Friday, August 28, 2015

ಹೊಳೆದದ್ದು ಹೊಳೆದಂತೆ-9

1
ಸತ್ಯವನ್ನು ಸಾರ್ವಜನಿಕವಾಗಿ ಹೇಳೋದಕ್ಕೆ ಧೈರ್ಯ ಬೇಕು. ತಾನು ಹೇಳಿದ್ದು ಸುಳ್ಳು ಎನ್ನೋದು ಅರಿವಾದಾಗ ಸಾರ್ವಜನಿಕವಾಗಿ ಅದನ್ನು ತಿದ್ದಿಕೊಳ್ಳೋದಕ್ಕೆ ದುಪ್ಪಟ್ಟು ಧೈರ್ಯ ಬೇಕು 
2
ಬದುಕು ಎಂದರೆ ಏನು? - ಇನ್ನೇನೂ ಅಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲ ತುಪ್ಪಕ್ಕಾಗಿ ಹುಡುಕಾಡೋದು
3
ಟೀಕೆ, ವಿಮರ್ಶೆ, ಆಕ್ರೋಶ ಬೆಂಕಿಯ ಕುಲುಮೆಯಿಂದ ಹೊರ ಬರೋದು ನಿಜ. 
ಆದರೆ ಅದು ತಾಳ್ಮೆ, ವಿವೇಕದ ತಿಳಿ ನೀರಿನಲ್ಲಿ ಮುಳುಗೆದ್ದಾಗಷ್ಟೇ ಸ್ಪಷ್ಟ ರೂಪವೊಂದನ್ನು ಪಡೆಯ ಬಲ್ಲದು.
4
ದೇವರ ಮೇಲೆ ಭರವಸೆಯಿಟ್ಟು ಸುಮ್ಮನಿರದಿರಿ 
ದೇವರು ನಮ್ಮ ಮೇಲೆ ಭರವಸೆ ಇಟ್ಟು ಈ ಭೂಮಿಯನ್ನು ಸೃಷ್ಟಿಸಿದ್ದಾನೆ !
5
ದೇವರಿದ್ದಾನೆ ಎನ್ನೋದು ನಂಬಿಕೆ ಎಂದಾದರೆ, ದೇವರಿಲ್ಲ ಎನ್ನೋದು ಒಂದು ನಂಬಿಕೆಯೇ ಆಗಿದೆ. 
6
ವಿಧವೆ ಎನ್ನೋದು ಹೆಣ್ಣಿನ ನಡುವೆ ಬ್ರಾಹ್ಮಣ ಧರ್ಮ ಸೃಷ್ಟಿಸಿದ ಇನ್ನೊಂದು ಜಾತಿ.
7
ಗೆಡ್ಡೆ ಗೆಣಸು ಅಗೆಯುವ ಕಾಲದಲ್ಲಿ ಯಾರೂ ಬಡವರಿರಲಿಲ್ಲ. 
ಯಾವಾಗ ಚಿನ್ನ ಅಗೆಯಲಾರಂಭಿಸಿದನೋ, ಮನುಷ್ಯರೊಳಗೆ ಬಡವ ಹುಟ್ಟಿದ. 
8
ದೇವರು ಶ್ರೀಮಂತವಾದ ಭೂಮಿಯನ್ನು ಸೃಷ್ಟಿಸಿದ. ಮನುಷ್ಯ ದೇವರಿಗೆ ಸವಾಲು ಹಾಕುವವನಂತೆ ಬಡವನನ್ನು ಸೃಷ್ಟಿಸಿದ 

1 comment:

  1. ಏನು? ಬಡವನನ್ನು ಮನುಷ್ಯ ಸೃಷ್ಟಿಸಿದ್ದೇ?! ಛೇ ಛೇ!! ನಾನೆಲ್ಲೋ ವಿಧವೆಯರ ಜಾತಿಯಂತೆ ಬಡವರ ಜಾತಿಯನ್ನೂ ಬ್ರಾಹ್ಮಣ ಧರ್ಮವೇ ಸೃಷ್ಟಿಸಿದ್ದಿರಬೇಕು ಅಂತ ತಿಳಿದಿದ್ದೆ. ತಮ್ಮ ಸ್ಪಷ್ಟೀಕರಣ ಬುದ್ಧಿಗೆ ಸಲಾಂ.

    ಅಂದಹಾಗೆ ಬುರ್ಖಾದೊಳಗೆ ತಳ್ಳಲ್ಪಟ್ಟವರ ಜಾತಿಯನ್ನೂ ಬ್ರಾಹ್ಮಣ ಧರ್ಮವೇ ಸೃಷ್ಟಿಸಿದ್ದಿರಬೇಕಲ್ಲವೇ?

    ಹೊಗಲಿ, ಅಲ್ಲಿಗೇ ಯಾಕೆ ನಿಲ್ಲಿಸಬೇಕು, ಎಲ್ಲವುದೂ ಬ್ರಹ್ಮಸೃಷ್ಟಿ ಎನ್ನುವ ಬದಲು ಎಲ್ಲ್ಲವುದೂ ಬ್ರಾಹ್ಮಣ ಧರ್ಮದ ಸೃಷ್ಟಿ ಅಂತ ಒನ್ಸೆಂಡ್ಫರಾಲ್ ಘೋಷಿಸಿಬಿಟ್ಟರಾಯ್ತಲ್ಲವೇ?

    ಕೊನೆಗೆ ಇಲ್ಲಿ ಚಿಮ್ಮುತ್ತಿರುವ ವಾಗ್ವೈಭವದ ಸುಳ್ಳಾಡುವ ಸಾಹಿತಿಯಾದ ಪೊಗರು ಯಾರ ಸೃಷ್ಟಿ ಅನ್ನುವುದನ್ನೂ ಸ್ಪಷ್ಟೀಕರಿಸಿದರೆ ಈ ಪಾಳುಬಿದ್ದ ಸಮಾಜಕ್ಕೆ ತಮ್ಮಿಂದ ಮಹದುಪಕಾರವಾದಂತಾಗುತ್ತದೆ

    ReplyDelete