Wednesday, September 14, 2011

ಮಾಧ್ಯಮ ಲೋಕ ಮತ್ತು ಅಣ್ಣನ ನೆನಪು











ಇತ್ತೀಚಿಗೆ ಸಂಪಾದಕೀಯ ಬ್ಲಾಗ್ನಲ್ಲಿ ಮಾಧ್ಯಮ ಲೋಕವನ್ನು ಕಾಡುತ್ತಿರುವ ಬ್ರಷ್ಟಾಚಾರದ ಕುರಿತ ಲೇಖನ ಓದಿದಾಗ ಯಾಕೋ ನನಗೆ ನನ್ನ ಅಣ್ಣನ ನೆನಪಾಯಿತು.

ಇದು ನನ್ನ ಅಣ್ಣ ಬದುಕಿದ್ದಾಗ ಆತ ತನ್ನ ಗೆಳೆಯನೋಬ್ಬನೊಂದಿಗೆ ಸಿಟ್ಟಿನಿಂದ ಹಂಚಿಕೊಂಡಿದ್ದನ್ನು ಕೇಳಿಸಿ ಕೊಂಡಿದ್ದು. ಅದು ಮಂಗಳೂರಿನ ಸುರತ್ಕಲಿನ ಕೋಮು ಗಲಭೆಯ ಸಂದರ್ಭ.( ಅಣ್ಣ ಆಗ ಲಂಕೇಶ್ ಪತ್ರಿಕೆ ಅಥವಾ ಹಾಯ್ ಬೆಂಗಳೂರು...ಇವೆರಡರಲ್ಲಿ ಯಾವುದೋ ಒಂದು ಪತ್ರಿಕೆಗೆ ದ. ಕ. ಜಿಲ್ಲೆಯ ವರದಿಗಾರನಾಗಿದ್ದ. ) ಸುರತ್ಕಲ್ ಗಲಭೆಯಲ್ಲಿ ಮುಸ್ಲಿಮರೆ ಅತಿ ಹೆಚ್ಚು ಸಂತ್ರಸ್ತರಾಗಿದ್ದವರು. ಒಂದಿಷ್ಟು ಮುಸ್ಲಿಂ ಮುಖಂಡರು ಅಣ್ಣನನ್ನು ಸಂತ್ರಸ್ತ ಪ್ರದೇಶದ ಸ್ಥಳ ವೀಕ್ಷಣೆಗೆಂದು ಕರೆದೊಯ್ದಿದ್ದರು. ಅವನು ಹೋದಾಕ್ಷಣ ಪ್ರದೇಶದ ಮುಸ್ಲಿಮರು ಸುತ್ತುಗಟ್ಟಿ ತಮ್ಮ ಗೋಳನ್ನು ಹೇಳತೊಡಗಿದರಂತೆ. ಹಲವರು ಕಣ್ಣೀರು ಇಟ್ಟರಂತೆ. ಅಲ್ಲಿನ ಸ್ಥಿತಿ ನಿಜಕ್ಕೂ ಆತನನ್ನು ಕಂಗೆಡಿಸಿತ್ತು. ಎಲ್ಲರಿಂದಲೂ ಹೇಳಿಕೆಗಳನ್ನು ಪಡೆದ. ವಿವರಗಳನ್ನು ದಾಖಲಿಸಿದ. ಎಲ್ಲ ಮುಗಿದ ಬಳಿಕ ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ಲಿಂ ಮುಖಂಡರಲ್ಲಿ ಒಬ್ಬ ಅಣ್ಣನ ಕಿಸೆಗೆ ಕವರೊಂದನ್ನು ತುರಿಕಿಸಿದನಂತೆ. ಏನಿದು ಎಂದು ಅಲ್ಲೇ ತೆರೆದು ನೋಡಿದರೆ ಆ ಕವರಿನೊಳಗೆ 500 ರ ಎರಡು ನೋಟುಗಳಿತ್ತು. ಅದನ್ನು ಅಲ್ಲೇ ಅವನ ಮುಖಕ್ಕೆ ಎಸೆದು, ಅವನಿಗೆ ಉಗಿದು ಅಲ್ಲಿಂದ ಪಾರಾಗಿ ಬಂದನಂತೆ.

ಇದಾಗಿ ಸುಮಾರು 10 ವರ್ಷಕ್ಕೂ ಅಧಿಕ ಕಾಲ ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರಲ್ಲಿ ಅಣ್ಣ ವರದಿಗಾರನಾಗಿ ದುಡಿದಿದ್ದ. ಒಂದು ದಿನ ಅವನು ಸತ್ತಾಗ ಅವನದೆಂದು ನನಗೆ ಸಿಕ್ಕಿದ್ದು ಒಂದು ಪರ್ಸ್ ಮತ್ತು ಅವನ ಕಿಸೆಯಲ್ಲಿ ಯಾರಿಗೂ ತೋರಿಸದಂತೆ ಭದ್ರವಾಗಿ ಇಟ್ಟುಕೊಂಡಿದ್ದ ಪಾಸ್ ಬುಕ್. ಪರ್ಸನಲ್ಲಿದ್ದುದು ಬರೆ 125 ರು. ಅವನ ಬ್ಯಾಂಕ್ ಅಕೌಂಟ್ನಲ್ಲಿದ್ದುದು ಬರೆ 450 ರು.

ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದರೆ ಕನಿಷ್ಠ 3 000 ರು. ವಾದರೂ ಬೇಕು ಎನ್ನೋದು ವರದಿಗಾರನಾದ ಅವನಿಗೆ ಗೊತ್ತಿರಲಿಲ್ಲ. ಅವನ ಸಾಚಾತನದ ಕುರಿತಂತೆ ನನಗೆ ಹೆಮ್ಮೆ ಪಡಲು ಇದ್ದ ಒಂದೇ ಒಂದು ಪುಸ್ತಕವಾಗಿತ್ತು ಅವನು ಬಿಟ್ಟು ಹೋದ ಪಾಸ್ ಪುಸ್ತಕ. ಇಂದಿಗೂ ಅದು ನನ್ನಲ್ಲಿ ಭದ್ರವಾಗಿದೆ.

8 comments:

  1. ನಿಮ್ಮ ಅಣ್ಣ ನಿಜಕ್ಕೂ ಗ್ರೇಟ್ ಸರ್
    ಸುರೇಶ್ ನಾಡಿಗ್

    ReplyDelete
  2. Abid Chitradurga
    ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದರೆ
    ಕನಿಷ್ಠ 3 000 ರು.
    ವಾದರೂ ಬೇಕು ಎನ್ನೋದು ವರದಿಗಾರನಾದ
    ಅವನಿಗೆ ಗೊತ್ತಿರಲಿಲ್ಲ. ಅವನ ಸಾಚಾತನದ
    ಕುರಿತಂತೆ ನನಗೆ ಹೆಮ್ಮೆ ಪಡಲು ಇದ್ದ
    ... ಒಂದೇ ಒಂದು ಪುಸ್ತಕವಾಗಿತ್ತು ಅವನು ಬಿಟ್ಟು ಹೋದ
    ಪಾಸ್ ಪುಸ್ತಕ. ಇಂದಿಗೂ ಅದು ನನ್ನಲ್ಲಿ
    ಭದ್ರವಾಗಿದೆ... Praamanika kartavya, mattu Olleytana ve namma nenapinalli uliyodu, kaadodu...

    ಫೈಲುಗಳ ನಡುವೆ ಧೂಳು ತಿನ್ನುತ್ತಿದ್ದ
    ಕೆಲವು ಹನಿಗವಿತೆಗಳು.
    Chennagive.

    aabid chitradurga

    ReplyDelete
  3. Hulikunte Murthy ಗ್ರೇಟ್...

    Hulikunte Murthy

    ReplyDelete
  4. Sripad Bhat
    ನನಗೂ ಬಿ.ಎಂ. ರಶೀದ್ ನೆನಪಾದಗಲೆಲ್ಲ ಕೊರಳು ಉಬ್ಬಿ ಬರುತ್ತದೆ. ಪ್ರಾಮಾಣಿಕತೆಗೆ,ವಸ್ತುನಿಷ್ಟತೆಗೆ ಅಪಾರ ಬೆಲೆ ಕೊಡುತಿದ್ದ ರಶೀದ್ ಅದಕ್ಕಾಗಿ ಈ ಅಮಾನವೀಯ ಜಗತ್ತಿನಲ್ಲಿ ಅನಗತ್ಯವಾಗಿ,ವಿನಾಕಾರಣ ಬಲಿಯಾಗುವಂತಾಗಿದ್ದು ನೆನೆಸಿಕೊಂಡರೆ ಬೇಸರವಾಗುತ್ತದೆ
    Sripad Bhat

    ReplyDelete
  5. Bolwar Kunhi
    antaha innondu pass bookgagi bahala dinagalinda hudukuttidde. konegu sikkitu. kutuhaladinda book bibidisidare adaralli yara hesaru iralilla. nanna hesaru baredukollalu bahala dinagalinda prayatnissi konegu baredubitte. geleyanobbanige torisidaga avanu prashnisidda, `ninna hesaru yavaga badalilsikonde?'
    Bolwar muhammad Kunhi

    ReplyDelete
  6. Chinna Swamy Vaddagere
    ರಶೀದ್ ಜೊತೆ ಕಳೆದ ಕಾಲದ ನೆನಪು ನನ್ನನ್ನು ಕಾಡುತ್ತದೆ. ಸ್ವಾಭಿಮಾನಿಯಾಗಿದ್ದ ಆತ ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸುತಿದ್ದ. ರಶೀದನ ಪ್ರಮಾಣಿಕತೆ ಮತ್ತು ಸತ್ಯದ ಪರ ನಿಲುವು ಎಂದಿಗೂ ಅಚಲವಗಿದ್ದವು. ಸತ್ಯವಂತರಿಗಿದು ಕಾಲವಲ್ಲ ಎಂದು ಗೆಳೆಯ ಬದುಕಿಗೆ ವಿದಾಯ ಹೇಳಿದ್ದು ದುರಂತ
    Chinna Swamy Vaddagere

    ReplyDelete
  7. ನಾ.ಕೆ.ಮ. ಗೌಡ ನಾಗಮಂಗಲ
    ಅವರ ಹೆಸರು ಚಿರಾಯು ವಾಗಲಿ .....
    ನಾ.ಕೆ.ಮ. ಗೌಡ ನಾಗಮಂಗಲ

    ReplyDelete
  8. Ravi Murnad
    ನ್ಯಾಯಕ್ಕೆ ಹೋರಾಡುವವರಿಗೆ ಸಿಕ್ಕಿದ ಫಲ ಇದು. ಅದಕ್ಕೆ ದಿ. ಬಿ. ಎಂ. ರಶೀದ್ ಉದಾಹರ ಣೆಯಾಗುತ್ತಾರೆ . ಕೊಡಗಿನ ಮ�ಡಿಕೇರಿಯಲ್ಲಿ ಒಮ್ಮೆ ಇವರ ಬಗ್ಗೆ ಬಿ.ಕೆ. ಗಣೇಶ ಮತ್ತು ಮಂಜುನಾಥರಿಗೆ ಹೇಳಿದ ಮಾತು ನನಗೆ ನೆನಪಿದೆ.
    Ravi Murnad

    ReplyDelete