‘‘ಇಲ್ಲಿ ಮಂಟೋ ವಿಶ್ರಮಿಸುತ್ತಿದ್ದಾನೆ. ಅವನೊಂದಿಗೆ ಕಥಾ ಲೋಕದ ಎಲ್ಲ ಕಲೆ ಮತ್ತು ರಹಸ್ಯಗಳು ವಿಶ್ರಮಿಸುತ್ತಿವೆ. ಮಣಗಟ್ಟಲೆ ಮಣ್ಣಿನಡಿ ಮಲಗಿ ಅವನು, ಯಾರು ಉತ್ತಮ ಕತೆಗಾರರು-ದೇವರೋ ಇಲ್ಲವೆ ನಾನೋ ಎಂದು ಯೋಚಿಸುತ್ತಿದ್ದಾನೆ’’ ಇದು ಕತೆಗಾರ ಮಂಟೋ ತನ್ನ ಗೋರಿಯ ಮೇಲೆ ಬರೆಸಬೇಕೆಂದಿದ್ದ ಸಾಲುಗಳು. ಭವಿಶ್ಯದ ಅಸಂಗತ ದಿನಗಳನ್ನು ಕಣಿ ಹೇಳುವವನಂತೆ ಬರೆದ ಕಥೆಗಾರ ಸಾದತ್ ಹಸನ್ ಮಾಂಟೋ. ‘‘ಸ್ಯಾಮ್ ಅಂಕಲ್‌ಗೆ ಪತ್ರಗಳು ಮತ್ತು ಇತರ ಕಿಡಿಗೇಡಿ ಬರಹಗಳು’’ ಅಮೆರಿಕದ ಪ್ರಭುತ್ವದ ಹೂರಣದ ಕುರಿತಂತೆ ಮಾಡಿದ ವ್ಯಂಗ್ಯಗಳು. ಹಿರಿಯ ಲೇಖಕ ಹಸನ್ ನಯೀಂ ಸುರಕೋಡ ಇದನ್ನು ಕನ್ನಡಕ್ಕಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಈ ಬರಹಗಳು ಇನ್ನಷ್ಟು ಪ್ರಸ್ತುತವಾಗಿ ನಮ್ಮೆದುರು ಹೊಳೆಯ ತೊಡಗಿವೆ. ಪಾಕಿಸ್ತಾನದ ದುರಂತವನ್ನು ಹಲವು ದಶಕಗಳ ಹಿಂದೆಯೇ ಈ ಬರಹಗಳ ಮೂಲಕ ಕಂಡಿದ್ದ ಮಂಟೋ. ವರ್ತಮಾನದ ರಾಜಕೀಯ ಬೆಳವಣಿಗೆಗಳ ಕುರಿತ ತನ್ನ ಆಕ್ರೋಶ, ಹತಾಶೆಯನ್ನು ವ್ಯಂಗ್ಯದ ರೂಪದಲ್ಲಿ ಹೊರಚೆಲ್ಲುತ್ತಾರೆ ಮಂಟೋ.
ಇಲ್ಲಿ ಕೃತಿಯನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದರಲ್ಲಿ ಧರ್ಮನಿಷ್ಠರ ಪ್ರಾರ್ಥನೆಯನ್ನು ನೀಡಲಾಗಿದೆ. ಧಾರ್ಮಿಕ ಡಂಭಾಚಾರಗಳನ್ನು ವ್ಯಂಗ್ಯವಾಡುತ್ತಾ, ತನ್ನನ್ನು ಕರೆಸಿಕೋ ಎಂದು ಕೇಳಿಕೊಳ್ಳುತ್ತಾನೆ. ಉಳಿದಂತೆ ಅಮೆರಿಕ ಎಂಬ ಸ್ಯಾಮ್ ಅಂಕಲ್‌ನ ನೀತಿಯನ್ನು ವ್ಯಂಗ್ಯವಾಡುತ್ತಾ ತಮಾಷೆಯಾಗಿ ಬರೆದ ಪತ್ರಗಳು. ಹಾಗೆಯೇ ಪಂಡಿತ ನೆಹರೂ ಅವರಿಗೆ ಪಂಡಿತ ಮಂಟೋ ಪತ್ರವೂ ಅತ್ಯಂತ ತೀಕ್ಷ್ಣವಾಗಿ ಭಾರತ-ಪಾಕಿಸ್ತಾನದ ನಡುವಿನ ರಾಜಕೀಯಗಳನ್ನು ವ್ಯಂಗ್ಯವಾಡುತ್ತದೆ.
ಭಾಗ 3 ಆತ್ಮಾವಲೋಕನಕ್ಕೆ ಸಂಬಂಧಿಸಿದ್ದು. ಅಲ್ಲಿ ಮಂಟೋ ತನ್ನನ್ನೇ ವ್ಯಂಗ್ಯಕ್ಕೀಡು ಮಾಡುತ್ತಾನೆ. ಇದರ ಜೊತೆ ಜೊತೆಗೆ ಮಂಟೋನ ಪರಿಚಯದ ಪುಟಗಳೂ ಇವೆ. ಕನ್ನಡದ ಪಾಲಿಗೆ ಮಂಟೋನನ್ನು ಅತ್ಯಂತ ವಿಶಾಲವಾಗಿ ತೆರೆದಿಡುವ ಪುಸ್ತಕ ಇದು. ಚಿಂತನ ಪುಸ್ತಕ ಬೆಂಗಳೂರು ಕೃತಿಯನ್ನು ಹೊರತಂದಿದೆ. ಕೃತಿಯ ಮುಖಬೆಲೆ 140 ರೂ.

ಒಳ್ಳೆ ಮಾಹಿತಿ.. ಸ್ವಲ್ಪ ಇನ್ನೂ ಉದ್ದದ ಪರಿಚಯ ಮಾಡಬಹುದೇ?
ReplyDelete