Monday, September 7, 2009


ಗುಜರಿ ಆಯುವ ಹುಡುಗ!

ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ
ಬ್ಯಾರಿಯಂತೆ ಅಪ್ಪ
ಹುಟ್ಟಿದ

ಗಿಡದಲ್ಲಿ ತೂಗುವ ಮಾವು
ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ
ಹೂವು ಎಲ್ಲವನ್ನು
ಸರಕಿನಂತೆ ನೋಡಿದ

ವ್ಯಾಪಾರವೆನ್ನುವುದು ಅವನಿಗೆ
ಜೂಜಿನಂತೆ ಅಂಟಿತು
ಬದುಕನ್ನೇ ಒತ್ತೆ ಇಟ್ಟು
ಆಡಿದ

ಹಸಿವನ್ನು ಹೂಡಿ
ದಿನಸಿ ಅಂಗಡಿ ತೆರೆದ
ಗೆದ್ದ
ಗೆಲುವನ್ನು ಜವಳಿ ಅಂಗಡಿಗೆ
ಮಾರಿ ಸೋತ...
ಸಾಲಕ್ಕೆ ಹಳೆಯ
ಹೆಂಚನ್ನೇ ಮಾರಿದ
ಸೂರುವ ಸೂರನ್ನು
ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ಗಂಜಿಗೆ ನೆಂಜಿಕೊಳ್ಳುವುದಕ್ಕೆಂದು
ತಂದ ಸಿಗಡಿಯ ರುಚಿ ಹಿಡಿದು
ಕಡಲ ತಡಿಗೆ ಹೋದ
ಮೀನಿನ ವ್ಯಾಪಾರಕ್ಕಿಳಿದ

ದುಂದುಗಾರ ಅಪ್ಪ
ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
ಅಮ್ಮನ ಮೌನದ ತಿಜೋರಿಯನ್ನೇ
ದೋಚಿದ

ಜೂಜಿನ ನಿಯಮವ ಮರೆತು
ನಂಬಬಾರದವರನ್ನೆಲ್ಲ ನಂಬಿದ
ಸೋಲಿನ ರುಚಿಯನ್ನು ಹಿಡಿದ
ಸೋಲಿಗಾಗಿಯೇ ಆಡ ತೊಡಗಿದ...

ಕೊನೆಗೆ ಎಲ್ಲ ಬಿಟ್ಟು
ಗುಜರಿ ಅಂಗಡಿ ಇಟ್ಟ
ಹರಿದ ಚಪ್ಪಲಿ, ತುಕ್ಕು ಹಿಡಿದ ಡಬ್ಬ
ಮುರಿದ ಬಕೀಟುಗಳ ರಾಶಿಯ
ನಡುವೆ ಆ
ರಾಮ ಕುರ್ಚಿಗೆ ಒರಗಿದ
ಅವನ ಮೌನದ ತಿಜೋರಿ ತುಂಬಾ
ಸಾಲ ಪತ್ರಗಳು
ಅಂಗಡಿಯ ಬಾಗಿಲಲ್ಲಿ
ಕಾಲ
ವಸೂಲಿಗೆಂದು ಕುಕ್ಕರಗಾಲಿನಲ್ಲಿ ಕೂತಿದ್ದಾನೆ

ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ

*

12 comments:

  1. gujari angadi hesarige takkante bareha chennagide.
    matravalla vishehsa anisuttade.....tale baraha

    ReplyDelete
  2. pritiya basheer
    gujari Ayuva huduga kavan thumbaa saralavaagiddarU khushi koduttade. kaavyada bagge naanu hEge thUka maadli ? naano santheyalli kattige maaruvavnu chinnada maulya nange hEge tiliyabEku ?
    ivan

    ReplyDelete
  3. ಪ್ರಿಯ ಬಶೀರ್,

    ನಿಮ್ಮ ಕಾವ್ಯ ಆಪ್ತ ಸಾಲುಗಳೊಂದಿಗೆ ಆಳದ ಅನುಭಾವದಿಂದ ಚಿಮ್ಮಿದಂತಿದೆ.

    ಅಭಿನಂದನೆಗಳು

    ಒಲವಿನಿಂದ
    ಚಂದಿನ

    ReplyDelete
  4. odi tumba khushiyaaytu...dhanyavaadagallu

    ReplyDelete
  5. gujariangadige nanoosadasyane chennagide ik

    ReplyDelete
  6. Priya Bashir, tumba lekhanagalannu oduttene.. vachanaga saradante bhasavaguttade.. sarala , sajjanike..oh.. love ur all article... tumbu hrudayada dhanyavada...

    ReplyDelete
  7. ಗುರುವಿಗೆ ವಂದನೆ. ಥ್ಯಾಂಕ್ಸ್, ಹಾಗೆಯೇ...ನನ್ನ ಬರಹ ಮೆಚ್ಚಿದ ಎಲ್ಲ ಗೆಳೆಯರಿಗೆ....

    ReplyDelete
  8. ವಿತೊರಿ ಕಾರ್ಕಳFebruary 19, 2013 at 1:18 AM

    ವಾ...ವಾ... ಅಪ್ಪ ಮಗನ ಇಡೀ ಜೀವನಗಾಥೆ ಕೆಲವೇ ಸಾಲುಗಳಲ್ಲಿ... ಅಮ್ಮನ ಮೌನದ ತಿಜೋರಿಯನ್ನು ದೋಚಿದ ಅಪ್ಪನ ಬಳಿ ಕೂಡಾ ಈಗ ಮೌನದ್ದೇ ತಿಜೋರಿ... ಗುಜರಿ ಅಂಗಡಿಯಲ್ಲೇ ಇಷ್ಟು ಚಂದದ ಶಬ್ದಗಳಿದ್ದರೆ ನಮಗ್ಯಾಕ್ರಿ ಅಕ್ಷರ ಸಂತೆಯ ಚಿಂತೆ........

    ReplyDelete
  9. Thamma barahavannu varnisalu aksharagale illa gurugale... thumbane chennagi moodi barutthide

    ReplyDelete