ದೇವರ 
ಇರವು ಸ್ಪಷ್ಟ ಗೊಳ್ಳುತ್ತಾ ಹೋಗೋದು ಯಾವುದೇ ಧರ್ಮಗುರು ಅಥವಾ ಧರ್ಮ ಗ್ರಂಥಗಳಿನ್ದಲ್ಲ. 
ನಮ್ಮ ನಮ್ಮ ಬದುಕಿನ ಅನುಭವಗಳೇ ಅವನ ಇರವಿನ ಎಡೆಗೆ, ಅವನ ಅರಿವಿನ ಎಡೆಗೆ  ನಮ್ಮನ್ನು 
ತಲುಪಿಸುತ್ತದೆ. ಈ ಕಾರಣದಿಂದಲೇ ದೇವರ ಅನುಭವ ಜನರಿಂದ ಜನರಿಗೆ ಭಿನ್ನವಾಗಿರುತ್ತದೆ. 
ನಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಸುಖ, ಸಂಕಟ ಗಳಲ್ಲೂ ಕೆಲವು ಸಂಕೇತಗಳು, ಸೂಚನೆಗಳು 
ಇರುತ್ತವೆ. ಕಿವಿ, ಕಣ್ಣು, ಮೂಗು, ಹೃದಯ  ತೆರೆದು ಅದನ್ನು ಆಲಿಸುವ ಸಹನೆ, ವಿನಯ 
ನಮ್ಮಲ್ಲಿದ್ದರೆ ಆ ಭಾಷೆ ನಮಗೆ ನಿಧಾನಕ್ಕೆ ಅರ್ಥವಾಗ ತೊಡಗುತ್ತದೆ.
 
 
No comments:
Post a Comment