Tuesday, January 25, 2011

ಗೊತ್ತಾಗಲಿಲ್ಲ!

ನಾಲ್ಕು ಸಾಲಿನ ಬರಹವೊಂದು ಇಲ್ಲಿದೆ. ಇದನ್ನು ಕತೆಯೆಂದು ಕರೆಯಬಹುದಾ?
ಅವರಿಬ್ಬರು ಜೊತೆಯಾಗಿ ನಮಾಝ್ ಮಾಡುತ್ತಿದ್ದರು.


ನಮಾಝ್‌ನ ಬಳಿಕ ಆತ ಹೇಳಿ
ದ ‘‘ನಮಾಝ್‌ನ ಸಂದರ್ಭದಲ್ಲಿ ನೀನು ನಿಂತ ಭಂಗಿ, ಕೈ ಕಟ್ಟಿದ ರೀತಿ ಯಾವುದೂ ಸರಿ ಇರಲಿಲ್ಲ’’

ಈತ ವಿನೀತನಾಗಿ ಉತ್ತರಿಸಿದ ‘‘ಹೌದಾ!? ನನ್ನ ಗಮನವೆಲ್ಲ ನನ್ನ ಮುಂದಿದ್ದ ದೇವರೆಡೆಗಿತ್ತು. ಆದುದರಿಂದ ನನಗೆ ಗೊತ್ತಾಗಲಿಲ್ಲ. ದಯವಿಟ್ಟು ಕ್ಷಮಿಸು’’

1 comment: