಷ ತನಿಖೆ ಕೂಡ್ಲೆ ಮಾಡಲಾದಿತ್ತು. ಈ ದುಷ್ಕೃತ್ಯ ನಡೆಸಿದ ವಾ ತಲಾಕಿಗೆ ಸಾಕಾಗುವ ವರ್ತಮಾನ ಯಾರಾದರೂ ಕೊಟ್ಟಿದ್ದಾದರೆ, ಅಂಥ ಮನುಷ್ಯನಿಗೆ ಐದು ನೂರು ರೂಪಾಯಿ ಕೊಡಲಾದೀತು. ಆದುದರಿಂದ ಮುಸಲ್ಮಾನ ಯಾವುತ್ತೂ ಜನರು ದುರಾಲೋಚನೆ ಜನರ ದಗೆ ಬೋಧನೆಗೆ ಒಳಗಾಗದೆ ನಿಧಾನದಲ್ಲಿ ಇರಬೇಕು ಎಂತ ಅಪೇಕ್ಷಿಸುತ್ತೇವೆ, ಈ ಪ್ರಕಾರ ಸಮಾಧಾನ ಮಾಡದೆ ತಂಟೆ ಏನಾದರೂ ನಡೆಸಿದ್ದಾದರೆ ವ್ಯರ್ಥ ಬಹಳ ದಣಿಕೊಳ್ಳಬೇಕಾದೀತು.
ಮೆಜಿಸ್ಟ್ರೇಟ್ ಬ್ಲೆಅರ್ ಸಾಹೇಬರು ಅಷ್ಟಕ್ಕೆ ಮುಗಿಸದೆ, ಮುಸಲ್ಮಾನರ ಹಾಗೂ ಮಾಪಿಳ್ಳೆಯವರ ಮುಖಂಡರನ್ನು ಕರೆದು, ಅಪರಾಧಿಯನ್ನು ಎಂತಿದ್ದರೂ ಹುಡುಕುವೂದಾಗಿಯೂ, ಆ ಕೆರೆಯನ್ನೂ ಸರಕಾರದ ವದಿಯಿಂದ, ಸಾಪು ಮಾಡಿಸಿ ಕೊಡುವುದಾಗಿಯೂ ಆಶ್ವಾಸನವಿತ್ತರು.

ಮಿಶನರಿಗಳಿಂದ ಮತಾಂತರ ಅಂದೂ ನಡೆದಿದೆ. ಇಂದೂ ನಡಯುತ್ತಿದೆ, ಮುಂದೆಯೂ ನಡೆಯುತ್ತಿರುವುದು. ಉಳಿದೆಲ್ಲವರು ಮೂಖ ಪ್ರೇಕ್ಷಕರು.
ReplyDeleteನಮ್ಮ ಪೂರ್ವಜರ ಕನ್ನಡದ ಪರಿಚಯವಾಯಿತು
ReplyDelete