Monday, May 19, 2014

ಗಾಂಧಿಯಿಂದ ಮೋದಿಗೊಂದು ಪತ್ರ....!

ಮಹಾತ್ಮ ಗಾಂಧೀಜಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರು ಭಾವೀ ಪ್ರಧಾನಿಮಂತ್ರಿ ನರೇಂದ್ರಮೋದಿಗೆ ಬರೆದಿರುವ ಬಹಿರಂಗ ಪತ್ರ ಇದು. ದಿ ಹಿಂದೂ ಪತ್ರಿಕೆಯಲ್ಲಿ ಬಂದಿರುವ ಈ ಬರಹವನ್ನು ಕನ್ನಡಕ್ಕಿಳಿಸಲಾಗಿದೆ. ಗೋಪಾಲಕೃಷ್ಣ ಗಾಂಧಿ ಇವರು ಮಾಜಿ ಆಡಳಿತಾಧಿಕಾರಿ ಹಾಗೂ ರಾಜತಾಂತ್ರಿಕರಾಗಿದ್ದರು. 2004-2009ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹಾಗೂ 2005-2006ರಲ್ಲಿ ಬಿಹಾರದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಆತ್ಮೀಯ ನಿಯೋಜಿತ ಪ್ರಧಾನಿಯವರೇ,
  ನನ್ನ ಹತ್ಪೂರ್ವಕ ಅಭಿನಂದನೆಗಳೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.ಆದರೆ ಈ ಅಭಿನಂದನೆಗಳನ್ನು ನನಗೆ ಅಷ್ಟು ಸುಲಭವಾಗಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನೀವು ಈಗ ತಲುಪಿರುವ ಈ ಅತ್ಯುನ್ನತ ಹುದ್ದೆಯಲ್ಲಿ ನಿಮ್ಮನ್ನು ಕಾಣಬಯಸದ ವ್ಯಕ್ತಿಗಳಲ್ಲಿ ನಾನೂ ಒಬ್ಬನು.ನೀವು ಪ್ರಧಾನಿಯಾಗಲಿದ್ದರೆಂದು ಕೋಟ್ಯಾಂತರ ಮಂದಿ ಭಾವಪರವಶರಾಗಿದ್ದಾರೆ. ವಾಸ್ತವಿಕವಾಗಿ ಇನ್ನೂ ಹಲವು ಕೋಟ್ಯಂತರ ಮಂದಿ ದುಗುಡದಲ್ಲಿದ್ದಾರೆಂಬುದು ನಿಮಗೆ ಎಲ್ಲರಿಗಿಂತಲೂ ಹೆಚ್ಚು ಚೆನ್ನಾಗಿ ಗೊತ್ತಿದೆ.
   ನೀವು ಅಲ್ಲಿಗೆ( ಪ್ರಧಾನಿ ಪದವಿಯೆಡೆಗೆ) ಮುನ್ನಡೆಯುತ್ತಿದ್ದೀರಿ ಎಂದು ಹಲವು ಮಂದಿ ಹೇಳಿದರಾದರೂ, ತೀರಾ ಇತ್ತೀಚಿನವರೆಗೂ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಜವಾಹರಲಾಲ್ ನೆಹರೂ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ಇನ್ನೋರ್ವ ಗುಜರಾತಿ ಮೊರಾರ್ಜಿ ದೇಸಾಯಿ ಮತ್ತು ನಿಮ್ಮ ಅಚ್ಚುಮೆಚ್ಚಿನ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿ ಆಸೀನರಾಗಿದ್ದ ಈ ಪೀಠದಲ್ಲಿಯೇ ನೀವೂ ಕುಳಿತುಕೊಳ್ಳಲಿದ್ದೀರಿ. ನೀವು ಈ ಸ್ಥಾನವನ್ನೇರುವುದನ್ನು ಬಯಸದವರು, ನೀವು ಅಲ್ಲಿರುವಿರೆಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಈ ಅಪರೂಪದ ಸುಯೋಗವು ನಿಮಗೆ ದೊರೆತಿರುವ ಬಗ್ಗೆ ನನಗೆ ಭಾರೀ ಕಳವಳವಾಗಿರುವ ಹೊರತಾಗಿಯೂ ನಿಮ್ಮಂತಹ ಅತ್ಯಂತ ಅವಕಾಶವಂಚಿತ ಸಮುದಾಯ ಹಾಗೂ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ಭಾರತದ ಪ್ರಧಾನಿಯಾಗುವುದನ್ನು ಗೌರವಿಸುತ್ತೇನೆ. ಇದು ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಅಶಯವನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಈಡೇರಿಸುತ್ತದೆ.


ದೇಶದ ಚಿಂತನೆಯ ಮರುಆವಲೋಕನ
ನೀವು ಓರ್ವ ‘ಚಾಯ್‌ವಾಲಾ’ ಆಗಿದ್ದೀರೆಂದು ಕೆಲವರು ಅತ್ಯಂತ ಒರಟಾಗಿ ಹಾಗೂ ಕೀಳಾಗಿ ಮಾತನಾಡಿದಾಗ ನನಗೆ ಹೊಟ್ಟೆ ತೊಳಸಿದಂತಾಗುತ್ತಿತ್ತು. ಜೀವನೋಪಾಯಕ್ಕಾಗಿ ಚಾ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಭಾರತ ಸರಕಾರದ ನೇತತ್ವ ವಹಿಸಲು ಸಮರ್ಥನಾಗುವುದು ಎಷ್ಟು ದೊಡ್ಡ ಅದ್ಭುತವೆಂದು ನನ್ನಲ್ಲೇ ನಾನು ಹೇಳಿಕೊಳ್ಳುತ್ತಿದ್ದೆ. ಓರ್ವನ ಚಮಚಾ ಆಗುವ ಬದಲು ಹಲವರಿಗೆ ‘ಚಹಾ ಪಾತ್ರೆ’ ಆಗುವುದು ಎಷ್ಟೋ ಒಳ್ಳೆಯದು.
  ಆದರೆ, ಶ್ರೀಮಾನ್ ಮೋದಿಯವರೇ, ನೀವು ಭಾರತದ ಅತ್ಯುನ್ನತ ಪದವಿಯನ್ನೇರಿರುವುದರಿಂದ ಕೋಟ್ಯಂತರ ಭಾರತೀಯರು ಯಾಕೆ ಆತಂಕಗೊಂಡಿದ್ದಾರೆಂಬ ವಿಷಯದೆಡೆಗೆ ಬರುತ್ತೇನೆ. 2014ರ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ಮೋದಿಯ ಪರವಾಗಿ ಅಥವಾ ಮೋದಿಯ ವಿರುದ್ಧ ಎಂಬ ನಿಲುವಿನೊಂದಿಗೆ ಮತಚಲಾಯಿಸಿದ್ದರು. ‘‘ನರೇಂದ್ರ ಮೋದಿ ದೇಶದ ಅತ್ಯುತ್ತಮ ಸಂರಕ್ಷಕರೇ ಅಥವಾ ಅಲ್ಲವೇ?’’ ಎಂಬುದೇ ಈ ಚುನಾವಣೆಯ ವಿಷಯವಾಗಿತ್ತು.ನೀವು ದೇಶದ ಅತ್ಯುತ್ತಮ ಸಂರಕ್ಷಕರೆಂಬುದಾಗಿ ನಮ್ಮ ಶೇ.31ರಷ್ಟು (ಪಕ್ಷವು ಚುನಾವಣೆಯಲ್ಲಿ ಪಡೆದಿರುವ ಮತಗಳ ಪಾಲು) ಮತದಾರರು ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ನೀವು ಸಫಲರಾಗಿರುವುದರಿಂದ ಬಿಜೆಪಿಯು ಸ್ಥಾನಗಳನ್ನು ಗೆದ್ದಿತು. ಆದರೆ, ಶೇ.69ರಷ್ಟು ಮತದಾರರು ನಿಮ್ಮನ್ನು ಅವರ ರಖ್‌ವಾಲಾ(ರಕ್ಷಕ)ರನ್ನಾಗಿ ನೋಡಬಯಸುತ್ತಿಲ್ಲ.
ಅಲ್ಪಸಂಖ್ಯಾತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು
ಏಕತೆ ಮತ್ತು ಸ್ಥಿರತೆಯ ಮಂತ್ರವನ್ನು ಜಪಿಸುವಾಗ, ನೀವು ಆಗಾಗ್ಗೆ ಸರ್ದಾರ್ ಪಟೇಲ್‌ರ ಹೆಸರು ಮತ್ತು ವ್ಯಕ್ತಿತ್ವದೆಡೆಗೆ ಹೊರಳುತ್ತೀರಿ. ನಿಮಗೆ ಗೊತ್ತಿರುವಂತೆ, ಸರ್ದಾರ್ ಪಟೇಲ್ ಅವರು ಸಂವಿಧಾನರಚನಾ ಅಸೆಂಬ್ಲಿಯ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷತೆಯನ್ನು ರಚಿಸಿದ್ದರು. ಒಂದು ವೇಳೆ ಭಾರತದ ಸಂವಿಧಾನವು ಭಾರತದ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಖಾತರಿಯನ್ನು ನೀಡುತ್ತಿದೆಯೆಂದಾದರೆ ಅದಕ್ಕಾಗಿ ಸರ್ದಾರ್ ಪಟೇಲ್ ಅವರಿಗೆ ಕತಜ್ಞತೆ ಸಲ್ಲಿಸಲೇಬೇಕಾಗುತ್ತದೆ. ಹಾಗೆಯೇ ಸಮಿತಿಯ ಇತರ ಸಸ್ಯೆಯಾದ ಕಪೂರ್‌ತಲಾದ ಸಿಖ್ಖ್ ಒಬ್ಬರ ಕ್ರೈಸ್ತ ಪುತ್ರಿಯಾದ ರಾಜ್‌ಕುಮಾರಿ ಅಮತ್ ಕೌರ್‌ಗೂ ಕತಜ್ಞತೆ ವ್ಯಕ್ತಪಡಿಸಬೇಕು. ಒಟ್ಟಾರೆಯಾಗಿ, ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನದ ಆಶಯವನ್ನು ಮೋದಿ ಬದಲಾಯಿಸಕೂಡದು,ತಿರುಚಬಾರದು ಅಥವಾ ಕಲಬೆರಕೆಗೊಳಿಸಕೂಡದು. ಆ ಸಮಿತಿಯಲ್ಲಿ ಬಲಿಷ್ಠಸರ್ದಾರ್ ಪಟೇಲ್ ಏನು ಹೇಳಿದ್ದರೆಂಬುದನ್ನು ನೀವು ಓದುವುದು ಒಳ್ಳೆಯದು.
ಯಾಕೆ ಅಲ್ಲಿ ಅಷ್ಟೊಂದು ಭಯಭೀತಿಗಳು ನೆಲೆಸಿವೆ? ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ?
  ಯಾಕೆಂದರೆ ನೀವು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ ಭಾರತದ ಜನತೆಯನ್ನು ತನ್ನೊಂದಿಗೆ ಕೊಂಡೊಯ್ಯುವಂತಹ ಪ್ರಜಾಪ್ರಭುತ್ವವಾದಿಯೊಬ್ಬನ ಮಾತನ್ನು ಕೇಳಲು ಅವರು ಬಯಸುತ್ತಿದ್ದಾರೆಯೇ ಹೊರತು ಕಟ್ಟಾಜ್ಞೆಗಳನ್ನು ವಿಧಿಸುವ ಚಕ್ರವರ್ತಿಯ ಭಾಷಣವನ್ನಲ್ಲ. ಮೋದಿಯವರೇ ಅಲ್ಪಸಂಖ್ಯಾತರಲ್ಲಿ ಮರುಭರವಸೆಯನ್ನು ಮೂಡಿಸಿ. ‘‘ಅಭಿವದ್ಧಿ’’ ಎಂಬ ಪದವು ಭದ್ರತೆಗೆ ಪರ್ಯಾಯವಲ್ಲ. ‘‘ಖುರ್‌ಆನ್ ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್’’ ಬಗ್ಗೆ ಅಥವಾ ಅಂತಹದೇ ಪರಿಣಾಮವನ್ನು ಬೀರುವ ಇನ್ನಿತರ ಮಾತುಗಳನ್ನು ಆಡಿದ್ದೀರಿ. ಆಂತಹ ದಶ್ಯವು, ಅವರಲ್ಲಿ ಮರುಭರವಸೆಯನ್ನು ಮೂಡಿಸಲಾರದು. ಏಕೆಂದರೆ ಅದಕ್ಕೆ ವಿರುದ್ಧವೊಂದು ಇನ್ನೊಂದು ದಶ್ಯವು ಅವರನ್ನು ಭಯಗ್ರಸ್ತಗೊಳಿಸಿದೆ. ರೌಡಿಯೊಬ್ಬ ಒಂದು ಕೈಯಲ್ಲಿ ಹಿಂದೂ ಪೌರಾಣಿಕ ಡಿವಿಡಿ, ,ಇನ್ನೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಅಡ್ಡಾಡುತ್ತಿರುವ ದಶ್ಯಗಳು ಅವರನ್ನು ಭೀತಿಗೊಳಿಸುತ್ತವೆ.
ಹಿಂದಿನ ದಿನಗಳಲ್ಲಿ, ಶಾಲಾಮುಖ್ಯೋಪಾಧ್ಯಾಯರು ತರಗತಿಯ ಕೊಠಡಿಯ ಮೂಲೆಯಲ್ಲಿ ಉಪ್ಪನ್ನು ಸವರಿದ ಬೆತ್ತವನ್ನು ಇರಿಸುತ್ತಿದ್ದರು. ಯಾವ ವಿದ್ಯಾರ್ಥಿಗೂ ತನಗೆ ಬೇಕಾದರೆ ಹೊಡೆಯಲು ತನಗೆ ಸಾಮರ್ಥ್ಯವಿದೆಯೆಂಬುದನ್ನು ನೆನಪಿಸುವ ಈ ದಶ್ಯವು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕೆಲವು ತಿಂಗಳ ಹಿಂದೆ ನಡೆದ, ಕನಿಷ್ಠ 42 ಮಂದಿ ಮುಸ್ಲಿಮರು ಹಾಗೂ 20 ಮಂದಿ ಹಿಂದೂಗಳನ್ನು ಬಲಿತೆಗೆದುಕೊಂಡ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರಕ್ಕೆ ಕಾರಣವಾದ ಮುಝಫ್ಫರ್‌ನಗರ್ ಗಲಭೆಯ ನೆನಪುಗಳೂ ಕೂಡಾ ಈ ಉಪ್ಪು ಸವರಿದ ಬೆತ್ತವನ್ನು ನೆನಪಿಸುತ್ತದೆ. ‘‘ಜಾಗ್ರತೆ. ಇದನ್ನು ನಾವು ನಿಮಗೆ ಮಾಡಬಹುದಾಗಿದೆ’’ ಎಂಬ ಈ ಬೆದರಿಕೆಯು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬದುಕುತ್ತಿರುವ ಎಲ್ಲರನ್ನೂ ಭಯಗೊಳಿಸುತ್ತದೆ.
  ಕೇವಲ ಮುಸ್ಲಿಮರು ಮಾತ್ರವಲ್ಲ, ಕಾಶ್ಮೀರಿ ಪಂಡಿತರು ಸೇರಿದಂತೆಭಾರತದಲ್ಲಿರುವ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲದೆ ಭಾರತ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಂಜಾಬ್‌ನಿಂದ ನಿರ್ವಸಿತರಾದ ಹಿಂದೂ ಹಾಗೂ ಸಿಖ್ಖರ ಮನದಲ್ಲೂ ಭಯ ನೆಲೆಸಿದೆ. ನೈಜವಾದ ಅಥವಾ ಪೂರ್ವಯೋಜಿತವಾದ ಪ್ರಚೋದನೆಯಿಂದ ಹಠಾತ್ತನೆ ಗಲಭೆ ಸ್ಫೋಟಿಸಬಹುದೆಂಬ ಭೀತಿಯಿಂದಲೇ ಅವರು ದಿನಗಳೆಯುತ್ತಿದ್ದಾರೆ. ದಲಿತರು, ಮಹಿಳೆಯರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಬದುಕಿನ ಪ್ರತಿ ನಿಮಿಷವನ್ನು ಅಪಮಾನ, ಶೋಷಣೆಯೊಂದಿಗೆ ಕಳೆಯುತ್ತಿದ್ದಾರೆ.ತಾರತಮ್ಯ,ಪೌರತ್ವವನ್ನು ತುಚ್ಛೀಕರಣಗೊಳಿಸುವುದು, ನೈತಿಕ ಸ್ಥೆೃರ್ಯವನ್ನು ಕೆಡಿಸುವ ಮೂಲಕ ನಿರಂತರವಾಗಿ ಅವರನ್ನು ಘಾಸಿಗೊಳಿಸುತ್ತಿದೆ.
ಸಂವಿಧಾನದ 370ನೆ ವಿಧಿ, ಸಮಾನನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮಮಂದಿರದಂತಹ ಸವಕಲು ಹಾಗೂ ಆಧಾರರಹಿತ ಬೇಡಿಕೆಗಳ ಬಗ್ಗೆ ನೀವು ಯಾವ ನಿಲುವನ್ನು ತೆಗೆದುಕೊಂಡಿದ್ದೀರಿ. ನಮ್ಮ ಉತ್ತರ ಹಾಗೂ ವಾಯವ್ಯ ಪ್ರಾಂತ್ಯದಲ್ಲಿರುವ ಹಿಂದೂ ನಿರಾಶ್ರಿತರು ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿರುವ ಮುಸ್ಲಿಂ ನಿರಾಶ್ರಿತರ ಬಗ್ಗೆ ನೀವು ನೀಡಿರುವ ಹೇಳಿಕೆಗಳು ಭಯವನ್ನು ಹುಟ್ಟಿಸುತ್ತವೆಯೇ ಹೊರತು ವಿಶ್ವಾಸವನ್ನು ಮೂಡಿಸುವುದಿಲ್ಲ. ಶ್ರೀಯುತ ಮೋದಿಯವರೇ ಈ ಸಾಮೂಹಿಕ ಭಯವು ಭಾರತದ ಗಣರಾಜ್ಯಕ್ಕೆ ಶೋಭೆ ತರುವಂತಹದ್ದಲ್ಲ.
 ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಪ್ರತ್ಯೇಕ ಭಾಗವಲ್ಲ. ಅವರು ಮುಖ್ಯವಾಹಿನಿಯಲ್ಲೇ ಮಿಳಿತವಾಗಿರುವವರು. ಯಾರೂ ಕೂಡ ಹಗ್ಗವನ್ನು ಸುಟ್ಟು ಬೂದಿ ಮಾಡಬಹುದು. ಆದರೆ ಬೂದಿಯಿಂದ ಹೊಸ ಹಗ್ಗವನ್ನು ತಯಾರಿಸಲು ಸಾಧ್ಯವಿಲ್ಲ.
   ನಿಮಗಾಗಿ ಐತಿಹಾಸಿಕ ವಿಜಯವೊಂದು ದೊರೆತಿದೆ. ಅದಕ್ಕಾಗಿ ನಿಮ್ಮನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಇಡೀ ಜಗತ್ತೇ ಅಚ್ಚರಿಪಟ್ಟಿರುವಂತಹ ಐತಿಹಾಸಿಕ ಇನ್ನಿಂಗ್ಸ್ ಒಂದು ಆರಂಭಗೊಂಡಿದೆ. ನಿಮ್ಮ ಬೆಂಬಲಿಗರಿಗೆ ಬೇಡದಿದ್ದರೂ, ಹಲವಾರು ಮಂದಿ ನೀವು ಅನಾವರಣಗೊಳ್ಳುವುದನ್ನು ಬಯಸುತ್ತಿದ್ದಾರೆ. ನೀವು ಅಪಾರ ಬುದ್ಧಿವಂತರು ಹಾಗೂ ಹಿಂದಿನ ತಲೆಮಾರಿನ ವ್ಯಕ್ತಿಯೊಬ್ಬರಿಂದ ಅಸಕ್ತಿಕರವಲ್ಲದ ಹಾಗೂ ಅಪ್ರಿಯವಾದ ಸಲಹೆಯನ್ನು ನೀವು ಇಷ್ಟಪಡದಿರಬಹುದು. ಆದರೆ ನಿಮ್ಮನ್ನು ಬೆಂಬಲಿಸಿದವರ ಋಣ ಸಂದಾಯ ಮಾಡಿ. ಅಷ್ಟೇ ಸಮಾನವಾಗಿ ನಿಮ್ಮನ್ನು ಬೆಂಬಲಿಸದವರ ವಿಶ್ವಾಸವನ್ನೂ ಗೆದ್ದುಕೊಳ್ಳಿ. ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಾಗ ನೀವು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಪ್ರತಿ ಪಕ್ಷಗಳನ್ನು ಕೇಳಿಕೊಳ್ಳಿ ಹಾಗೂ ಯಾವುದೇ ಬದಲಾವಣೆ ಮಾಡದೆ ಅದನ್ನು ಒಪ್ಪಿಕೊಳ್ಳಿ.ಪರಿಶಿಷ್ಟ ಜಾತಿ, ಬುಡಕಟ್ಟುಗಳು ಹಾಗೂ ಭಾಷಾ ಅಲ್ಪಸಂಖ್ಯಾತರ ಸಮಿತಿಯ ನೇಮಕದಲ್ಲೂ ಹಾಗೆಯೇ ನಡೆದುಕೊಳ್ಳಿ. ಮುಂದಿನ ಮಾಹಿತಿ ಆಯುಕ್ತ, ಸಿಎಜಿ, ಸಿವಿಸಿ ಮತ್ತಿತರ ಹುದ್ದೆಗಳ ನೇಮಕದಲ್ಲೂ ಆಯ್ಕೆ ಸಮಿತಿಯ ಸರಕಾರೇತರ ಸದಸ್ಯರ ಶಿಫಾರಸುಗಳು ಪಕ್ಷಪಾತರಹಿತವಾಗಿದ್ದರೆ, ಅದನ್ನು ಕ್ರೀಡಾಸ್ಫೂರ್ತಿಯೊಂದಿಗೆ ಪುರಸ್ಕರಿಸಿ. ನೀವು ಬಲಿಷ್ಠರಾಗಿದ್ದೀರಿ ಹಾಗೂ ಅಂತಹ ಅಪಾಯಗಳನ್ನು ಸಹಿಸಲು ನೀವು ಸಮರ್ಥರಿದ್ದೀರಿ.
ದಕ್ಷಿಣದ ಭಾರತದ ಪ್ರಾತಿನಿಧ್ಯದ ಕೊರತೆಯನ್ನು ನಿವಾರಿಸಿ
     ಶ್ರೀಯುತ ಮೋದಿಯವರೇ, ನಿಮ್ಮ ಅಖಿಲ ಭಾರತ ಮಟ್ಟದ ವರ್ಚಸ್ಸಿನಲ್ಲಿ ದಕ್ಷಿಣ ಪ್ರಾಂತ್ಯದ ಕೊರತೆ ಎದ್ದುಕಾಣುತ್ತದೆ. ನಿಮ್ಮ ವಿಜಯಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳು ನೀಡಿದ ಕೊಡುಗೆಯು, ಉತ್ತರ ಭಾರತದ ನಡುವೆ ಕಂದರವನ್ನು ಸಷ್ಟಿಸದಂತೆ ನೋಡಿಕೊಳ್ಳಿ. ದಯವಿಟ್ಟು ದಕ್ಷಿಣ ಭಾರತದಿಂದ ರಾಜಕೀಯ ಹಿನ್ನೆಲೆಯಿರದ ಆಂದರೆ ಪರಿಣಿತ ಸಮಾಜ ವಿಜ್ಞಾನಿ, ಪರಿಸರವಾದಿ, ಅರ್ಥಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೊಬ್ಬರನ್ನು ಉಪಪ್ರಧಾನಿಯಾಗಿ ನೇಮಿಸಿ. ನೆಹರೂ ಸಂಪುಟದಲ್ಲಿೆ ಷಣ್ಮುಖನ್ ಚೆಟ್ಟಿ, ಜಾನ್ ಮಥಾಯ್,ಸಿ.ಡಿ.ದೇಶಮುಖ್ ಹಾಗೂ ಕೆ.ಎಲ್.ರಾವ್ ಇದ್ದರು. ಅವರು ಕಾಂಗ್ರೆಸಿಗರಾಗಿರಲಿಲ್ಲ.ಅಷ್ಟೇಕೆ ಅವರು ರಾಜಕಾರಣಿಗಳೂ ಆಗಿರಲಿಲ್ಲ. ಇಂದಿರಾಗಾಂಧಿ ಸಂಪುಟದಲ್ಲಿ ಎಸ್.ಚಂದ್ರಶೇಖರ್ ಹಾಗೂ ವಿ.ಕೆ.ಆರ್.ವಿ. ರಾವ್ ಇದ್ದರು. ಯುಪಿಎ ಸರಕಾರವು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಪ್ರೊ.ಎಂ.ಎಸ್.ಸ್ವಾಮಿನಾಥನ್ ಅಥವಾ ಶ್ಯಾಮ್ ಬೆನೆಗಲ್ ಸದಸ್ಯರನ್ನಾಗಿ ಯಾಕೆ ನೇಮಿಸಲಿಲ್ಲವೆಂದು ನನಗೆ ಈಗಲೂ ಅರ್ಥವಾಗಿಲ್ಲ. ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದ ನೂರುಲ್ ಹುಸೇನ್, ಭಾರತ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು.
ಸಾಮ್ರಾಜ್ಯವಾದಿ ಹಾಗೂ ಸೈದ್ಧಾಂತಿಕ ಅನುಕರಣೀಯತೆಗಳು ನಿಮಗೆ ಇಷ್ಟವಾಗುತ್ತವೆ. ರಾಣಾ ಪ್ರತಾಪ್‌ನಂತೆ ಹೋರಾಟ ನಡೆಸಿದರೂ,ಆಡಳಿತದಲ್ಲಿ ಅಕ್ಬರ್‌ನಂತಾಗಿರಿ. ಹೃದಯದಲ್ಲಿ ನೀವು ಸಾವರ್‌ಕರ್ ಆಗಿರಿ, ಆದರೆ ಚಿಂತನೆಯಲ್ಲಿ ಅಂಬೇಡ್ಕರ್ ಆಗಿರಬೇಕು. ಒಂದು ವೇಳೆ ನಿಮ್ಮ ಡಿಎನ್‌ಎನಲ್ಲಿ ಆರೆಸ್ಸೆಸ್ ಪ್ರಣೀತ ಹಿಂದುತ್ವವಿದ್ದರೂ, ನಿಮಗೆ ಮತ ಚಲಾಯಿಸಿರದ ದೇಶದ ಶೇ.69ರಷ್ಟು ಮತದಾರರ ಪಾಲಿಗೆ ನೀವು ವಝೀರ್ ಎ ಅಝಂ ಕೂಡಾ ಆಗಿರಬೇಕು.
 ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ನೀವು ವಹಿಸಿಕೊಳ್ಳುವ ಈ ಸಂದರ್ಭದಲ್ಲಿ ಸಕಲ ಶುಭ ಹಾರೈಕೆಗಳೊಂದಿಗೆ.
ನಿಮ್ಮ ಸಹ ಪೌರ,
ಗೋಪಾಲ್ ಕೃಷ್ಣ ಗಾಂಧಿ
(ಇವರು ಮಾಜಿ ಆಡಳಿತಾಧಿಕಾರಿ ಹಾಗೂ ರಾಜತಾಂತ್ರಿಕರಾಗಿದ್ದರು. 2004-2009ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹಾಗೂ 2005-2006ರಲ್ಲಿ ಬಿಹಾರದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು)

11 comments:

 1. ಮೋದಿಗೆ ಓಟು ಹಾಕಿದವನಾಗಿಯೂ ನನ್ನ ಹಾರೈಕೆ, ಬೇಡಿಕೆ ಇದೇ....

  ReplyDelete
 2. Good opinion sir. Thanks for your Straight writ-up.

  ReplyDelete
 3. Good guidelines and suggestions. Really good.

  ReplyDelete
 4. ಇದನ್ನು ಮೋದಿಯವರ ಗಮನಕ್ಕೆ ತರುವವರು ಯಾರು ?

  ReplyDelete
 5. ಈ ಬಗ್ಗೆ ಯಾರು ಭಯಫಡುವ ಅವಶ್ಯಕತೆ ಇಲ್ಲ ಏಕೆಂದರೆ ಮೋದಿಯವರು ನಡೆದುಬಂದ ಹಾದಿಯನ್ನು ಗಮನಿಸಿ ಸಾಕು ಎಲ್ಲವು ಅರ್ಥವಾಗುತ್ತೆ.
  ಶಕ್ತಿಶಾಲಿ ಭವ್ಯ ಭಾರತ ನಿರ್ಮಾಣ ಅವರ ಕನಸು ನಿಚ್ಶೀತವಾಗಿ ಅವರು ಯಶಸ್ವೀಯಾಗುತ್ತಾರೆ

  ReplyDelete
 6. ವಜ್ರಾದಪಿ ಕಟೋರಾಣಿ ಕುಸುಮಾದಪಿ ಮೃದೂನಿ ಚ ಎಂಬ ಮಾತಿಗೆ ನಿದರ್ಶನವಾಗಿ ಮೋದಿಯವರು ನಿಲ್ಲುತ್ತಾ ರೆ ಎಂಬ ನಂಬಿಕೆ ನಮಗಿದೆ ಮೋದಿ ಆಯ್ಕೆಯಾದ ಬಗ್ಗೆ ದೇಶ ದ್ರೋಹಿಗಳಿಗೆ ನಡುಕ ಹುಟ್ಟಿದೆಯೇ ಹೊರತು ಸಾಮಾನ್ಯ ಜನರು ಜಾತಿ/ಧರ್ಮ /ಮತ /ಪಕ್ಷ ಬೇಧಗಳಿಲ್ಲದೆ ಮೋದಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ,ಮೋದಿಯವರ ಬಗ್ಗೆ ಈ ಬಗೆಯ ಆತಂಕ ಅನಗತ್ಯ ಎಂದು ನನಗೆ ಅನಿಸುತ್ತದೆ

  ReplyDelete
 7. http://www.firstpost.com/politics/why-gopal-gandhis-open-letter-to-modi-is-wrong-headed-and-odious-1531867.html

  ReplyDelete
 8. ಮೋದಿಯನ್ನು ಸರ್ವಾಧಿಕಾರಿ ಅಂತ ಹೇಳುವಾಗ... ನೆಹರು ಕುಟುಂಬದ ಸರ್ವಾಧಿಕಾರವನ್ನು ಕಾಂಗ್ರೆಸ್ ಸ್ವತಃ ಒಪ್ಪಿಕೊಂಡು ಪ್ರಜೆಗಳ ಮೇಲೆ ಈ ಅರುವತ್ತು ವರುಷ ಹೇರಿದ್ದನ್ನು ಯಾಕೆ ಸಮರ್ಥಿಸಬೇಕು. ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ಸರ್ವಾಧಿಕಾರೀ ಧೋರಣೆ ಅಲ್ಲ ಎನ್ನಲು ಕಾರಣಗಳು ಯಾವುದು? ನಹರು ಕುಟುಂಬದ ಹೊರತಾಗಿ ಬೇರೆ ನಾಯಕತ್ವವೇ ಬೇಡ ಎಂದು ಅನಧಿಕೃತವಾಗಿ ಸಾರುವ ಕಾಂಗ್ರೆಸಿಗರು.. ಹಿಂದು ಮುಸ್ಲಿಮ್ ಎಂದು ಭಿನ್ನವಾಗಿಸಿ ತಮ್ಮ ಸ್ವಾರ್ಥವನ್ನು ಸಾಧಿಸುವ ಕಾಂಗ್ರೆಸ್ ರಾಜಕೀಯ ತಂತ್ರ... ಇವುಗಳ ಬಗ್ಗೆ ಒಂದೆರಡು ಮಾತಾದರೂ ಬರೆಯಬೇಕೆಂದು ಕಾಣದಿರುವುದು ನಿಜಕ್ಕೂ ಅಚ್ಚರಿ ತರಿಸುತ್ತದೆ. ರೋಗ ಬಂದಾಗ ಕಹಿ ಔಷಧವನ್ನು ದೂರ ಮಾಡಿದರೂ ರೋಗವಾಸಿಯಾಗಬೇಕಾದರೆ ಕಹಿ ಔಷಧವನ್ನೇ ಸೇವಿಸಬೇಕು. ಈ ಪರಿಜ್ಞಾನ ಬೇಡವೇ?

  ReplyDelete
 9. why media and so called intellectual like gandi , etc., are worried about minorities and castes. why dont tell that we are Indians. Modi Ji is doing development and giving security to every indian, then why the fuck minorities. Everyone in india is same including Jammu and Kashmir. whatever they read , kuran, bhavadgitha , bible does not matter. So henceforth leave all that muslims, hindus, sc, st etc., and live a like a good citizen of india and help each other. MODI JI WILL DEFINITELY KNOWS THAT AND HE WILL WORK FOR COUNTRY NOT FOR ANY RELIGION. Please get that in mind Mr basheer and also dont post and spread this kind of article anymore.

  ReplyDelete
 10. ಮೋದಿ ಪ್ರಧಾನಿಯಾದಾಗ ಆತಂಕ ಪಟ್ಟವರಲ್ಲಿ ನಾನೂ ಒಬ್ಬ. ಅವರು ಪ್ರಧಾನಿಯಾದ ಮೇಲೆ ಈ ಎಂದೂ ಕೇಳಿರದ 'ಮಹಿಳೆಯರು ಹತ್ತು ಹಡೆಯಲೇಬೇಕು' ಎಂಬಂತಹ ಅಸಂಬದ್ದ ಹೇಳಿಕೆಗಳು ಕೇಳಿಬರುತ್ತಿವೆ. ಅದಕ್ಕಾಗಿಯೇ ಈ ದೇಶದ ಶೇ 69ರಷ್ಟು ಜನ ಆತಂಕಗೊಂಡಿದ್ದು. ಅದರಲ್ಲಿ ನಾನು ಒಬ್ಬ.

  ReplyDelete