ಕನಕ ದಾಸರ ಕುರಿತಂತೆ ಹತ್ತು ಹಲವು ಲೇಖನಗಳು ಬಂದಿರಬಹುದು. ಆದರೆ ಅವೆಲ್ಲ ಕನಕರ ಸಮಗ್ರ ಭಕ್ತಿ ಬರಹಗಳನ್ನು ತೆರೆದಿಡುವಂತಹದಲ್ಲ. ಜಾತಿ ಮತ್ತು ಕನಕನ ಬಂಡಾಯ ಸುದ್ದಿಯಾದಷ್ಟು ಅವರ ಇತರ ಬರಹಗಳು ಸುದ್ದಿಯಾಗಿಲ್ಲ. ‘ಕನಕ ಚಿಂತನ’ ಕೃತಿ ದಾಸರ ಕುರಿತ ಈ ಕೊರೆತಗಳನ್ನು ನೀಗಿಸುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ
ಕೇಂದ್ರದ ಕನಕ ಚಿತನ ಮಾಲಿಕೆಯ ಭಾಗವಾಗಿ 2011-12 ಸಾಲಿನ ಕೃತಿ ಇದು. ಸಂಪಾದಕರಾಗಿ ಡಾ.
ಬಿ. ಶಿವರಾಮಶೆಟ್ಟಿ ಕೆಲಸ ಮಾಡಿದ್ದಾರೆ. ಸಹ ಸಂಪಾದಕರಾಗಿ ರಾಧಿಕಾ, ನಿತಿನ್ ಪಿ. ಎಸ್,
ಮೊನಿಷಾ ಜೊತೆಗೂಡಿದ್ದಾರೆ. ಕನಕ ದಾಸರ ಕೃತಿಗಳನ್ನು ಸಮಕಾಲೀನ ಸಂವಾದದ ನೆಲೆಯಲ್ಲಿ ಮರು
ಓದು ನಡೆಸುವ ಉದ್ದೇಶವನ್ನು ಮಾಲಿಕೆ ಹೊಂದಿದೆ ಎಂದು ಸಂಪಾದಕರು ಹೇಳಿದ್ದಾರೆ.
ಕನಕದಾಸರ ನಳಚರಿತ್ರೆ, ಹರಿಭಕ್ತಿಸಾರ, ಮೊದಲಾದವುಗಳ ಕುರಿತಂತೆ ಈ ಕೃತಿ ಮಾತನಾಡುತ್ತದೆ. ಈ ಕೃತಿಗಳಲ್ಲಿ ಸಮಕಾಲೀನತೆಯನ್ನು ಹುಡುಕುವ ಪ್ರಯತ್ನವನ್ನು ಜ್ಯೋತಿ ಚೇಳ್ಯಾರು, ಡಾ. ದಾದಾಪೀರ್, ಡಾ. ಜಯಪ್ರಕಾಶ್ ಶೆಟ್ಟಿ ಮೊದಲಾದವರು ಮಾಡುತ್ತಾರೆ. ಪ್ರೊ. ತೀ.ನಂ. ಶಂಕರನಾರಾಯಣ, ಡಾ. ಜಿ. ಭಾಸ್ಕರ ಮಯ್ಯ ನಾಗವೇಣಿ ಮೊದಲಾದವರ ಪ್ರಬುದ್ಧ ಬರಹಗಳು ಗಮನ ಸೆಳೆಯುತ್ತದೆ. ಹೊಸತೊಂದು ಚರ್ಚೆಗೆ ಇದು ಪೀಠಿಕೆ ಹಾಕುತ್ತದೆ. ತಾಳ್ತಜೆ ವಸಂತಕುಮಾರ್, ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ರಾಜಾರಾಂ ತೋಳ್ಪಾಡಿ, ವಿ. ಗ. ನಾಯಕ್ ಅವರ ಅವರ ಬರಹಗಳು ಒಟ್ಟು ಕೃತಿಯ ಸಂಶೋಧನಾ ನೆಲೆಯನ್ನು ಹಿಗ್ಗಿಸುತ್ತದೆ.
ಭಕ್ತಿ ಪಂಥದ ಸಂದರ್ಭಗಳ ಕುರಿತಂತೆ ಆಸಕ್ತಿ ಇರುವವರಿಗೆ ಇದೊಂದು ಮಹತ್ವದ ಕೃತಿಯೇ ಆಗಿದೆ. ಕೃತಿಯ ಮುಖಬೆಲೆ 150 ರೂ.

No comments:
Post a Comment