ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ದಿ ಆರ್ಟಿಸ್ಟ್ ಚಿತ್ರವನ್ನು ನೋಡಿದ ಖುಷಿಯನ್ನಿಲ್ಲಿ ಹಂಚಿಕೊಂಡಿದ್ದೇನೆ.
ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ‘ದಿ ಆರ್ಟಿಸ್ಟ್’ ಚಿತ್ರವನ್ನು ನೋಡು ನೋಡುತ್ತಿದ್ದಂತೆಯೇ ಅದು ನಿಮ್ಮನ್ನು ದಿಗ್ಭ್ರಮೆಗೆ ಕೆಡಹುತ್ತದೆ. ಅರೆ...ಇದೇನಿದು! ಎನ್ನುವು ಉದ್ಗಾರವೊಂದು ನಿಮ್ಮಿಂದ ಹೊರ ಬಿದ್ದರೂ ಬೀಳಬಹುದು. ಆಧುನಿಕ ಸಿನಿಮಾಗಳ ವ್ಯಾಕರಣಗಳಲ್ಲಿ ಒಂದಾಗಿ ಬಿಟ್ಟಿರುವ ತಂತ್ರಜ್ಞಾನ, ಮಾತಿನ ಅಬ್ಬರ, ಅದ್ದೂರಿತನ ಇವೆಲ್ಲವುಗಳಿಂದ ನಿಮ್ಮನ್ನು ಸುಮಾರು 80 ವರ್ಷಗಳ ಹಿಂದಕ್ಕೆ ಕೊಂಡೊಯ್ಯುತ್ತದೆ. ಮಾತುಗಳಾಚೆಯ ವೌನವೊಂದರಲ್ಲಿ ನೀವು ಕಳೆದು ಹೋಗಿ ಬಿಡುತ್ತೀರಿ.
ಹೌದು. ದಿ ಆರ್ಟಿಸ್ಟ್ ಚಿತ್ರ ಒಂದು ರೀತಿಯಲ್ಲಿ ಮೂಕ ಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಬ್ಲಾಕ್‌ಎಂಡ್ ವೈಟ್ ಚಿತ್ರ. ಪುರಾತನ ತಂತ್ರಜ್ಞಾನಗಳನ್ನೇ ಬಳಸಿ ತೆಗೆದ ಚಿತ್ರ. ಆದರೆ ಕತೆ ಹೇಳುವ ತಂತ್ರ ಮತ್ತು ಒಟ್ಟು ಸಿನಿಮಾದ ನಿರೂಪಣೆ ಮಾತ್ರ ಅತ್ಯಾಧುನಿಕವಾದುದು. ಮೂಕಿ-ಟಾಕಿ ಚಿತ್ರಗಳ ನಡುವಿನ ಸಂಘರ್ಷದಂತೆ ಕಾಣುವ ಈ ಚಿತ್ರ ಮಾತು-ವೌನಗಳ ನಡುವಿನ ತಿಕ್ಕಾಟವೂ ಹೌದು. ಮೂಕಿ ಚಿತ್ರಗಳ ಯುಗದಲ್ಲಿ ಸ್ಟಾರ್ ಆಗಿದ್ದ ಕಥಾನಾಯಕ, ಟಾಕಿ ಚಿತ್ರಗಳನ್ನು ಒಪ್ಪಿಕೊಳ್ಳಲು ಸಿದ್ಧನಾಗದೆ ತನ್ನ ವೌನದೊಳಗೇ ಕುಸಿಯುತ್ತಾ ಹೋಗುವ ಕತೆ ‘ದಿ ಆರ್ಟಿಸ್ಟ್’. ಅವನ ಅಹಂ ಬರೇ ಚಿತ್ರದ ಮಾತುಗಳಿಗೆ ಮಾತ್ರವಲ್ಲ, ತಾನು ಇಷ್ಟ ಪಡುವ ತರುಣಿಯ ಮಾತುಗಳಿಗೂ ಕಿವುಡಾಗುತ್ತದೆ. ಅವಳೊಳಗಿನ ಮಾತುಗಳನ್ನು ಕೇಳಿಸಿಕೊಳ್ಳುವಲ್ಲೂ ವಿಫಲನಾಗುತ್ತಾನೆ. ಒಂಟಿಯಾಗುತ್ತಾನೆ. ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಕೊನೆಗೂ ತನ್ನ ಅಹಂನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ನಾಯಕ ಆತ್ಮಹತ್ಯೆಗೆ ಮುಂದಾಗುತ್ತಾನೆ. ಆದರೆ ಕಟ್ಟಕಡೆಯಲ್ಲಿ ಕಥಾನಾಯಕಿಯ ಮಾತುಗಳನ್ನು ಕಿವಿಕೊಡುವ ಧೈರ್ಯ ತೋರಿ ಉಳಿಯುತ್ತಾನೆ. ಅಲ್ಲಿಯವರೆಗೆ ಮೂಕವಾಗಿದ್ದ ಚಿತ್ರ ಒಮ್ಮಿಂದೊಮ್ಮೆ ಮಾತನಾಡತೊಡಗುತ್ತದೆ.

ಅದು ಮೂಕಿ ಚಿತ್ರಗಳ ಯುಗ... ನಟ ಜಾರ್ಜ್ ವಾಲೆಂಟಿನ್ (ಜೀನ್ ಡುಜಾರ್ಡಿನ್) ಆಗ ಮೂಕಿಚಿತ್ರರಂಗದ ಅನಭಿಷಕ್ತ ರಾಜನೇ ಆಗಿದ್ದ. ಆತನಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಅಗತ್ಯವೇ ಇಲ್ಲ. ಆತ ತನ್ನ ಮುಖ ಹಾಗೂ ಅಂಗಿಕ ಹಾವಭಾವಗಳ ಮೂಲಕ ಯಾವುದೇ ಭಾವನೆಗಳಿಗೂ ಜೀವತುಂಬಬಲ್ಲ. ಆತನಿಗೆ ತನ್ನ ಚಿತ್ರ ಸೂಪರ್ ಹಿಟ್ ಆಗಲು ಸಹನಟರ ಅಗತ್ಯವೇ ಇಲ್ಲ. ಬೆಳ್ಳಿ ತೆರೆಯಲ್ಲಿ ವಾಲೆಂಟಿನ್‌ನ ಅಚ್ಚುಮೆಚ್ಚಿನ ಸಂಗಾತಿಯೆಂದರೆ, ಅತ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಆತನ ಮುದ್ದಿನ ನಾಯಿ ಮಾತ್ರ. ಹೀಗೆ ಸಿನೆಮಾದಲ್ಲಿ ಯಾವುದೇ ಪಾತ್ರ ಮಾಡಲಿ, ಜನಮುಗಿಬಿದ್ದು ಆತನ ಚಿತ್ರ ನೋಡುತ್ತಾರೆ. ಚಿತ್ರ ಭರ್ಜರಿ ಯಶಸ್ಸು ಪಡೆಯುತ್ತದೆ.
ಆದರೆ ಕಾಲ ಚಲಿಸುತ್ತಿರುತ್ತದೆ. ಮೊತ್ತ ಮೊದಲ ಬಾರಿಗೆ ಅವನ ಮೂಕಿ ಚಿತ್ರಗಳ ಕೋಟೆಯೊಳಗೆ ಮಾತಿನ ಪಿಸುಮಾತು ಕೇಳುತ್ತದೆ. ನಿಧಾನವಾಗಿ ಟಾಕಿ ಚಿತ್ರಗಳ ಯುಗ ಆರಂಭವಾಗುತ್ತದೆ. ಆದರೆ ನಾಯಕ ಅದನ್ನು ಸ್ವೀಕರಿಸಲು ಸಿದ್ಧನಿಲ್ಲ. ಸಿನಿಮಾದಲ್ಲಿ ಮಾತು ಎನ್ನುವುದು ಅವನಿಗೆ ತಮಾಷೆಯ ವಸ್ತುವಾಗುತ್ತದೆ. ಆದರೆ ಹೊಸ ತಲೆಮಾರು ಇವನನ್ನು ಕಾಯುವುದಿಲ್ಲ. ಅದು ಇವನನ್ನು ಬದಿಗೆ ತಳ್ಳಿ ಮುಂದುವರಿಯುತ್ತದೆ. ಚಾರ್ಜ್‌ನಿಂದಲೇ ನಟಿಯಾಗುವ ಸೌಭಾಗ್ಯಕಂಡ ಪೆಪ್ಪಿಮಿಲ್ಲರ್ ಮೊದಲ ಬಾರಿ ಬೆಳ್ಳಿತೆರೆಯಲ್ಲಿ ಮಾತನಾಡತೊಡಗುತ್ತಾಳೆ. ಟಾಕಿ ಚಿತ್ರಕ್ಕೆ ಸವಾಲಾಗಿ ಜಾರ್ಜ್ ವ್ಯಾಲೆಂಟಿನ್ ಕೂಡ ಒಂದು ಮೂಕಿ ಚಿತ್ರವನ್ನು ತೆಗೆಯುತ್ತಾನೆ. ಅದರ ಹೆಸರು ಟಿಯರ್ಸ್ ಆಫ್ ಲವ್. ತನ್ನೆಲ್ಲ ಸಂಪತ್ತನ್ನು ಅದರಲ್ಲಿ ಹೂಡುತ್ತಾನೆ. ತಾನೆ ನಾಯಕ, ನಿರ್ದೇಶಕ, ನಿರ್ಮಾಪಕ. ಆದರೆ ಇತ್ತ ಟಾಕಿ ಚಿತ್ರದ ನಾಯಕಿ ಅವನೇ ಬೆಳೆಸಿದ ಪೆಪ್ಪಿ ಮಿಲ್ಲರ್. ಜಾರ್ಜ್‌ನ ಚಿತ್ರ ಮೊದಲ ದಿನವೇ ಮುಗ್ಗರಿಸುತ್ತದೆ. ಆದರೆ ಮೊದಲ ದಿನ ಪೆಪ್ಪಿ ಮಿಲ್ಲರ್ ಆ ಚಿತ್ರವನ್ನು ಬಾಲ್ಕನಿಯಲ್ಲಿ ಕೂತು ನೋಡುತ್ತಿರುತ್ತಾಳೆ. ಅವಳು ಆ ಚಿತ್ರವನ್ನು ನೋಡಿ ಕಣ್ಣೀರು ಸುರಿಸುತ್ತಾಳೆ. ಆ ಮೂಕ ಚಿತ್ರದ ಸಂದೇಶ ಅವಳನ್ನು ತಟ್ಟಿರುತ್ತದೆ. ಅವಳು ತನ್ನ ಅಭಿನಂದನೆಯನ್ನು ತಿಳಿಸಲು ಜಾರ್ಜ್ ವ್ಯಾಲೆಂಟಿನ್ ಮನೆಗೆ ಬರುತ್ತಾಳೆ. ಆದರೆ ಅಷ್ಟರಲ್ಲೇ ಪತನದ ಅಂಚಿನಲ್ಲಿದ್ದ ಅವನಿಗೆ ಪೆಪ್ಪಿ ಮಿಲ್ಲರ್ ತನ್ನನ್ನು ವ್ಯಂಗ್ಯ ಮಾಡುವುದಕ್ಕೆ ಬಂದಿದ್ದಾಳೆ ಎಂದು ತಪ್ಪು ತಿಳಿಯುತ್ತಾನೆ. ಅವಳೊಳಗಿನ ಮೂಕ ಮಾತುಗಳಿಗೆ ಕಿವುಡಾಗುತ್ತಾನೆ.
‘‘ನಾನು ನಿನ್ನ ಚಿತ್ರವನ್ನು ನೋಡಿದೆ...’’ ಎಂದು ನಾಯಕಿ ಹೇಳುತ್ತಾಳೆ.
‘‘ಓಹೋ...ಟಿಕೆಟ್‌ನ ಹಣವನ್ನು ವಾಪಾಸ್ ಕೇಳಲು ಬಂದೆಯ?’’ ನಾಯಕ ಅಣಕಿಸುತ್ತಾನೆ.
ಒಬ್ಬ ಕಲಾವಿದ ಆಧುನಿಕತೆಗೆ ತೆರೆದುಕೊಳ್ಳದೆ, ಹೊರಗಿನ ಮಾತುಗಳಿಗೆ ಕಿವುಡಾಗುತ್ತಾ, ತನ್ನೊಳಗಿನ ಅಹಂನ್ನು ಪೋಷಿಸುತ್ತಾ ಹೋದಾಗ ಏನಾಗುತ್ತದೆಯೋ ಅದೇ ಅವನಿಗೂ ಆಗುತ್ತದೆ. ಅವನಿಗೆ ಕನಸು ಬೀಳುತ್ತದೆ. ಅದರಲ್ಲಿ ಎಲ್ಲವೂ ಸದ್ದು ಮಾಡತೊಡಗಿವೆ. ಆಕಾಶದಿಂದ ಉದುರಿದ ಹಕ್ಕಿ ಗರಿ ನೆಲಕ್ಕೆ ಬಿದ್ದಾಗ ದೊಡ್ಡ ಬಾಂಬ್ ಸ್ಫೋಟಿಸಿದಂತಹ ಸದ್ದು ಅವನಿಗೆ ಕೇಳಿಸುತ್ತದೆ. ಅವನು ತನ್ನ ಸುತ್ತಲೂ ಕಟ್ಟಿಕೊಂಡ ಮೂಕ ಜಗತ್ತಿನ ಕೋಟೆಗೆ ಮಾತು ದೊಡ್ಡ ಬಿರುಕನ್ನು ಮಾಡಿತ್ತು.
ಮೂಕಿ ಯುಗದ ನಾಯಕ ಜಾರ್ಜ್ ವ್ಯಾಲೆಂಟನ್‌ನ ಪಾತ್ರದಲ್ಲಿ ಜೀನ್ ಡುವಾರ್ಜಿನ್ ಅದ್ಬುತ ಅಭಿನಯ ನೀಡಿದ್ದಾರೆ. ಆತ ನಿಜಕ್ಕೂ ನಮ್ಮನ್ನು 1920ರ ದಶಕದ ಮೂಕಿ ಚಿತ್ರಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ. ಆತನ ತುಂಟತನದ ಮೀಸೆ,ನೀಟಾಗಿ ಬಾಚಿದ ಕೂದಲು, ಜಂಭತನ ಹಾಗೂ ನೃತ್ಯದ ಮೂಲಕ ಮೂಕಿಚಿತ್ರಗಳ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಕೊನೆಯವರೆಗೂ ನಾಯಕನಿಗೆ ಸಾಥ್ ನೋಡುವ ಪುಟ್ಟ ನಾಯಿ ಮಾತುಗಳನ್ನು ಮೀರಿ ನಮ್ಮನ್ನು ತಲುಪುತ್ತದೆ. ನಾಯಕನಿಗೆ ಕೊನೆಯವರೆಗೂ ಮನುಷ್ಯ ಭಾಷೆಯನ್ನು ಅರಿಯದ ಈ ಮೂಕ ನಾಯಿ ಧ್ವನಿಯಾಗುತ್ತದೆ.
ಚಿತ್ರವನ್ನು ಮೂಕಿ ಚಿತ್ರವಾಗಿ, 1930ರ ಸಂದರ್ಭದ ಚಿತ್ರದಂತೆಯೇ ತೋರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಚಿತ್ರವನ್ನು ಲವಲವಿಕೆಯಿಂದ, ತಮಾಷೆಯ ರೂಪದಲ್ಲಿ ಹೇಳುತ್ತಾ ವೌನವಾಗಿ ಹೇಳುತ್ತಾ ಹೋಗುತ್ತಾರೆ ಹಾಗೆಂದು ಇದು ಸಂಪೂರ್ಣವಾಗಿ ಮೂಕಿಚಿತ್ರವೆನ್ನುವಂತಿಲ್ಲ. ಅಲ್ಲಲ್ಲಿ ಸದ್ದುಗಳನ್ನು ರೂಪಕದಂತೆ ಬಳಸಿದ್ದಾರೆ. ಚಿತ್ರದ ಕ್ಲೈಮಾಕ್ಸ್ ಮಾತಿನೊಂದಿಗೆ ಆರಂಭವಾಗುತ್ತದೆ.ನಿರ್ದೇಶಕ ಮೈಕೆಲ್ ಹಝಾನಾವಿಸಿಯಸ್ ಪ್ರತಿಭೆಗೆ ಸಾಟಿಯೇ ಇಲ್ಲ. ಒಂದು ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಬ್ಬರದಲ್ಲಿ ಮೈಮರೆತಿರುವ ಹಾಲಿವುಡ್‌ನ್ನು ತನ್ನ ಪುಟ್ಟ ಮೂಕಿ ಚಿತ್ರದ ಮೂಲಕ ಅಣಕಿಸುತ್ತಾರೆ. ಈ ಮೂಕ, ಕಪ್ಪು ಬಿಳುಪು ಚಿತ್ರದ ಮುಂದೆ ಬಾಲಿವುಡ್ ಅಬ್ಬರಗಳು, ಅದ್ದೂರಿತನ ಅರ್ಥಹೀನವಾಗಿಬಿಡುತ್ತವೆ.
ಸಂಭಾಷಣೆಯೇ ಇಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಅತ್ಯಂತ ಮಧುರವಾಗಿದೆ. ಚಾರ್ಲಿ ಚಾಪ್ಲಿನ್ ಚಿತ್ರಗಳ ಹಿತಾನುಭವವನ್ನು ಆರ್ಟಿಸ್ಟ್ ಚಿತ್ರ ನಮಗೆ ನೀಡುತ್ತದೆ. ಒಂದರ್ಥದಲ್ಲಿ ಆರ್ಟಿಸ್ಟ್ ಮೂಕಿ ಚಿತ್ರಗಳ ಯುಗಕ್ಕೆ ಸಲ್ಲಿಸಿದ ಶ್ರದ್ಧಾಂಜಲಿ ಎಂದರೂ ತಪ್ಪಾಗಲಾರದು.

mmmm am already loving it!!!cant wait to see this movie....
ReplyDeletemalathi S