ಜಾನಪದ ಅಕಾಡಮಿಯಿಂದ ಪ್ರತ್ಯೇಕಿಸಿ, ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯನ್ನು ಸರಕಾರ ನೀಡಿದಾಗ ಬರೆದ ಲೇಖನ ಇದು. ಜುಲೈ 27, 2007 ರಲ್ಲಿ ಬರೆದ ಲೇಖನ ಇದು.
1
ಅದು ವಿದ್ಯುದ್ದೀಪಾಲಂಕೃತ ರಂಗಮಂಟಪ. ಚೆಂಡೆಯ ಸದ್ದಿನ ಜೊತೆಗೆ ‘ಚಾಣಕ್ಯ’ನ ಪ್ರವೇಶವಾಗುತ್ತದೆ. ನಂದರಾಜನಿಂದ ಅವಮಾನಿತನಾದ ಚಾಣಕ್ಯ ಸಿಟ್ಟಿನಿಂದ ಧಗಧಗನೆ ಉರಿಯುತ್ತಿದ್ದಾನೆ. ‘ದಿಗಿಣ’ ಮುಗಿದಾಕ್ಷಣ ಚಾಣಕ್ಯ ಮಾತನಾಡತೊಡಗುತ್ತಾನೆ. ‘‘ನಂದಾರಾಜನನ್ನು ಪತನಗೊಳಿಸಿ, ಭರತ ಖಂಡದಲ್ಲಿ ಕುಸಿದು ಬಿದ್ದಿರುವ ವರ್ಣ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದೇ ನನ್ನ ಮುಂದಿನ ಗುರಿ...’’ ಪ್ರಸಂಗದ ಹೆಸರು ‘ಚಾಣಕ್ಯ’. ಸಾಲಿಗ್ರಾಮಾದಿ ಮೇಳಗಳು ಈ ಪ್ರಸಂಗವನ್ನು ಆಡಿಸಿವೆ.
2
ಅದು ಹಾಸ್ಯ ದೃಶ್ಯ! ತಲೆಗೊಂದು ಟೊಪ್ಪಿ ಇಟ್ಟು, ಹೋತದ ಗಡ್ಡವನ್ನು ಹೊಂದಿದ ಮುಸ್ಲಿಂ ಸೈನಿಕನೊಬ್ಬ ಪ್ರವೇಶವಾಗುತ್ತಾನೆ. ಅವನ ಮುಂದೆ ಕುಮಾರರಾಮ ಬಂದು ನಿಲ್ಲುತ್ತಾನೆ ‘‘ನಿನಗೆಷ್ಟು ಹೆಂಡತಿಯರು...’’ ಕುಮಾರರಾಮ ಕೇಳುತ್ತಾನೆ. ಸೈನಿಕ ಲೆಕ್ಕಮಾಡಲು ಹೋಗುತ್ತಾನೆ. ಲೆಕ್ಕ ತಪ್ಪುತ್ತದೆ. ಕುಮಾರರಾಮ ಕೇಳುತ್ತಾನೆ ‘‘ಮನೆಯಲ್ಲಿ ಅಕ್ಕ ತಂಗಿಯರಾರು ಇಲ್ಲವೇ?’’ ‘‘ಅಕ್ಕ ತಂಗಿಯರಾರು ಇಲ್ಲ. ಆದರೆ ಚಂದದ ಮಗಳುಂಟು...’’ ಎನ್ನುತ್ತಾ ಮುಸ್ಲಿಂ ಸೈನಿಕ ನಾಲಗೆ ಚಪ್ಪರಿಸುತ್ತಾನೆ. ಕುಮಾರರಾಮ ತಿರಸ್ಕಾರದಿಂದ ಹೇಳುತ್ತಾನೆ ‘‘ಹೂಂ... ನಿಮ್ಮ ಜಾತಿಯೇ ಹಾಗೆ. ನಿಮಗೆ ತಾಯಿಯೂ ಆಗುತ್ತದೆ, ಮಗಳೂ ಆಗುತ್ತದೆ...’’ ಕುಮಾರರಾಮ ಕತೆಯನ್ನು ಹೊಂದಿರುವ ಈ ಪ್ರಸಂಗವನ್ನು ಪೆರ್ಡೂರಾದಿ ಮೇಳಗಳು ಆಡಿಸಿವೆ.
3
ಅದು ‘ಗದಾಯುದ್ಧ’ ಪ್ರಸಂಗ ಆಡಿದ್ದು ಪೆರ್ಡೂರು ಮೇಳ. ಆಗ ಅದರ ಭಾಗವತಿಕೆಯನ್ನು ಮಾಡುತ್ತಿದ್ದುದು ಸುಬ್ರಹ್ಮಣ್ಯ ಧಾರೇಶ್ವರ. ಭೀಮ ದುರ್ಯೋಧನನನ್ನು ಹುಡುಕುತ್ತಿದ್ದಾನೆ. ಅಲ್ಲಿಗೆ ಬೇಡನೊಬ್ಬ ಮಾಹಿತಿಯೊಂದಿಗೆ ಬರುತ್ತಾನೆ. ಬೇಡ ಭೀಮನಿಗೆ ‘ಸಲಾಮು’ ಎನ್ನುತ್ತಾನೆ. ಅದನ್ನು ಧಾರೇಶ್ವರ ರಾಗವಾಗಿ ‘ಸಲಾಮು ಸಲಾಮು...’ ಎಂದು ಹಾಡತೊಡಗುತ್ತಾರೆ. ನಿಧಾನಕ್ಕೆ ಅವರ ಹಾಡಿನ ‘ಸಲಾಮು’ ‘ಮುಸಲಾ.. ಮುಸಲಾ... ಮುಸಲಾ...’ ಎಂಬ ತಿರುಗು ರೂಪ ಪಡೆದಿರುತ್ತದೆ. ಹಾಗೆ ‘ಮುಸಲಾ ಮುಸಲಾ’ ಎಂದು ಹಾಡುತ್ತಾ ಧಾರೇಶ್ವರ ಹಾರ್ಮೋನಿಯಂನವನೆಡೆಗೆ ವಾರೆಗಣ್ಣಲ್ಲಿ ನೋಡಿ ವ್ಯಂಗ್ಯವಾಗಿ ನಗುತ್ತಾರೆ. ಹಾರ್ಮೋನಿಯಂ ವ್ಯಕ್ತಿ ಮೆಚ್ಚುಗೆಯಿಂದ ನಗುತ್ತಾ ತಲೆಯಾಡಿಸುತ್ತಾನೆ.
4
ಸರಪಾಡಿ ಅಶೋಕ್ ಶೆಟ್ಟಿ ಎಂಬ ಯಕ್ಷಗಾನ ಕಲಾವಿದನ ಕುರಿತಂತೆ ವ್ಯಾಪಕ ಚರ್ಚೆಗಳು ನಡೆದಿವೆ. ಚರ್ಚೆ ನಡೆದಿರುವುದು ಈತನೊಳಗಿರುವ ‘ಕಲೆಗಾರ’ನ ಕುರಿತಂತೆ ಅಲ್ಲ. ಈತನೊಳಗಿರುವ ‘ಕೊಲೆಗಾರ’ನ ಕುರಿತಂತೆ. ಬಿಜೆಪಿ ಮತ್ತು ಸಂಘಪರಿವಾರದ ಅಜೆಂಡಾಗಳನ್ನು ಸಾದಿಸಲು ಬಳಸುವ ಯಕ್ಷಗಾನದ ಈತನ ಪಾತ್ರಗಳೆಲ್ಲ ಜಗದೀಶ್ ಕಾರಂತ, ಮುತಾಲಿಕ್‌ರ ಅಪರಾವತಾರದಂತಿರುತ್ತದೆ. ಯಕ್ಷಗಾನ ಮೇಳವನ್ನು ಸಂಘ ಪರಿವಾರದ ಶಾಖೆಯನ್ನಾಗಿ ಪರಿವರ್ತಿಸಿರುವ ಇವರಂತಹ ನೂರಾರು ‘ಕೊಲಾವಿದರು’ ಕರಾವಳಿಯಲ್ಲಿದ್ದಾರೆ.
5
ಇಬ್ಬರು ತರುಣ ಕಲಾವಿದರನ್ನು ಮಂದರ್ತಿ ಮೇಳದಿಂದ ಹೊರ ಹಾಕಲಾಯಿತು. ಅವರ ಪ್ರತಿಭೆಯ ಕಾರಣಕ್ಕಾಗಿಯಲ್ಲ, ಅವರು ಬಿಲ್ಲವರು ಎನ್ನುವ ಕಾರಣಕ್ಕಾಗಿ. ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಇದರ ವಿರುದ್ಧ ‘ಶೂದ್ರ ಸಂಘರ್ಷ’ ಎಂದು ತಲೆನಾಮ ಕೊಟ್ಟು ಜಿಲ್ಲಾಧಿಕಾರಿ ಕಚೇರಿಯ ಎದುರು ಗೆಜ್ಜೆ ಕಟ್ಟಿ ಕುಣಿದರು. ಪ್ರತಿಭಟನೆ ನಡೆಸಿದರು. ಮಂದರ್ತಿ ಮೇಳದ ವಿರುದ್ಧ ಬಿಲ್ಲವರೆಲ್ಲ ಒಂದಾದರು. ಪರಿಣಾಮವಾಗಿ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಕಾನೂನು ಪ್ರಕಾರ ಕಲಾವಿದರಿಗೆ ಮಂದರ್ತಿ ಮೇಳದಲ್ಲಿ ಅವಕಾಶ ನೀಡಿದರು. ಇದೇ ಸಂದರ್ಭದಲ್ಲಿ ಅವಕಾಶ ಬೇಡಿದ ಆ ಬಿಲ್ಲವ ತರುಣ ಕಲಾವಿದರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಯಿತು.
6
ಕುಂಬ್ಳೆ ಸುಂದರ ರಾವ್! ‘ಸುರತ್ಕಲ್ ಗಲಭೆ’ಯಲ್ಲಿ ಈತ ವಹಿಸಿದ ರಾಕ್ಷಸ ವೇಷ ಈ ಕಲಾವಿದನ ಜೀವಮಾನದ ಸಾಧನೆ. ಈ ರಾಕ್ಷಸ ವೇಷಧಾರಿಯ ಮಾತುಗಾರಿಕೆಯ ಫಲವಾಗಿಯೇ ಸುರತ್ಕಲ್ ಹೊತ್ತಿ ಉರಿಯಿತು. ಸುಮಾರು ಒಂಭತ್ತು ಜೀವಗಳು ಕಣ್ಮುಚ್ಚಿದವು. ಕೋಟಿಗಟ್ಟಲೆ ನಷ್ಟವಾಯಿತು. ದೊಂದಿ ಬೆಳಕಿನಲ್ಲಿ ಯಕ್ಷಗಾನ ನಡೆಯದೇ ಇದ್ದುದು ಈತನ ಗಮನಕ್ಕೆ ಬಂದ ಪರಿಣಾಮವೋ ಏನೋ. ಕೆಲವು ವರ್ಷಗಳ ಹಿಂದೆ ತೊಕ್ಕೊಟಿನಲ್ಲಿ ಈತನ ನೇತೃತ್ವದಲ್ಲಿ ರಾತ್ರಿ ದೊಂದಿ ಮೆರವಣಿಗೆ ನಡೆಯಿತು. ಬಳಿಕ, ಸಭಾಂಗಣದ ಒಳಗೆ ತಾಳಮದ್ದಲೆಯಲ್ಲಿ ಮಾತನಾಡುತ್ತಿದ್ದುದನ್ನು ಸಾರ್ವಜನಿಕ ರಾಜಕೀಯ ವೇದಿಕೆಯಲ್ಲಿ ಆಡಿದರು. ಅಷ್ಟೇ, ತೊಕ್ಕೊಟ್ಟು ಹೊತ್ತಿ ಉರಿಯಿತು. ಅಮಾಯಕರ ಅಂಗಡಿಗಳಿಗೆ ಬೆಂಕಿ ಬಿತ್ತು. ಯಾರ ಒಡಲಿಗೆ ಇನ್ನಾರೋ ಚೂರಿ ಹಾಕಿದರು. ಸಂಘಪರಿವಾರದ ಬಿಲ್ಲವ, ದಲಿತ ಹುಡುಗರನ್ನು ಕ್ರಿಮಿನಲ್ ಆರೋಪ ಹೊರಿಸಿ ಜೈಲಿಗೆ ತಳ್ಳಲಾಯಿತು. ಈಗಲೂ ಆ ತರುಣರು ಕೋರ್ಟ್, ಕಚೇರಿಯೆಂದು ಅಲೆಯುತ್ತಿದ್ದಾರೆ. ಆದರೆ, ಕುಂಬ್ಳೆ ಸುಂದರ ರಾವ್ ಮೇಲಿದ್ದ ಮೊಕದ್ದಮೆ ಮೊನ್ನೆ ಮೊನ್ನೆ ಸರಕಾರವೇ ಮುಂದೆ ನಿಂತು ಹಿಂದೆಗೆದುಕೊಂಡಿತ್ತು. (ತೊಕ್ಕೊಟು ಗಲಭೆಯಲ್ಲಿ ಪಾತ್ರ ವಹಿಸಿದ ಕುಂಬ್ಳೆಯವರ ಮೇಲಿನ ಮೊಕದ್ದಮೆಯನ್ನು ಯಾವ ಕಾರಣಕ್ಕೂ ಹಿಂದಕ್ಕೆ ತೆಗೆಯಬಾರದು ಎಂದು ಪೊಲೀಸ್ ಇಲಾಖೆ ವರದಿ ನೀಡಿದ ಬಳಿಕವೂ)
***
ಕಳೆದ ಬಜೆಟ್ ಸಂದರ್ಭದಲ್ಲಿ ಸರಕಾರ ಜಾನಪದ ಅಕಾಡಮಿಯಿಂದ ಯಕ್ಷಗಾನವನ್ನು ಪ್ರತ್ಯೇಕಗೊಳಿಸಿತು. ಸರಕಾರದ ಈ ತೀರ್ಮಾನ ಜಾನಪದಕ್ಕೂ ಯಕ್ಷಗಾನಕ್ಕೂ ಯಾವ ಸಂಬಧವೂ ಉಳಿದಿಲ್ಲ ಎನ್ನುವ ಸಂದೇಶವನ್ನು ನೀಡುವ ಉದ್ದೇಶವನ್ನು ಹೊಂದಿದೆಯಾದರೆ ಅದು ಸ್ವಾಗತಾರ್ಹವಾಗಿರುತ್ತಿತ್ತು. ಆದರೆ, ಜಾನಪದ ಅಕಾಡಮಿಯಿಂದ ಯಕ್ಷಗಾನವನ್ನು ಬೇರ್ಪಡಿಸಿ ಅದಕ್ಕೊಂದು ಸ್ವತಂತ್ರ ಅಸ್ತಿತ್ವವನ್ನು ಸರಕಾರ ಕಲ್ಪಿಸಿತು. ಅದಕ್ಕೊಂದು ಪ್ರತೇಕ ಅಕಾಡಮಿಯನ್ನು ನೀಡಿತು. ಇದರ ಪ್ರಕಾರ ಇನ್ನು ಮುಂದೆ ಯಕ್ಷಗಾನದ ಕೋಮುವಾದಿ, ಮನುವಾದಿ ಅಜೆಂಡಾಗಳಿಗೆ ಸರಕಾರದಿಂದ ಮುಕ್ತ ನೇರ ಆರ್ಥಿಕ ಪ್ರೋತ್ಸಾಹವೂ ದೊರೆಯಲಿದೆ.
ಕಳೆದ ಎರಡು ದಶಕಗಳಲ್ಲಿ ಕರಾವಳಿಗೆ ಯಕ್ಷಗಾನದಿಂದಾದ ಅತೀ ದೊಡ್ಡ ಪ್ರಯೋಜನವೆಂದರೆ, ಅದು ಕೋಮುವಾದಿ ಯೋಚನೆಗಳನ್ನು ವಿಕೃತ ಮಾತುಗಾರಿಕೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ತಲುಪಿಸಿರುವುದು. ಹಳ್ಳಿಗಳ ಯುವಕರು, ಮಹಿಳೆಯರು ಕೋಮುವಾದಿಗಳಾಗುವುದರಲ್ಲಿ ಈ ‘ಯಕ್ಷಗಾನ ಕ(ಕೊ)ಲೆ’ಯ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಜಾತಿವಾದವನ್ನು ಅಶ್ಪಶತೆಯನ್ನು ಈ ಮೇಳಗಳು ಸಾರಾಸಗಟಾಗಿ ಬಿತ್ತಿವೆ. ಇಂದು ಹೆಚ್ಚಿನ ಮೇಳಗಳು ಯಕ್ಷಗಾನವನ್ನು ಸಂಘಪರಿವಾರದ ಜಾತಿವಾದ ಮತ್ತು ಕೋಮುವಾದದ ಮುಖವಾಣಿಯಾಗಿಸಿವೆ. ಸಂಘಪರಿವಾರದ ಸಾಂಸ್ಕೃತಿಕ ವೇದಿಕೆಯಾಗಿ ಮೇಳಗಳು ಕಾರ್ಯ ನಿರ್ವಹಿಸುತ್ತಿವೆ.
ಜಾನಪದ ಅಕಾಡಮಿಯಿಂದ ಯಕ್ಷಗಾನ ಕಲೆಯನ್ನು ಬೇರ್ಪಡಿಸಿದ್ದು ಒಂದು ಆಕಸ್ಮಿಕವಲ್ಲ. ಇಂದು ಜಾನಪದದಲ್ಲಿ ಯಕ್ಷಗಾನದಷ್ಟೇ ಪ್ರಬಲವಾಗಿರುವ ದೊಡ್ಡಾಟ, ಸಣ್ಣಾಟ, ವೀರಗಾಸೆ, ಪಾರಿಜಾತ ಮೊದಲಾದವುಗಳಿವೆ. ಯಕ್ಷಗಾನಕ್ಕೆ ಸರಕಾರ ಅಕಾಡಮಿಯನ್ನು ನೀಡುವುದಾದರೆ, ಉತ್ತರ ಕರ್ನಾಟಕದ ಉಳಿದ ಜಾನಪದ ಕಲೆಗಳಿಗೆ ಅಕಾಡಮಿಯನ್ನು ನೀಡಬೇಕು. ಆದರೆ, ಕರಾವಳಿಯಲ್ಲಿ ಮಾತ್ರ ಪ್ರಬಲವಾಗಿರುವ ಯಕ್ಷಗಾನವನ್ನು ಮಾತ್ರ ಪ್ರತ್ಯೇಕಿಸಿ, ಅದಕ್ಕೊಂದು ಅಕಾಡಮಿಯನ್ನು ಘೋಷಿಸಿತು. ಇದರ ಉದ್ದೇಶವೇನು?

ಕರಾವಳಿಯಲ್ಲಿ ಯಕ್ಷಗಾನವು ‘ಕಲೆ’ಯ ಪಾತ್ರವನ್ನು ಮಾತ್ರ ನಿರ್ವಹಿಸುತ್ತಿಲ್ಲ. ಅದು ರಾಜಕೀಯವಾಗಿ ಕೆಲಸ ಮಾಡುತ್ತಿವೆ. ಯಕ್ಷಗಾನದ ಸಂಪೂರ್ಣ ನಿಯಂತ್ರಣ ವೈದಿಕರ ಕೈಯಲ್ಲಿದೆ. ಒಂದು ಕಾಲದಲ್ಲಿ ಯಕ್ಷಗಾನದಲ್ಲಿ ನೃತ್ಯ, ವೇಶ ಮತ್ತು ಭಾಗವತಿಕೆಯಷ್ಟೇ ಮುಖ್ಯವಾಗಿತ್ತು. ಆದರೆ ಯಾವಾಗ ಮೇಲ್ವರ್ಣೀಯರು ತಮ್ಮ ಮಾತುಗಾರಿಕೆಯೊಂದಿಗೆ ಯಕ್ಷಗಾನವನ್ನು ಪ್ರವೇಶಿಸಿದರೋ ಅಲ್ಲಿಂದ ಯಕ್ಷಗಾನದೊಳಗಿದ್ದ ಕೆಳಸ್ತರದ ಶೂದ್ರರೂ ಕೆಳಗೆ ತಳ್ಳಲ್ಪಟ್ಟರು. ಭಗವದ್ಗೀತೆ, ಶ್ಲೋಕಗಳು ಯಕ್ಷಗಾನದ ಮಾತುಗಾರಿಕೆಯಲ್ಲಿ ಪ್ರಾಮುಖ್ಯ ಪಡೆದವು. ಮನು ಧರ್ಮವನ್ನು ಮರು ಪ್ರತಿಷ್ಠಾಪಿಸುವ ಏಕ ಮೇವ ಅಜೆಂಡಾವನ್ನು ಯಕ್ಷಗಾನ ತನ್ನದಾಗಿಸಿಕೊಂಡಿತ್ತು. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನಲ್ಲಿ ಯಕ್ಷಗಾನವನ್ನು ಅಲ್ಪಸ್ವಲ್ಪ ಉಳಿಸಿರುವುದು ಕಲಾವಿದರ ‘ಹಸಿವು’. ಜನರನ್ನು ರಂಜಿಸುವ ಒಂದೇ ಒಂದು ಉದ್ದೇಶದಿಂದ ತೆಂಕುತಿಟ್ಟು ಕಲಾವಿದರು ಯಕ್ಷಗಾನವನ್ನು ವ್ಯಾಪಾರೀಕರಣಗೊಳಿಸಿದರು. ಸಿನಿಮಾ ಕತೆಗಳನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡರು. ಹಾಸ್ಯ ಪ್ರಧಾನ ಯಕ್ಷಗಾನ ಪ್ರಸಂಗಗಳು ಬಂದವು. ಆದರೆ, ಇದನ್ನು ಮೇಲ್ವರ್ಣೀಯ ಕಲಾವಿದರು ಪ್ರತಿಭಟಿಸತೊಡಗಿದರು. ಅವರೀಗ ಯಕ್ಷಗಾನ ಸಾಂಪ್ರದಾಯ ಬದ್ಧವಾಗಿರಬೇಕು ಎಂದು ಹೇಳುತ್ತಿದ್ದಾರೆ. ಶಾಸ್ತ್ರ ಬದ್ಧವಾಗಿರಬೇಕು ಎಂದು ‘ವೃತ್ತಿ ಮೇಳ’ಗಳಿಗೆ ಆದೇಶ ನೀಡುತ್ತಿದ್ದಾರೆ. ಇಂದು ಶೂದ್ರರಿಗೆ ಶಾಸ್ತ್ರ, ಸಂಪ್ರದಾಯದ ಕಡಿವಾಣವನ್ನು ತೊಡಿಸುವವರು ಒಂದು ನೆನಪಿನಲ್ಲಿಟ್ಟುಕೊಳ್ಳಬೇಕು. ವರ್ತಮಾನದಲ್ಲಿ ಯಕ್ಷಗಾನ ಏನಾದರೂ ತನ್ನ ಅಲ್ಪಸ್ವಲ್ಪ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಕಾರಣ ಕಲಾವಿದರ ‘ಹಸಿವು’. ಮನೋರಂಜನೆಯ ಹೆಬ್ಬಾಗಿಲೇ ತೆರೆದಿರುವ ಇಂದಿನ ದಿನಗಳಲ್ಲಿ ಜನರನ್ನು ಆಕರ್ಷಿಸುವುದಕ್ಕಾಗಿ ವಿಶೇಷ ಬದಲಾವಣೆಗಳನ್ನು ಮಾಡಿ, ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿ ಹೊಟ್ಟೆ ತುಂಬಿಸಿಕೊಳ್ಳುವ ಕಲಾವಿದರ ಮೇಲೆ ಶಾಸ್ತ್ರ, ಸಂಪ್ರದಾಯವನ್ನು ಹೇರುವ ಯಾವ ಅಧಿಕಾರವೂ ವೈದಿಕ ವಿದ್ವಾಂಸರಿಗಿಲ್ಲ.
ಕರಾವಳಿಯಲ್ಲಿ ಯಕ್ಷಗಾನ ಎರಡು ಕವಲಾಗಿ ಒಡೆದಿದೆ. ಒಂದು, ಅದು ಕಮರ್ಶಿಯಲ್ ಆಗಿದೆ. ಎರಡು, ಅದು ವೈದಿಕೀಕರಣ ಹಾಗೂ ಕೋಮುವಾದಿಕರಣಗೊಂಡಿದೆ. ಕಮರ್ಶಿಯಲ್ ಆಗಿರುವುದು ಹಸಿವಿನ ಕಾರಣದಿಂದ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಕಲೆಗಿಂತ ದೊಡ್ಡದು ಬದುಕು. ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ. ಒಂದು ಜನಪದ ಕಲೆಯನ್ನು ಜಾತಿ ಮತ್ತು ಕೋಮುವಾದವನ್ನು ಹರಡುವುದಕ್ಕಾಗಿ ಬಳಸುವುದು ಅಪರಾಧ. ಜನಪದ ಅಕಾಡಮಿಯಿಂದ ಯಕ್ಷಗಾನ ಪ್ರತ್ಯೇಕಗೊಂಡು, ತನ್ನದೇ ಅಕಾಡಮಿಯೊಂದನ್ನು ಸರಕಾರದಿಂದ ಗಿಟ್ಟಿಸಿರುವುದರ ಹಿಂದೆ ವೈದಿಕರ, ಸಂಘಪರಿವಾರದ ಸಂಚನ್ನು ನಾವು ಗುರುತಿಸಬೇಕಾಗಿದೆ. ಆದುದರಿಂದ, ಸರಕಾರ ಯಕ್ಷಗಾನ ಅಕಾಡಮಿಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು. ಉಳಿದ ಜಾನಪದ ಕಲೆಗಿಂದ ಕರಾವಳಿ ಜಾನಪದ ಕಲೆ ವಿಭಿನ್ನವಾಗಿರುವುದಾದರೆ ಅದಕ್ಕೆ ಒಂದೇ ಕಾರಣ. ಇಲ್ಲಿ ಕಲೆ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಮನುಧರ್ಮದ ಪುನಃಸ್ಥಾನೆೆಗಾಗಿ ಬಳಕೆಯಾಗುತ್ತಿದೆ. ಶೂದ್ರರ ಮುಂದಾಳ್ತನವುಳ್ಳ ಉಳಿದ ಜಾನಪದ ಕಲೆಗಳೊಂದಿಗೆ ಗುರುತಿಸಲು ಇಷ್ಟವಿಲ್ಲದೆ, ಅದಕ್ಕೆ ಪ್ರತ್ಯೇಕ ರೂಪವನ್ನು ಕೊಡುವ ಹುನ್ನಾರದ ಮೊದಲ ಭಾಗವಾಗಿ, ಅದು ಜಾನಪದ ಅಕಾಡಮಿಯಿಂದ ಕಳಚಿ ಕೊಳ್ಳಲ್ಪಟ್ಟಿದೆ. ಕರಾವಳಿಯ ಬಿಜೆಪಿ ಮುಖಂಡರ ಒತ್ತಡಕ್ಕೆ ಸರಕಾರ ಮಣಿದ ಪರಿಣಾಮವಾಗಿಯೇ ಇಂತಹದೊಂದು ದುರಂತ ಸಂಭವಿಸಿದೆ. ಶೂದ್ರ ಪರಂಪರೆಯಿಂದ ಬಂದ ಯಕ್ಷಗಾನ ಕಲೆಯನ್ನು ವೈದಿಕ ಮತ್ತು ಕೋಮುಶಕ್ತಿಗಳಿಂದ ಉಳಿಸಬೇಕಾದ ಸರಕಾರವೇ, ಆ ಶಕ್ತಿಗಳ ಜೊತೆ ಶಾಮಿಲಾಗಿರುವುದು ಯಕ್ಷಗಾನದ ದುರಂತ ಮಾತ್ರವಲ್ಲ, ಸಮಾಜದ ದುರಂತವೂ ಕೂಡ.
ಹಾಗೆಯೇ ಜಾನಪದ ಕಲೆಯ ಹೆಸರಿನಲ್ಲಿ ಯಕ್ಷಗಾನಕ್ಕೆ ಸರಕಾರ ಅನುದಾನವನ್ನು, ಸಹಾಯಧನವನ್ನು ನೀಡುವಾಗ, ಕಲಾವಿದನ ಹಿನ್ನೆಲೆಯನ್ನು, ಆ ಮೇಳದ ಹಿಂದಿನ ಜಾತಕಗಳನ್ನು ಬಿಡಿಸಬೇಕು. ಕಲೆ ಯಾವತ್ತೂ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತದೆಯೇ ಹೊರತು, ಒಡೆಯುವ ಕೆಲಸವನ್ನಲ್ಲ. ಒಂದು ವೇಳೆ ತಮ್ಮ ಕಲೆಯನ್ನು ಬಳಸಿಕೊಂಡು ಅವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರಾದರೆ ಅವರು ಯಾವ ಕಾರಣಕ್ಕೂ ಕಲಾವಿದರೂ ಅನ್ನಿಸಿಕೊಳ್ಳಲಾರರು. ಇವರಿಗೆ ಯಾವ ಕಾರಣಕ್ಕೂ ಸರಕಾರದ ಸಹಾಯ ದೊರಕಬಾರದು. ಈ ನಿಟ್ಟಿನಲ್ಲಿ ಯಕ್ಷಗಾನ ಕರಾವಳಿಯಲ್ಲಿ ಪಡೆಯುತ್ತಿರುವ ರೂಪಾಂತರವನ್ನು ಯಕ್ಷಗಾನ ಪಂಡಿತರು, ತಜ್ಞರು ಗಮನಿಸಬೇಕು. ಅಮೃತವೆಂದು ವಿಷವನ್ನು ಹಂಚಿದರೆ ಅದು ಸಮಾಜವನ್ನು ಸುಡದೇ ಇರದು. ಈ ನಿಟ್ಟಿನಲ್ಲಿ, ಸರಕಾರ ಯಕ್ಷ್ಷಗಾನವನ್ನು ಪೋಷಿಸುವ ಭರದಲ್ಲಿ ನಾಗರವನ್ನು ಸಾಕಿದಂತಾಗಬಾರದು. ಅಥವಾ ಈ ಯಕ್ಷಗಾನದ ವೇಷದಲ್ಲಿರುವ ರಾಕ್ಷಸ ಪಾತ್ರದಾರಿಗಳನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸುವ ಕೆಲಸವಾದರೂ ತಕ್ಷಣದಿಂದ ನಡೆಯಬೇಕು. ನಿಜವಾದ ಪ್ರತಿಭೆಗಳನ್ನು, ವ್ಯಕ್ತಿತ್ವಗಳನ್ನು, ಕಲಾವಿದರನ್ನು ಗುರುತಿಸಿ ಪೋಷಿಸಿ ಯಕ್ಷಗಾನವನ್ನು ಬೆಳೆಸಬೇಕಾಗಿದೆ. ತಮ್ಮ ವ್ಯಕ್ತಿತ್ವ, ಪ್ರತಿಭೆ, ಪಾಂಡಿತ್ಯ ಹಾಗೂ ಕಲಾತ್ಮಕತೆಯ ಮೂಲಕ ಯಕ್ಷಗಾನವನ್ನು ದೇಶವಿದೇಶಗಳಿಗೆ ತಲುಪಿಸಿದ ಶೇಣಿ, ಶಂಭುಹೆಗ್ಡೆ, ಚಿಟ್ಟಾಣಿ, ಸಾಮಗ, ಜಲವಳ್ಳಿಯಂತಹ ನೂರಾರು ಹಿರಿಯ ಕಲಾವಿದರು ನಮ್ಮ ಮುಂದಿದ್ದಾರೆ. ಕಲೆಯನ್ನು ಕಲೆಯಾಗಿಯೇ ಸ್ವೀಕರಿಸಿ ಆ ಮೂಲಕವೇ ಜನಮನವನ್ನು ಗೆದ್ದವರಿವರು. ಜಾತಿ ಮತ್ತು ಧರ್ಮ ರಾಜಕಾರಣದಿಂದ ಯಕ್ಷಗಾನವನ್ನು ಉಳಿಸುವುದು, ಇಂದಿನ ರಾಜಕೀಯದಿಂದ ಕಲುಷಿತವಾಗದಂತೆ ನೋಡಿಕೊಳ್ಳುವುದೂ ಕಲಾರಸಿಕರ ಜವಾಬ್ದಾರಿಯಾಗಿದೆ.
ಜುಲೈ 27, 2007
Basheer Neevu gamanisida vichara sathya..yakshagana arthadharaigalu RSS prabhavadinda hora barabeku.
ReplyDeleteThis comment has been removed by the author.
ReplyDeleteನಾನೂ ಅಲ್ಪ ಸ್ವಲ್ಪ ಯಕ್ಷಗಾನ ಕಲಿಯುತ್ತಿದ್ದೆ, ನನ್ನ ಮಗಳಿಗೂ ಕಳಿಸಿದ್ದೆ, ನನ್ನ ನಾಟಕಗಳಲ್ಲಿ ಕೂಡ ಯಕ್ಷಗಾನದ ಭಾಗವತಿಕೆ, ಅರ್ಥಗಾರಿಕೆ, ಚಂಡೆ ಇತ್ಯಾದಿ ಬಹಳಷ್ಟು ಬಾರಿ ಬಳಸಿದ್ದೆ ಕೂಡ. ಆದರೆ ನೀವು ಹೇಳಿದ ವಿಷಯಗಳೆಲ್ಲಾ ಮೆಲ್ಲನೆ ಅರ್ಥವಾಗ ತೊಡಗಿದ ಬಳಿಕ ತುಂಬಾ ಎಚ್ಚರದಿಂದ ಇದ್ದೇನೆ. ಮೊನ್ನೆ ಕಾರ್ನಾಡರ ಬೆಂಕಿ ಮತ್ತು ಮಳೆ ನಾಟಕ ಆಡಿಸುವಾಗ ಚೆಂಡೆ ಬಳಸಲೇ ಬೇಕಾದ ಸಂಧರ್ಭದಲ್ಲಿ ಈ ನಾಡಿನ ಮೂಲನಿವಾಸಿಗಳಾದ ಕೊರಗರ ಚೆಂಡೆಯನ್ನು ಬಳಸಿದೆ. ಪ್ರೇಕ್ಷಕ ವರ್ಗದಲ್ಲಿದ್ದ ಓರ್ವ ವೈದಿಕನೊಬ್ಬ ನಾಟಕ ಮುಗಿದ ಕೂಡಲೇ ಬಂದು 'ಏನ್ಸಾರ್ ... ನಮ್ಮ ಯಕ್ಷಗಾನದ ಚೆಂಡೆ ಬಳಸಿದ್ದರೆ ಸಕತ್ತಾಗಿರುತ್ತಿತ್ತು ... ಎಂದು ಪುಕ್ಕಟೆ ಸಲಹೆ ಕೊಟ್ಟು ಹೋದ !!!
ReplyDeleteಇದು ಸ್ವಲ್ಪ ಕಲಿತವರ ಅತಿರೇಕದ ವರ್ತನೆಗಳು.
ReplyDeleteಮತ್ತೆ ಉಳಿದಂತೆ ಯಕ್ಷಗಾನದ ಅರ್ಥಗಾರಿಕೆ ಮತ್ತು ವಿಷಯವ್ಯಾಪ್ತಿಗೆ ನಾನು ತುಂಬಾ ನಿಷ್ಟೆಯನ್ನು ಹೊಂದಿದ್ದೇನೆ. ಉದಾಹರಣೆಗೆ ಶೇಣಿಯವರ ಬಪ್ಪಬ್ಯಾರಿ ಪಾತ್ರದ ಬಗ್ಗೆ ನೀವೂ ಕೇಳಿರಬೇಕು.
ನಿಮ್ಮ ವಿಮರ್ಶೆಯ ಬಗ್ಗೆ ವಿರೋಧವಲ್ಲ. ನೀವು ಸ್ವಲ್ಪ ಸಿನೆಮಾವನ್ನೂ ಗಮನಿಸಿ. ಉರ್ದು ಭಾಷೆಯ ಮುಸ್ಲಿಮರನ್ನು ತಮಾಷೆ ಮಾಡುವ ಅಥವಾ ಕೀಳಾಗಿ ಮಾತಾಡುವುದನ್ನೂ ಗಮನಿಸಬಹುದು. ಯಕ್ಷಗಾನದಲ್ಲಿ ಭಟ್ರ/ಪೂಜಾರಿಗಳ ಬಗ್ಗೆಯೂ ತಮಾಷೆ ಅವಹೇಳನ ನಡೆಯುತ್ತದೆ ಕೆಲವೊಂದು ಬಾರಿ. ಇದನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುವುದು.
ಎಲ್ಲಿಂದ ನಿಮಗೆ ಬೇಕಾದ್ದನ್ನು ಮಾತ್ರ ಹುಡುಕಿಕೊಂಡು ಬಂದಿದ್ದೀರಿ ಮಾರಾಯ್ರೆ? ನಿಮಗೆ ಕಾಮಾಲೆ ಪೂರ್ತಿ ಆವರಿಸಿಕೊಂಡಿದೆ! ಯಕ್ಷಗಾನದಲ್ಲಿ ಎಲ್ಲ ಥರದವರನ್ನೂ ಹಾಸ್ಯಕ್ಕೆ ಬಳಸಿಕೊಂಡಿದ್ದಾರೆ. ತಲೆಕೆಟ್ಟವರು ಎಲ್ಲ ಕಡೆ ಇದ್ದಂತೆ ಯಕ್ಷಗಾನದಲ್ಲಿಯೂ ಇದ್ದಾರೆ. ಸಾಹಿತ್ಯದಲ್ಲಿಯೂ ಇದ್ದಾರೆ. ಅದಕ್ಕೆ ಇಡೀ ಕಲೆಯನ್ನೇ 'ಕೊಲೆ' ಎಂದು ಕರೆಯುವುದು ಸರಿಯಲ್ಲ. ಇರಲಿ ಬಿಡಿ. ಯಕ್ಷಗಾನದವರಿಗೆ ಅವರ ಹೊಟ್ಟೆಪಾಡು, ನಿಮಗೆ ನಿಮ್ಮದು. ಯಾರಿಗೆ ಯಾವ ಉದ್ದೇಶವೋ! - ಚಂದ್ರಕುಮಾರ್.
ReplyDeleteಈ ಲೇಖನ ಹಲವು ಪೂರ್ವಾಗ್ರಹದ ಚಿಂತನೆಯಾಗಿದೆ. ನಿಜವಾದ ಯಕ್ಷಗಾನದಲ್ಲಿ ಯಾವುದೇ ಮತವನ್ನು ಅವಹೇಳನ ಮಾಡುವ ಉದ್ದೇಶವಿರುವುದಿಲ್ಲ ಹರನನ್ನು ಹರಿಯನ್ನು ಎಲ್ಲರನ್ನೂ ಒಂದಾಗಿ ಕಾಣುವ ನಿದರ್ಶನಗಳು ಬೇಕಾದಷ್ಟಿವೆ. ಪರಮತ ಸಹಿಷ್ಣುತೆಯನ್ನು ಬಪ್ಪಬ್ಯಾರಿ .. ಎಂಬ ಪಾತ್ರದಲ್ಲೇ ಸಾಕಷ್ಟು ಪ್ರತಿಪಾದಿಸಿದ್ದಾರೆ. ವ್ಯಾಪರೀ ಕರಣದ ಉದ್ದೇಶದಿಂದ ಕೀಳು ಹಾಸ್ಯಕ್ಕೆ ಇಂತಹ ವಿಚಾರಗಳು ಬಳಕೆಯಾಗಿದ್ದರೆ... ಒಂದು ಗಮನಿಸಿ ಇದು ಕೇವಲ ಯಕ್ಷಗಾನವನ್ನು ಮಾತ್ರ ಗುರಿಯಾಗಿಸುವುದು ಸರಿಯಲ್ಲ. ಆದರೂ ಇಂತಹ ಅಪಹಾಸ್ಯ ಖಂಡನೀಯ ಮಾತ್ರವಲ್ಲ ಅಂತಹ ಅಭಿರುಚಿಯನ್ನು ಹೊಂದಿದವರು ಯಕ್ಷಗಾನದ ನಿಜ ಅಭಿಮಾನಿಯೇ ಅಗಿರುವುದಿಲ್ಲ ಎಂಬುದು ನಮ್ಮ ಪ್ರತಿಪಾದನೆ.ಎಲ್ಲದರಲ್ಲು ಸಾಹೋದರ್ಯವನ್ನು ಬಿಂಬಿಸುವ ಹಲವು ನಿದರ್ಶನಗಳನ್ನು ಕೇವಲ ಇಂತಹ ಚಿಂತನಗಳು ಖಂಡಿತಾ ಮುಚ್ಚಿಹಾಕಲಾರವು.
ReplyDeleteHello Mr. Basheer, First of all I wanted to thank you for mentioning the name of the blog as "Gujari Angadi". As the name says this particular blog about yakshagana is gujari lekhana only. This is just a one sided and amateur writing about yakshagana. I am sure you do not know exactly what yakshagana is.
ReplyDeleteYakshagana basically an art which consistes of all the forms means singing, dancing, speech and acting.
1) About your chankya yakshagana – in all the forma of art these sorts of conflicts are there, and it doesn’t mean that the whole art need to be targeted. The sentence may be the personal dialogue of the actor. And more over many times what happens is, we intended to convey one thing and because of our immaturity we may not be able to convey it properly.
2) About kumara rama yakshagana - – in all the forma of art these sorts of conflicts are there, and it doesn’t mean that the whole art need to be targeted. The sentence may be the personal dialogue of the actor. I have seen in many forms of art this kind of cheap humour. This cannot be tolerated. This is wrong.
3) Salamu Musala – I request Mr. Bassheer that for each and every word if you suspect, for each and every word you can find one or another mistake. Even you should enough broad minded. I am not able to see any mischief in this.
4) After reading this particular paragraph I laughed a lot. Actually yakshagana has very limited market. Please note market means the people who watch and adore. Even in South and North Canara many people doesn’t like yakshagana for their own reasons. It’s absolutely individual person’s taste. And more over you should identify that the people who like and adore are enough educated and they can analyse what is wrong and what is right. So using yakshagana as an advertisement to advertise sangh parivar & BJP’s agenda cannot be digested.
5) I am not aware of this particular paragraph – So I cannot comment without ant information.
6) I am not aware of this particular paragraph – So I cannot comment without ant information.
7) Dear Mr. Basheer, you are very much feeling insecurity for each and every aspect. This is means Yakshagana is not at all la very huge form of advertising channels like television, TV serials, Cinema etc. As I explained in point no. 4, yakshagana has very very limited market. Please note market means the people who watch and adore. Even in South and North Canara many people doesn’t like yakshagana for their own reasons. It’s absolutely individual person’s taste. And more over you should identify that the people who like and adore are enough educated and they can analyse what is wrong and what is right. So using yakshagana as an advertisement to advertise sangh parivar & BJP’s agenda cannot be digested.
ReplyDelete8) As you informed I partially agree that yakshagana became commercial and there were many plays were played with commercial aspects. This particular commercialization has caused many problems not only for a form of art. In our day to day life we are facing huge problems because of this. Education system, medical and doctors, advocates police, the whole system is in trouble with these commercialization. As yakshagana has very limited access and coverage area it does not affect much to the society. You need to see the form of art as an art. Nothing else.
9) Once again you are mistaken. Yakshagana is not under Brahmin people’s control. There are many artists other than Brahmins were got name and fame. For example Christen Babu (he is a christen with his religion), Jabbar Sumo (he is a muslim with his religion). They all contributed and contributing to the yakshagana art by their dedicated service to yakshagana. Yakshagana prasangas are based on Puranas so you might feel that its under control of Brahmins. But in fact it is not.
10) I wanted to inform one incident when Late Shri Sheni Gopalakrishna Bhat performed “Bappa Byari” in Bappanadu Kshetra Mahatme muslims were happy with his performance and gifted with one gold ring.
I politely request you that do not blame the great art form yakshagana without any proper knowledge. And if the government withdraw the help nothing will happen to Yakshagana. Without government help Yakshagana survived from past 500 years. And I am sure it will surely survive even after if the government withdraw its help. I agree that in all the areas, all forms of art, good and bad both exist. What we need to observe is good and take good if possible.
nayi bogalidare nakshatra oruleete ?
ReplyDelete