Tuesday, November 22, 2011

ದೇಶ

ಅಂದು ಮುಂಜಾನೆ ಎದ್ದು ನೋಡುತ್ತೇನೆ...
ಭಾರತ ಕಾಣೆಯಾಗಿದೆ
ಎಲ್ಲಿ ಹೋಯಿತು?
ಮಲಗುವವರೆಗೂ
ತನ್ನ ತ್ರಿವರ್ಣ ಸೆರಗನ್ನು
ಹಾರಿಸುತ್ತ ಬಿಂಕ ಬಿನ್ನಾಣದಿಂದ ಇಲ್ಲೇ ಓಡಾಡುತ್ತಿತ್ತಲ್ಲ
ಎಂದು ಹಿತ್ತಲಿಗೆ ಬಂದರೆ...
ತೆರೆದ ಮಲದ ಗುಂಡಿಯಲ್ಲಿ

ನನ್ನ ದೇಶದ ಹೆಣ ತೇಲುತ್ತಿತ್ತು!

5 comments:

  1. ಓದುವಾಗ ತುಂಬಾ ಅಸ್ವಾಧನೆಗೆ ಸಿಕ್ಕ ಕವಿತೆ ಬಷೀರ್.ಪ್ರತಿಮೆಯನ್ನು ಹಾಗೇ ಬೆಳೆಸುತ್ತಾ ಹೋಗಿದ್ದೀರಿ. ಕಂಪನದಿಂದ ಪ್ರಾರಂಭಾವ ಭಾವ ತೀವ್ರತೆ,ಅಂತ್ಯದಲ್ಲಿ ಮತ್ತೊಮ್ಮೆ ಕಂಪಿಸಿ ಎದೆಯಲ್ಲಿ ರಿಂಗಣಿಸಿದೆ.ತುಂಬಾ ಉತ್ತಮ ಕವಿತೆ. ಶುಭವಾಗಲಿ.

    ReplyDelete
  2. ಭಾರತದ ಭವಿಷ್ಯದ ಆತಂಕ ವ್ಯಕ್ತವಾಗಿದೆ ಈ ಬರಹದಲ್ಲಿ. ನಿಜಕ್ಕೂ ಉತ್ತಮ ಸಂದೇಶವನ್ನೋಳಗೊಂಡಿದೆ.

    ReplyDelete
  3. ಗೆಳೆಯರೇ, ಈ ಕವಿತೆ ಕೋಲಾರದಲ್ಲಿ ಮೂವರು ದಲಿತರು ಮಲದ ಗುಂಡಿಯ ಶುಚಿಗೊಳಿಸುವ ಸಂದರ್ಭದಲ್ಲಿ ಮಲದ ಗುಂಡಿಗೆ ಬಿದ್ದು ಸತ್ತ ಸಂದರ್ಭದಲ್ಲಿ ಬರೆದದ್ದು.

    ReplyDelete
  4. ನಿಮ್ಮ ಕವಿತೆಯಲ್ಲಿರುವ " ನಾನು" ಅನ್ನುವ ಪ್ರತಿಮೆಗೆ ನನ್ನನ್ನೇ ಹೋಲಿಸಿಕೊಂಡಿದ್ದೇನೆ.ಕುರಾನ್ ನಾನು ಅರ್ಧಂಬರ್ಧ ಓದಿದ್ದು. ನೀವು ಒಕ್ಕಣಿಸಿರುವ ವಾಕ್ಯಾರ್ಥವನ್ನು ಓದಿದ್ದು ನೆನೆಪಿದೆ.ನನ್ನ ವಿರುದ್ಧ ಜಗತ್ತು ಮೊದಲು ಯುದ್ಧ ಸಾರಲಿ. ಜಗತ್ತು ಗೆದ್ದರೆ ನಾನು ಹೆಣವಾಗುವೇನು.ನಾನೇ ಗೆದ್ದರೆ ಜಗತ್ತು ನನ್ನದಾಗುವುದು.ಈ ನನ್ನ ವಾಕ್ಯವನ್ನು ಭಾವದ ಮಜಲುಗಳಿಗೆ ಈಗಷ್ಟೆ ತಿಕ್ಕಿದ್ದೇನೆ. ತುಂಬಾ ಸುಂದರ ಕವಿತೆ ಬಷೀರ್.ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ನಮಾಜು ಅನ್ನುವ ದೇವರ ಪ್ರಾರ್ಥನೆಗೆ ಐದು ವರ್ಷಗಳ ಹಿಂದೆ "ಝೈನಬ" ಅನ್ನುವ ಪ್ರತಿಮೆಯಲ್ಲಿ ಕವಿತೆ ಕೆತ್ತಿದ್ದೆ. ಎಲ್ಲಿಯೂ ಪ್ರಕಟಿಸಿಲ್ಲ. ನಿಮ್ಮ ಕವಿತೆ ಓದುವಾಗ ಆ ಪ್ರತಿಮೆಯ ಧೂಳು ಒರೆಸುತ್ತಿದ್ದೇನೆ. ಈಗಷ್ಟೆ ನನ್ನ ಕರಡು ಕಟ್ಟಿನಿ೦ದ ಹೊರತೆಗೆದು ನೋಡುತ್ತಿದ್ದೇನೆ. ಮತ್ತೊಮ್ಮೆ ವಂದನೆಗಳು.

    ReplyDelete
  5. Mr.Bhasheer, Neevu upayogisida chitra kavanakke honduttilla :) nanu chitra nodi neevu swatantrotsavada sandarbhadalli plastic roopa padedu durbhalakeyaguva trivarna dhwajada bagge heltaa iddeera andukondu bittidde :)nimmade hittalalli neevallade innaru esedaaru annuva teermaanakkoo bandu bittidde ! matte gottaytu neevu maarmikavaagi mala horuva heena sampradaayada bagge eno hela bayasiddu endu. madidavarige nanna santaapagalu matthu intaha heena samskrutige nanna virodhavoo sada ide.

    ReplyDelete