Wednesday, January 12, 2011

ಗರ್ಭಪಾತ

ನಾಲ್ಕೇ ನಾಲ್ಕು ಸಾಲಿನ ಈ ಕತೆಯನ್ನು ಗುಜರಿ ಅಂಗಡಿಯ ತಕ್ಕಡಿಯಲ್ಲಿಟ್ಟಿದ್ದೇನೆ. ತೂಗಿ ನೋಡುವ ಕೆಲಸ ನಿಮ್ಮದು.

ಅವಳು ಗರ್ಭಿಣಿ. ನೋವಿನಿಂದ ಒದ್ದಾಡುತ್ತಿದ್ದಳು.
ಆಕೆಯ ಗಂಡನೂ ಗರ್ಭ ಧರಿಸಿದ್ದಾನೆ. ಹೆರಿಗೆಯ ನಿರೀಕ್ಷೆಯಲ್ಲಿ ಒದ್ದಾಡುತ್ತಿದ್ದ.
ಆಕೆ ಹೆತ್ತಳು. ಗಂಡನ ಕಿವಿಗೆ ಬಿತ್ತು ‘‘ಮಗು ಹೆಣ್ಣು’’
ಅವನಿಗೆ ‘ಗರ್ಭಪಾತ’ವಾಯಿತು.

1 comment:

  1. ಬಸೀರ್ ಸರ್,

    ಮೊದಲು ಇದನ್ನು ಅವಧಿಯಲ್ಲಿ ನೋಡಿದೆ ಖುಷಿಯಾಯ್ತು. ನಾಲ್ಕುಸಾಲಿನಲ್ಲಿ ಎಷ್ಟೇಲ್ಲಾ ಹೇಳಬಹುದು ಅಂತ ಚೆನ್ನಾಗಿದೆ.

    ಬಿಡುವಾದರೆ ನನ್ನ ಛಾಯಾಕನ್ನಡಿ ಬ್ಲಾಗಿಗೆ ಬೇಟಿಕೊಡಿ.
    ಶಿವು.ಕೆ

    ReplyDelete