Saturday, April 7, 2012

ಕಳ್ಳ ಮತ್ತು ಊರು

ಕಾಡೊಳಗೊಬ್ಬ ಕಳ್ಳ ಅವಿತಿದ್ದ.
ಆಗಾಗ ಊರಿಗೆ ನುಗ್ಗಿ ಕದಿಯುತ್ತಿದ್ದ.
ಊರವರಿಗೆ ಅವನು ದೊಡ್ಡ ತಲೆನೋವಾಗ ತೊಡಗಿದ.
ತಡೆಯಲಾರದೆ ಕೊನೆಗೆ ಸರಕಾರಕ್ಕೆ ದೂರು ಕೊಟ್ಟರು.
ಸರಕಾರ ಕಳ್ಳನನ್ನು ಹಿಡಿಯಲು ದೊಡ್ಡ ಪೋಲಿಸ್ ಪಡೆಯನ್ನು ಕಳುಹಿಸಿತು.
ಪೋಲಿಸ್ ಪಡೆ ಕಳ್ಳನನ್ನು ಹುಡುಕ ತೊಡಗಿತು.
ಕಳ್ಳ ಸಿಗಲೇ ಇಲ್ಲ. ಸಿಗುವವರೆಗೆ ಪೊಲೀಸರು ಊರೂ ಬಿಟ್ಟು ಹೋಗುವ ಹಾಗಿಲ್ಲ.
ಪೊಲೀಸರು ಊರಲ್ಲಿ ಬಿಡಾರ ಊಡಿದರು.
ಪೋಲೀಸರ ಯೋಗ ಕ್ಷೇಮ ಊರವರ ತಲೆ ಮೇಲೆ ಬಿತ್ತು.
ಪುಕ್ಕಟೆ ಊಟ, ಹಣ್ಣು ಕಾಯಿ ಒಪ್ಪಿಸೋದು ಅನಿವಾರ್ಯವಾಯಿತು.
ಪೋಲಿಸ್ ಲಾಟಿ ನಿಧಾನಕ್ಕೆ ಮಾತನಾಡ ತೊಡಗಿತು.
ಹೆಣ್ಣು ಮಕ್ಕಳು ಹೊರ ಹೋಗೂದು ಕಷ್ಟವಾಗತೊಡಗಿತು.
ಕಟ್ಟಕಡೆಗೆ ಯುವಕರು ಹೆದರಿ ಒಬ್ಬೊಬ್ಬರಾಗಿ ಕಾಡು ಸೇರ ತೊಡಗಿದರು.
ಈ ಹಿಂದೆ ಒಬ್ಬ ಕಳ್ಳನಿದ್ದನಲ್ಲ, ಅವನೇ ಯುವಕರಿಗೆ ನಾಯಕನಾದ.
ಇಡೀ ಊರು ಕಳ್ಳರ ಪರವಾಗತೊಡಗಿತು.
ಪೊಲೀಸರಿಗೂ ಊರಿಗೂ ಜಗಳ ಶುರುವಾಯಿತು.
ಇಡೀ ಊರೇ ಕಳ್ಳನನ್ನು ರಕ್ಷಿಸುತ್ತಿದೆ ಎಂದು ಸರಕಾರಕ್ಕೆ ವರದಿ ಹೋಯಿತು.
ಊರ ಪ್ರಮುಖರೆಲ್ಲ ಜೈಲು ಸೇರಿದರು.
ಹಲವರು ಎನ್ಕೌಂಟರ್ನಲ್ಲಿ ಸತ್ತರು.
ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರು.
ಅಳಿದುಳಿದವರು ಜೀವ ಉಳಿಸಿಕೊಳ್ಳಲು ಕಾಡು ಸೇರಿದರು.
ಊರೂ ಸಂಪೂರ್ಣ ನಾಶವಾಯಿತು.
ಪೋಲಿಸರಿನ್ನು ಕಾಡಿನಲ್ಲಿ ಕಳ್ಳನಿಗಾಗಿ ಹುಡುಕುತ್ತಲೇ ಇದ್ದಾರೆ.

2 comments:

  1. ಈ ಕಥೆ ಆ ವೀರಪ್ಪನ್ ನನ್ನು ಹುಡುಕಿದ ಕತೆಯಂತೆಯೇ ಇದೆ. ಆದರೆ ಅಲ್ಲಿ ವೀರಪ್ಪನ್ ಸತ್ತ. ಇಲ್ಲಿ ಇನ್ನೂ ಹುಡುಕುತ್ತಲೇ ಇದ್ದಾರೆ. ವಾಸ್ತವಿಕತೆಯ ಸುಂದರ ಚಿತ್ರಣ. ನಮ್ಮ ವ್ಯವಸ್ಥೆಯಲ್ಲಿರುವ ಉಡಾಫೆಗೆ ಒಂದು ನೈಜ ಕನ್ನಡಿ.

    ReplyDelete
  2. nijavada kallaru kaadinalli illa sir avaru irodu nammagala madyene,

    veerappan vishayakke hodre avaniddaga granite minignavaru alli hogalu hedaruttidru aadre eega nidaanavaagi alli mining Shuruvaagta ide
    haagagi namma naduve iro veshada kallara bagge Husharagirabekada avashyakate ide

    ReplyDelete