Wednesday, January 18, 2012

ದರೋಡೆ!

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಹೋದೆ.
‘‘ಟಿಕೆಟ್ ಬೆಲೆ 200’’ ಎಂದು ಆಕೆ ಇಂಗ್ಲಿಷ್‌ನಲ್ಲಿ ಹೇಳಿದಳು.
ನಗುತ್ತಾ ದುಡ್ಡು ಕೊಟ್ಟು, ನಾನೇ ಆಕೆಗೆ ‘‘ಥ್ಯಾಂಕ್ಸ್’’ ಎಂದೆ.
ಇಂಟರ್‌ವೆಲ್.
ಒಂದು ಟೀ ಕುಡಿದೆ. ‘‘ಎಷ್ಟು?’’ ಎಂದು ಕೇಳಿದೆ
‘‘40 ರೂ.’’ ಎಂದ.
ಜೋಳಪುರಿ ತೆಗೆದುಕೊಂಡೆ.
ಎಷ್ಟು ಎಂದು ಕೇಳಿದೆ.
‘‘70 ರೂ.’’ ಎಂದು ಇಂಗ್ಲಿಷ್‌ನಲ್ಲಿ ನುಡಿದ.
ನಾನು ನಗು ನಗುತ್ತಾ ಅವನಿಗೆ ಪಾವತಿಸಿದೆ.
ಚಿತ್ರ ಮುಗಿದ ಬಳಿಕ, ರಸ್ತೆಗೆ ಬಂದೆ.
ಆಟೋದವನನ್ನು ಕರೆದೆ.
ಮನೆ ತನಕ ಬಿಟ್ಟ.
ಮೀಟರ್ 28 ರೂ. ತೋರಿಸುತ್ತಿತ್ತು.
ಎರಡು ರೂ. ಚಿಲ್ಲರೆ ಇಲ್ಲ ಎನ್ನುತ್ತಿದ್ದಾನೆ.
ಈ ಆಟೋದವರ ನಾಟಕ ನನಗೆ ಚೆನ್ನಾಗಿ ಗೊತ್ತು
‘‘ಚಿಲ್ಲರೆ ಇಲ್ಲ ಅಂದರೆ ಯಾಕೆ ಆಟೋ ಇಟ್ಟಿದ್ದೀಯ?’’
ನಾನು ನನ್ನ ಹಕ್ಕಿಗಾಗಿ ಹೋರಾಡ ತೊಡಗಿದೆ.
ಪ್ರಶ್ನೆ 2 ರೂಪಾಯಿಯದ್ದಲ್ಲ. ಆಟೋ ಚಾಲಕರು ಮಾಡುತ್ತಿರುವ ದರೋಡೆಯದ್ದು..
ಕೊನೆಗೂ ಆತ ಯಾರಲ್ಲೋ  ಬೇಡಿ ಎರಡು ರೂ. ತಂದುಕೊಟ್ಟ.
ಒಂದು ದೊಡ್ಡ ದರೋಡೆಯಿಂದ ಪಾರಾದ ಸಂತಸ ನನಗೆ.
ವಿಸಿಲ್ ಹಾಕುತ್ತಾ ಮನೆಯ ಕಡೆ ನಡೆದೆ.

4 comments:

  1. ಸಮಾಜದ ಕಪ್ಪುಮುಖವಾಡವನ್ನ ಅದ್ಭುತವಾಗಿ ಅನಾವರಣ ಮಾಡಿದ್ದೀರಿ. ಐಷಾರಾಮಕ್ಕಾಗಿ/ಪಾಶ್ಚಿಮಾತ್ಯ ಅನುಕರಣೆಗಾಗಿ ನೀರುಚೆಲ್ಲಿದಂತೆ ಖರ್ಚುಮಾಡುವ ಪಾಪಿ ಸಮಾಜ ಸ್ಥಳೀಯ ಸಂಸ್ಕೃತಿಯನ್ನ ಪ್ರೋತ್ಸಾಹಿಸದೇ ಪಾಶ್ಚಿಮಾತ್ಯರ 'ಸಂಸ್ಕೃತಿಯ ಮೇಲಿನ ಅತ್ಯಾಚಾರ'ಕ್ಕೆ ಬೆಂಬಲಾವಾಗಿ ನಿಂತಿರುವುದು ವಿಷಾಧನೀಯ. ಮಾರ್ಮಿಕವಾಗಿದೆ ಈ ಬರವಣಿಗೆ...

    ReplyDelete
  2. ನಮ್ಮಲ್ಲಿನ ದ್ವಂದ್ವ ವಿಪರ್ಯಸವನ್ನ ಚೆನ್ನಾಗಿ ಹೇಳಿದ್ದಿರಾ...

    ReplyDelete
  3. chennaagi hELideeri Basheer. mukhakke hodeda haagaaytu. innomme auto davara jate chillarege kittaaDuvaaga ondu kshaNa yOchisteeni. naachke aagOytu...

    ReplyDelete
  4. ಆಮೇಲೆ ಬೆಳಗ್ಗೆ ಸೊಪ್ಪಿನ ಗಾಡಿ ಬಂದಾಗ ಕೊತ್ತಂಬ್ರಿ ಸೊಪ್ಪಿನ ಬೆಲೆ ಹೆಚ್ಚೆಂದು ಗಲಾಟೆ ಮಾಡುವವರನ್ನೂ ನೀವು ನೋಡಿರಬಹುದು!!

    ReplyDelete