Tuesday, September 3, 2013

ಪದಗಳು

ಕೃಷ್ಣ
ವಿಚಿತ್ರವಾದರೂ ಸತ್ಯ
ಒಳಗೊಳಗೇ
ಕೃಷ್ಣ ಇಷ್ಟಪಟ್ಟಿದ್ದು
ಗೆಳೆಯ ಅರ್ಜುನನನ್ನಲ್ಲ
ತಂತ್ರಗಾರ ಶಕುನಿಯನ್ನು!

ಕವಿ
ಕವಿ ಹೇಗಿರಬೇಕೆಂದರೆ
ಟೀಕಿಸುವವರೂ
ಒಳಗೊಳಗೇ
ಇಷ್ಟಪಡುವಂತಿರಬೇಕು

ಅರ್ಹ
ಹೊಗಳಿದವರನ್ನಷ್ಟೇ
ಇಷ್ಟ ಪಡುವ ಕವಿ
ತೆಗಳಿಕೆಗೆ
ಹೆಚ್ಚು ಹೆಚ್ಚು
ಅರ್ಹನಾಗುತ್ತಾ ಹೋಗುತ್ತಾನೆ

ಪದ
ಕವಿ ಬೆಳೆದಂತೆ
ಬಳಸುವ
ಪದಗಳ ಸಂಖ್ಯೆ
ಕಿರಿದಾಗುತ್ತಾ
ಬರೂದು

No comments:

Post a Comment