ಕಾಮ್ರೇಡ್ ಲಿಂಗಪ್ಪ ಜೊತೆ ನಾನು |
ಅದು ಬಿಜೆಪಿ ರಾಜ್ಯವನ್ನು ಆಳುತ್ತಿದ್ದ ಸಂದರ್ಭ. ಕೆಲವು ಸಾಹಿತಿಗಳನ್ನು, ಹೋರಾಟಗಾರರನ್ನು ಅಂದಿನ ಬಿಜೆಪಿ ಸರಕಾರ "ನಕ್ಸಲ್ ಬೆಂಬಲಿಗರು" ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭ. ಪಟ್ಟಿಯಲ್ಲಿ ಕಡಿದಾಳ್ ಶಾಮಣ್ಣರ ಹೆಸರು ಇತ್ತು. ಪಟ್ಟಿಯನ್ನು ಓದಿದ ಲಿಂಗಪ್ಪ ಸಿಕ್ಕಾಪಟ್ಟೆ ಕೆರಳಿದರಂತೆ. ಯಾಕೆಂದರೆ ಪಟ್ಟಿಯಲ್ಲಿ ಲಿಂಗಪ್ಪ ಅವರ ಹೆಸರೇ ಇದ್ದಿರಲಿಲ್ಲ. ತನ್ನನ್ನು ಘಂಟಾ ಘೋಷವಾಗಿ ಕ್ರಾಂತಿಕಾರಿ ಎಂದು ಸ್ವಯಂ ಘೋಷಿಸಿಕೊಂಡಿದ್ದ ಲಿಂಗಪ್ಪ ಅವರಿಗೆ ಸಿಕ್ಕಾ ಪಟ್ಟೆ ಅವಮಾನ ಆಗಿತ್ತು . ಒಂದು ದಿನ ಶಿವಮೊಗ್ಗಕ್ಕೆ ಅಂದಿನ ಸಚಿವ ಈಶ್ವರಪ್ಪ ಆಗಮಿಸಿದಾಗ ಅವರನ್ನು ತಡೆದು ನಿಲ್ಲಿಸಿದ ಲಿಂಗಪ್ಪ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡರಂತೆ. ಅವರನ್ನು ಸಮಾಧಾನಿಸಲು ವಿಫಲರಾದ ಈಶ್ವರಪ್ಪ ಕೈ ಮುಗಿದು ‘‘ಲಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ಲಿಂಗಪ್ಪ ನಿರುಮ್ಮಳರಾದರಂತೆ.
ಇತ್ತೀಚಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಪ್ರಕರಣ ದಾಖಲಿಸೋದು ಕಂಡು ಲಿಂಗಪ್ಪ ಯಾಕೋ ನೆನಪಾದರು
"ಇತ್ತೀಚಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಪ್ರಕರಣ ದಾಖಲಿಸೋದು ಕಂಡು ಲಿಂಗಪ್ಪ ಯಾಕೋ ನೆನಪಾದರು".
ReplyDeleteKendra sarakara tanna viruddha alla. Deshada viruddha matanaadidavara viruddha deshadrohi prakarana dakhalisuttide. Eneno tiruchi bareebedi swami.
Raejsh Naik.