Wednesday, March 18, 2015

ಒಬಾಮ ಮಯ ಈ ಜಗ ಹೃದಯ


ರಸ ಋಷಿ ಕುವೆಂಪು ಅವರ ಕ್ಷಮೆ ಕೋರಿ ..........

ಒಬಾಮ ಮಯ ಈ ಜಗ ಹೃದಯ ಏತಕೆ ಭಯ ಮಾಣೋ 
ಸೂರ್ಯೋದಯ ಚಂದ್ರೋದಯ ದೊಡ್ಡಣ್ಣನ ದಯ ಕಾಣೋ

ಚಹಾ ಇದು ಬರಿ ಚಹವಲ್ಲವೋ 
ಅಣು ಒಪ್ಪಂದದ ಕೃಪೆ ಕಾಣೋ 
ಈ ಒಪ್ಪಂದವು ಬರಿ ಸ(ಸಿ)ಹಿ ಅಲ್ಲವೋ ಆ ಭ್ರಾಂತಿಯ ಮಾಣೋ

ಒಬಾಮ ವದನವು ಮೋದಿ ಸದನವು 
ಬರಿ ಕಣ್ಣದು ಮಣ್ಣು 
ಗಣರಾಜ್ಯದ ಸ್ವಾಯತ್ತೆಗೆ 
ಶವ ಮುಖದ ಕಣ್ಣು

ಉದಯದೊಳೇನ್ ಅಮೇರಿಕವ ಕಾಣ್ 
ಅದೇ ಅಭಿವ್ರುದ್ಧಿಯ ಹಣ್ಣೋ 
ಒಬಾಮ ಭಜನೆಗೆ ಜನ ಕುರುಡರೋ 
ಶವ ಕಾವ್ಯದ ಕಣ್ಣೋ

No comments:

Post a Comment