Tuesday, October 8, 2013

ನಿನ್ನೆ ಉದುರಿದ ಹನಿಗಳು

 1
ತುಂಬಿದ ಮನ
ತುಳುಕೂದು
ಕಣ್ಣಲ್ಲಿ
2
ಇಲ್ಲ, ನಾನಿನ್ನು ಯಾರನ್ನೂ
ನೋಯಿಸೂದಿಲ್ಲ ಎಂದೆ
ಅಷ್ಟಕ್ಕೇ ಅವನು ನೊಂದು ಬಿಟ್ಟ
3
ನನ್ನ ಕೈಯಲ್ಲಿರುವ
ಒಂದು ತುತ್ತು
ಅನ್ನ
ಬಾಯಿಗಿಡುವ ಮುನ್ನ...
ಯಾರದೋ ಬಟ್ಟಲಿಂದ
ಕಸಿದುಕೊಂಡೆನೆನ್ನುವ
ತಳಮಳ
4
ನಾನು ಅವನೆಡೆಗೆ
ಬೀಸಿದ ಕತ್ತಿ ಏಟಿಗಿಂತ
ಹರಿತವಾಗಿತ್ತು
ಅವನ ಕ್ಷಮೆ
5
ಅವಳೊಂದು
ಜೇನು
ಗೂಡು
6
ಮನೆ
ಕತ್ತಲು

ಕ್ಷರದಿಂದ
ಹಣತೆ ಹಚ್ಚಿದಳು
7
ಕವಿತೆ ಬರೆದಾದ ಮೇಲೆ
ಇದನೆಲ್ಲೋ
ಓದಿದಂತಿದೆಯಲ್ಲ
ಎಂಬ ಕಳ್ಳ ಭಾವ
8
ಕಣ್ಣು ದಾನ ಮಾಡಿ
ನಾನು ಸತ್ತೆ
ಇದೀಗ ನನ್ನ ಗೋರಿಯ
ಮುಂದೆ ನನ್ನದೇ ಕಣ್ಣುಗಳು
ಕೃತಜ್ಞತೆಯಿಂದ
ಅಳುತ್ತಿವೆ

4 comments:

  1. ಮಘೆ ಮಳೆಯಂತಿವೆ ಹನಿಗಳು...ಹೀಗೇ ಬರುತ್ತಿರಲಿ ಎಂದು ಹಾರೈಕೆ

    ReplyDelete