Sunday, November 20, 2011

ಸಿರಿಸಂಪಿಗೆಯ ನೆನಪು

ಈ ಗ್ರೂಫ್ ಫೋಟೋದಲ್ಲಿ ಹಲ್ಲು ಕಿರಿಯುತ್ತಿರುವ ಜೋಕರ್ ಒಬ್ಬ(ಬಲಭಾಗದಲ್ಲಿ) ಇದ್ದಾನಲ್ಲ, ಅದು ನನ್ನ ಫೋಟೋ. ಸುಮಾರು 15 ವರ್ಷಗಳ ಹಿಂದೆ ಮುಂಬೈಯಲ್ಲಿ ಆಡಿದ ಚಂದ್ರಶೇಖರ ಕಂಬಾರ ಅವರ ಸಿರಿಸಂಪಿಗೆ ನಾಟಕದಲ್ಲಿ ಅವಳಿ-ಜವಳಿ ಹಾಸ್ಯಗಾರ ಪಾತ್ರದಲ್ಲಿ ನಾನು ಜವಳಿ ಪಾತ್ರ ವಹಿಸಿದ್ದೆ. ಅವಳಿ ಪಾತ್ರವನ್ನು ನನ್ನ ಗೆಳೆಯ ನವೀನ್ ಸುನಗ ವಹಿಸಿದ್ದರು. ಅವರೀಗ ನಾಟಕ, ಸಿನಿಮ ಅಂತ ಬಿಸಿಯಾಗಿದ್ದಾರೆ. ಸಿರಿಸಂಪಿಗೆ ನಾಟಕದ ರಾಜಕುಮಾರಿ ಪಾತ್ರದಲ್ಲಿ ಹಾ.ಮ. ಕನಕ (ಹಸಿರು ಸೀರೆ ಉಟ್ಟು ರಾಜಕುಮಾರಿ ತರ ಮುದ್ದಾಗಿದ್ದಾರಲ್ಲ, ಅವರೇ,) ನಟಿಸಿದ್ದರು. ಸುರೇಶ ಹಾನಗಲ್ಲಿ ಈ ನಾಟಕವನ್ನು ನಿರ್ದೇಶಿಸಿದ್ದರು. (ಕುಳಿತ ಗಡ್ಡಧಾರಿ ಮೂಗಿಗೆ ಕೈ ಇಟ್ಟಿದ್ದಾರಲ್ಲ ಅವರೇ). ಕೈಯಲ್ಲಿ ಮಗುವನ್ನು ಹಿಡಿದು ಎಡಭಾಗದಲ್ಲಿ ನಿಂತಿದ್ದಾರಲ್ಲ, ಅವರು ರಂಗಕರ್ಮಿ ಗಿರಿಧರ್ ಕಾರ್ಕಳ್, ಈಗವರು ಮೈಸೂರಲ್ಲಿದ್ದಾರೆ.

2 comments:

  1. ಚೆನ್ನಾಗಿದೆ ಬಷೀರ್ ಭಾಯ್.. ನಿಮ್ಮ ನಾಟಕರಂಗದ ಪಯಣ ಹೀಗೇ ಮುಂದುವರಿಯಲೆಂದು ಹಾರೈಸುವೆ :-)

    ReplyDelete