Tuesday, April 10, 2012

‘ಮಾತು-ಮೌನ’ದ ಕುರಿತಿಷ್ಟು...

 ಪತ್ರಕರ್ತ, ಕವಿ ದಿ. ಬಿ. ಎಂ. ರಶೀದ್ ಅವರು ‘ಮಾತು-ಮೌನ’ದ ಕುರಿತಂತೆ ಬರೆದ ಕವಿತೆ ಇಲ್ಲಿದೆ. ಈ ಕವಿತೆಯನ್ನು ಅವರ ‘ಪರುಷಮಣಿ’ ಸಮಗ್ರ ಬರಹದಿಂದ ಆರಿಸಿಕೊಳ್ಳಲಾಗಿದೆ.


1.
ಒಳಗೊಂದು ಸಭೆ!
‘ಮಾತು-ಮೌನ’ದ 
ನಡುವೆ ಜಟಾಪಟಿ!!
ಮಾತಿಗೆ ಶಬ್ದಗಳಿವೆ: ಅರ್ಥಗಳಿಲ್ಲ
 

ಮೌನಕ್ಕೋ ಅರ್ಥಗಳಿವೆ; ಶಬ್ದಗಳಿಲ್ಲ

2
ಮಾತಿಗೇನೋ
ಹೇಳುವುದಿತ್ತು
ಆದರೆ..
ಹೇಳಲಿರುವುದನ್ನು
ಹೇಳದೇ ಬಿಡುವ;
ಹೇಳಲಿಲ್ಲದ್ದನ್ನು
ಹೇಳಿ ಬಿಡುವ
ಭಯದಿಂದ 
ಮಾತು ಮೌನವಾಯಿತು

3
ಮಾತು
ಮೌನವಾಗಿತ್ತು
ಮಾತನಾಡಲೇನೂ 
ಇರಲಿಲ್ಲ-
ವೆಂದಲ್ಲ
ಸಮಸ್ಯೆ ಯಾವುದಾಗಿತ್ತೆಂದರೆ
ಒಳಗೆ ಶಬ್ದಗಳ
ಮುಷ್ಕರವಿತ್ತು

4
ಮಾತಿನೊಳಗೊಂದು
 

ಮೌನವಿತ್ತು
ಮಾತು
 

ಮೌನವಾದೊಡನೆ 
ಮೌನ...
ಮಾತನಾಡತೊಡಗಿತು

5
ಮಾತಿಗೇನೂ ಇಲ್ಲದಾಗ
ಮಾತಿಗೆಲ್ಲ ಇದ್ದಾಗ
ಮಾತು-
ಮೌನ!
ನಮ್ಮ ಮುಖಾಮುಖಿಯಲ್ಲಿ
ನಾವೋ,
ಏನನ್ನೂ ಮಾತಾಡದೇ
ಎಲ್ಲವನ್ನೂ ಮಾತಾಡಿದೆವು
 

ಮೌನ-ಮಾತು!!

6
 

ಮೌನದೊಳಗೊಂದು
ಮಾತಿತ್ತು!
ಧ್ವನಿಯಿರಲಿಲ್ಲ
ಮಾತು
ಮೌನಕೆ ಸೋತು, 

ಮೌನದ ತೆಕ್ಕೆಗೆ ಜೋತು
ನೋಡಿದರೆ-
ಕಣ್ಣಂಚಲ್ಲೊಂದು 
ಹನಿಯಿತ್ತು!!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

4 comments:

  1. ... :)

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು :)

    ReplyDelete
  2. ಒಂದು ಉತ್ತಮ ಕವಿತೆ ಧನ್ಯವಾದಗಳು...........

    ReplyDelete
  3. ಅರ್ಥಹೀನ ಶಬ್ದಗಳ ಅದ್ಭುತ ಜೋಡಣೆಯಿಂದ
    ಮನದಾಳದ ಧ್ವನಿ ಹೊಡೆದೆಬ್ಬಿಸುವ
    ಈ ಮಾತಿನ ಕಲೆ ....... ಶಬ್ಧಾತೀತ!
    ಪ್ರಕಟಿಸಿದ್ದಕ್ಕೆ ಧನ್ಯವಾದಗಳು

    ReplyDelete
  4. prakatisidhakke dhanyavadagalu..

    ReplyDelete