Wednesday, January 4, 2017

ದುಬಾರಿ ಬಟ್ಟೆ

ತಾಯಿ ತೀರಿ ಹೋದ ದಿನ 
ಬಟ್ಟೆ ಅಂಗಡಿಗೆ ಹೋದೆ
ಕಳೆದ ಹಬ್ಬಕ್ಕೆ ಸೀರೆ ಕೊಡಿಸಿರಲಿಲ್ಲ 
ಬೋಳಾದ ಕೈಗಳಿಗೆ ಚಿನ್ನದ ಬಳೆ ತೊಡಿಸಲಾಗಲೇ ಇಲ್ಲ ... 
ಹೀಗೆ ಏನೇನೋ ಪಾಪ ಪ್ರಜ್ಞೆಯ ಜೊತೆ 
ದಫನಕ್ಕೆ ಬೇಕಾದ ಬಿಳಿ ಬಟ್ಟೆ ಕೇಳಿದೆ 
ಒಂದಿಷ್ಟು ಬೆಲೆ ಜಾಸ್ತಿಯದ್ದು ಇರಲಿ ಎಂದೆ

ಅಂಗಡಿಯಾತ 
"ಯಾರು ಸರ್ ?" ಎಂದು ಕೇಳಿದ 
"ಅಮ್ಮ" ಎಂದೆ 
ಅವನು ಒಂದು ಕ್ಷಣ ಮೌನವಾದ ...
 ಬಳಿಕ ತಣ್ಣಗೆ ನುಡಿದ
"ಸರ್, ಹೆಣಕ್ಕೆ 
ಕಡಿಮೆ ದರದ ಹತ್ತಿ ಬಟ್ಟೆಯೇ ಚೆನ್ನ 
ದುಬಾರಿ ಬಟ್ಟೆಯಿಂದ ಹೆಣ ಬೆಂದು ಬಿಡುತ್ತದೆ
ಅಗ್ಗದ ಬಿಳಿ ಬಟ್ಟೆ ಹೆಣವನ್ನು ತಣ್ಣಗಿಡುತ್ತದೆ"
ಎನ್ನುತ್ತಾ ಇದ್ದುದರಲ್ಲೇ ಅಗ್ಗದ 
ಬಿಳಿ ಬಟ್ಟೆಯನ್ನು ನನ್ನ ಮುಂದಿಟ್ಟ ..

No comments:

Post a Comment