Wednesday, March 28, 2012

‘ಮೂತ್ರ ರಾಜಕೀಯ’




ಮಾರ್ಚ್ 28, 2008 ರಂದು ಬರೆದ ಲೇಖನ. ಅಪೌಷ್ಟಿಕತೆಯ ಕುರಿತಂತೆ ಚರ್ಚೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿಮ್ಮೆದುರಿಗಿಟ್ಟಿದ್ದೇನೆ.
 
ಸಾಧಾರಣವಾಗಿ ಮನುಷ್ಯನ ಬದುಕಿನಲ್ಲಿ ‘ಮೂತ್ರ’ ಮಹತ್ವವನ್ನು ಪಡೆದುಕೊಳ್ಳುವುದು ಅದರ ವಿಸರ್ಜನೆಗೆ ಕಷ್ಟವಾದಾಗ ಮಾತ್ರ. ನಮ್ಮ ದೇಹ ತನಗೆ ಬೇಡವಾದ ತ್ಯಾಜ್ಯವನ್ನು ದ್ರವ ರೂಪದಲ್ಲಿ ಹೊರಚೆಲ್ಲುವುದನ್ನೇ ನಾವು ಮೂತ್ರ ಎಂದು ಕರೆಯುತ್ತಾ ಬಂದಿದ್ದೇವೆ. ಆರೋಗ್ಯವನ್ನು ರಕ್ಷಿಸಿಕೊಳ್ಳುವುಲ್ಲಿ ಈ ಮೂತ್ರ ವಿಸರ್ಜನೆ ವ್ಯವಸ್ಥೆ ಭಾರೀ ಮಹತ್ವವನ್ನು ಪಡೆದಿದೆ. ಇಂತಹ ವಿಸರ್ಜನೆಗೊಂಡ ಮೂತ್ರವನ್ನು ‘ಸಂಸ್ಕೃತಿ’ಯ ಹೆಸರಿನಲ್ಲಿ, ‘ಧರ್ಮ’ದ ಹೆಸರಿನಲ್ಲಿ ಮತ್ತೆ ಕುಡಿಸುವ ಪ್ರಯತ್ನ ನಡೆದರೆ? ಅದೂ ದನದ ‘ಮೂತ್ರ’ವನ್ನು? ಸಾಧಾರಣವಾಗಿ ದನದ ಸೆಗಣಿ, ಮೂತ್ರ ಇತ್ಯಾದಿ ತೆಂಗಿನ ತೋಟಕ್ಕೆ, ಮರಗಿಡಗಳಿಗೆ ಬಳಸಿಕೊಂಡು ಬಂದ ದೇಶ ನಮ್ಮದು. ಮನುಷ್ಯರಿಗೂ ಮರಗಿಡಗಳಿಗೂ ವ್ಯತ್ಯಾಸವೇ ತಿಳಿಯದ, ಮನುಷ್ಯನನ್ನು ಮರಗಿಡಗಳಿಗಿಂತಲೂ ಕೀಳಾಗಿ ಕಂಡ ಒಂದು ಗುಂಪು ಇದೀಗ ‘ಮೂತ್ರ’ವನ್ನು ಔಷಧಿ ಎಂದು ಕುಡಿಸುವ ಪ್ರಯತ್ನದಲ್ದಿ. ಎಳೆ ಮಕ್ಕಳ ತುಟಿಯಿಂದ ಹಾಲನ್ನು ಕಿತ್ತು, ಹಸಿದವರ ಕೈಯಿಂದ ಅವರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಬದಲಾಗಿ ಮೂತ್ರವನ್ನು ಕುಡಿಯಿರಿ ಎಂದು ಸಲಹೆ ನೀಡುತ್ತಿದೆ. ತನ್ನ ಈ ಮೂತ್ರ ರಾಜಕೀಯಕ್ಕೆ ಆರೋಗ್ಯ ಕ್ಷೇತ್ರವನ್ನು, ಪ್ರಜಾಸತ್ತಾತ್ಮಕ ಸರಕಾರವನ್ನು ಬಳಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರಖಂಡದ ಬಿಜೆಪಿ ಸರಕಾರ ದನದ ಹಾಲಿನಂತೆಯೇ ಮೂತ್ರವನ್ನು ಸಂಸ್ಕರಿಸಿ, ರಕ್ಷಿಸಿಡುವ ಕುರಿತು ಘೋಷಣೆ ಮಾಡಿತು. ದನದ ಡೈರಿಯಂತೆಯೇ ಮೂತ್ರದ ಡೈರಿಯನ್ನ ಮಾಡಿ ಅದನ್ನು ಆಯುರ್ವೇದಿಕ್ ಫಾರ್ಮಸಿಗೆ ಮಾರುವುದು ಈ ಸರಕಾರದ ಯೋಜನೆಯಂತೆ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕೂಡಾ ಈ ಮೂತ್ರ ಕುಡಿಸುವ ರಾಜಕೀಯದಲ್ಲಿ ರಾಘವೇಶ್ವರ ಸ್ವಾಮೀಜಿಯ ಜೊತೆಗೆ ಶಾಮೀಲಾಗಿದ್ದರು ಮಾತ್ರವಲ್ಲ, ಬಜೆಟ್ ಹಣವನ್ನು ಅದಕ್ಕೆ ಮೀಸಲಿರಿಸಿದ್ದರು.

ದನದ ಮೂತ್ರವನ್ನು ಔಷಧಿಯಾಗಿ ಬಳಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳುವುದು ಸಾಧ್ಯವೇ ? ಅದನ್ನು ಔಷಧಿಯಾಗಿ ಬಳಸಬಹುದು ಎಂದು ಘೋಷಿಸಬೇಕಾದವರು ತಜ್ಞ ವೈದ್ಯರೇ ಹೊರತು, ರಾಜಕಾರಣಿಗಳೋ, ಸಂಘಪರಿವಾರದ ನಾಯಕರೋ ಅಲ್ಲ. ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದೇ ಆದ ಚೌಕಟ್ಟುಗಳಿವೆ. ನೀತಿ ಸಂಹಿತೆಗಳಿವೆ. ಈಗಾಗಲೇ ಆಯುರ್ವೇದ ಔಷಧ ತಜ್ಞರ ಕುರಿತಂತೆಯೇ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆಯುರ್ವೇದದ ಹೆಸರಲ್ಲಿ ನಕಲಿ ಔಷಧಿ ಮಾರಾಟ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಹೀಗಿರುವಾಗ, ಒಂದು ಸರಕಾರ ಏಕಾಏಕಿ ಮೂತ್ರವನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಅದನ್ನು ಔಷಧಿಗೆ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ? ಕೆಲವು ಸರಕಾರಗಳು ದನದ ಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ ಎಂದು ಸಂಶೋಧಿಸಲೆಂದೇ ಕೆಲವು ತಜ್ಞರನ್ನು ನೇಮಿಸಿ, ಅವರಿಗೆ ಒಂದಿಷ್ಟು ದುಡ್ಡು, ಫಂಡು ನೀಡುತ್ತಿವೆ. ಇನ್ನು ಮುಂದೆ ದನದ ಸೆಗಣಿಯಲ್ಲಿ ಪ್ರೊಟೀನ್ ಇದೆಯೇ? (ಗೋಮಾಂಸದ ಬದಲಿಗೆ ತಿನ್ನುವುದಕ್ಕೆ ಕೊಡಬಹುದಲ್ಲ), ದನದ ಎಂಜಲಿನಲ್ಲಿ ಏಡ್ಸ್‌ಗೆ ಔಷಧಿಯಿದೆಯೇ? ಮೊದಲಾದ ಸಂಶೋಧನೆಯನ್ನು ನಡೆಸುವುದಕ್ಕೂ ಈ ಸರಕಾರಗಳು ಮುಂದಾಗಬಹುದು. ಸಂಶೋಧನೆ ನಡೆಸುವುದಕ್ಕೇನಾಗಬೇಕು?

ಸರಕಾರ ಸಂಶೋಧನೆಗಳನ್ನು ನಡೆಸಲಿ, ರಾಜಕಾರಣಿಗಳು ಬೇಕಾದರೆ ಕಡಾಯಿಗಟ್ಟಲೆ ದನದ ಮೂತ್ರವನ್ನು ಇಟ್ಟುಕೊಂಡು ಅದನ್ನೇ ದಿನನಿತ್ಯ ಕುಡಿಯುವುದಕ್ಕೆ, ಸ್ನಾನ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ ಬಳಸಿಕೊಳ್ಳಲಿ. ಆದರೆ ಔಷಧಿಯಂತಹ ವಸ್ತುವಾಗಿ ಮೂತ್ರವನ್ನು ಬಳಸುವುದಕ್ಕೆ ಮೊದಲು ಅದನ್ನು ವೈದ್ಯಕೀಯ ರಂಗ ಅಧಿಕೃತವಾಗಿ ದೃಢಪಡಿಸಬೇಕು. ಮೂತ್ರ ಔಷಧಿ ಎನ್ನುವುದು ಈವರೆಗೆ ಯಾವುದೇ ತಜ್ಞರಿಂದ, ವೈದ್ಯಕೀಯ ಕ್ಷೇತ್ರದಿಂದ ಅಧಿಕೃತವಾಗಿ ದೃಢೀಕರಣಗೊಂಡಿಲ್ಲ. ಹೀಗಿರುವಾಗ, ಒಂದು ಸರಕಾರದ ನೇತೃತ್ವದಲ್ಲಿ ಆಯುರ್ವೇದ ಫಾರ್ಮಸಿಗಳಿಗೆ ದನದ ಮೂತ್ರವನ್ನು ಪೂರೈಕೆ ಮಾಡುವುದು ಎಷ್ಟು ಸರಿ?

ಸ್ವಾಮೀಜಿಗಳು ಹೋದಲ್ಲಿ, ಬಂದಲ್ಲಿ ‘ಮೂತ್ರ ಔಷಧಿ’ ಎಂದು ಘೋಷಣೆ ಮಾಡುವುದರಿಂದ ಆಗುತ್ತಿರುವ ಅನಾಹುತಗಳು ಹಲವೆಡೆ ಬೆಳಕಿಗೆ ಬಂದಿವೆ. ಮೂತ್ರವೆನ್ನುವುದು ತ್ಯಾಜ್ಯ. ಪ್ರಾಣಿಗಳ ತ್ಯಾಜ್ಯವನ್ನು ಮನುಷ್ಯ ಮತ್ತೆ ಉಪಯೋಗಿಸುವುದರಿಂದ ಆಗುವ ಅನಾಹುತಗಳೇನು ಎನ್ನುವುದನ್ನು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಮೂತ್ರ ಸೇವನೆಯಿಂದ ಕಿಡ್ನಿಗೆ ನೇರ ಹಾನಿಯಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಸ್ವಾಮೀಜಿಗಳ ಮಾತು ನಂಬಿ ಮೂತ್ರ ಸೇವಿಸಿದ ಹಲವರು ಕಿಡ್ನಿ ತೊಂದರೆಯಿಂದ ಆಸ್ಪತ್ರೆ ಸೇರಿದ್ದಾರೆ. ರಾಘವೇಶ್ವರ ಸ್ವಾಮೀಜಿಯವರ ದೇಹವನ್ನೇ ನೋಡಿ. ಅದು ದನದ ಮೂತ್ರ ಸೇವಿಸಿದ ದೇಹದಂತೆ ಕಾಣುತ್ತಿದೆಯೆ? ದನದ ಹಾಲು, ಮೊಸರು, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ತಿಂದು ಸದೃಢವಾಗಿ ಕೊಬ್ಬಿದ ದೇಹ ಅದು. ಅವರು ದಿನಕ್ಕೆ ಎಷ್ಟು ಬಾರಿ ಗೋಮೂತ್ರವನ್ನು ಸೇವಿಸುತ್ತಿದ್ದಾರೆ ಎನ್ನುವುದನ್ನು ಯಾವತ್ತಾದರೂ ಬಹಿರಂಗಪಡಿಸಿದ್ದಾರೆಯೇ? ಗೋಮೂತ್ರವನ್ನು ಔಷಧಿಯಾಗಿ ಬಿಂಬಿಸಲು ಹೊರಡುತ್ತಿರುವ ನಿಜವಾದ ಉದ್ದೇಶ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಗೋವನ್ನು ರಾಜಕೀಯ ಶಕ್ತಿಯನ್ನಾಗಿಸಿ, ಗೋಮಾಂಸ ಸೇವಿಸುವವರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವುದಕ್ಕಾಗಿ ಗೋಮೂತ್ರವನ್ನು ಔಷಧಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ವೈದ್ಯಕೀಯ ಕ್ಷೇತ್ರ ಇದರ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ತಜ್ಞರು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಬೇಕಾಗಿದೆ. ಗೋಮೂತ್ರದಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು ಎನ್ನುವುದರ ಕುರಿತಂತೆ ಜನಜಾಗೃತಿಯನ್ನು ಮಾಡಬೇಕಾಗಿದೆ. ಸ್ವಾಮೀಜಿಗಳು, ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬಿಟ್ಟು, ತಮ್ಮ ರಾಜಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಅದನ್ನು ಕುಲಗೆಡಿಸುವುದನ್ನು ತಡೆಯಬೇಕಾಗಿದೆ.

  ಗೋಮೂತ್ರ ಔಷಧವಲ್ಲ. ಗೋವಿನ ಹಾಲು, ತುಪ್ಪ, ಬೆಣ್ಣೆ, ಮೊಸರು ಔಷಧ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಂತಹ ಬಡ ದೇಶಕ್ಕೆ ಗೋಮಾಂಸ ಅತಿ ಪರಿಣಾಮಕಾರಿ ಔಷಧ. ಬಡತನ, ಅಪೌಷ್ಠಿಕತೆ ಅತಿ ದೊಡ್ಡ ಕಾಯಿಲೆಯಾಗಿ ಈ ದೇಶವನ್ನು ಕಾಡುತ್ತಿದೆ. ದೇಶದಲ್ಲಿ ಕ್ಷಯ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಈಗಾಗಲೇ ವರದಿಗಳು ಬಹಿರಂಗಪಡಿಸಿವೆ. ಪ್ರೋಟಿನ್‌ನ ಕೊರತೆಯಿಂದ ಕ್ಷಯ ರೋಗಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಕುರಿ, ಕೋಳಿ ಈ ದೇಶದಲ್ಲಿ ಅತಿ ದುಬಾರಿಯಾಗಿರುವಾಗ, ಅತ್ಯಂತ ಅಗ್ಗವಾಗಿ, ಅತ್ಯುತ್ತಮ ಆಹಾರವಾಗಿ ಗೋಮಾಂಸ ನಮ್ಮ ಮುಂದಿದೆ. ಗೋಮಾಂಸ ಕ್ಷಯ ರೋಗಕ್ಕೆ ರಾಮ ಬಾಣವಾಗಿದೆ. ಸಂಘ ಪರಿವಾರದ ರಾಜಕೀಯದಿಂದಾಗಿ ಇಂದು ಗೋಮಾಂಸವೂ ದುಬಾರಿಯಾಗುವಂತಹ ಸನ್ನಿವೇಶ ಎದುರಾಗಿದೆ. ಈ ಕಾರಣದಿಂದ ತಕ್ಷಣ ಗೋಮಾಂಸವನ್ನು ಜನಪ್ರಿಯಗೊಳಿಸುವ ಕಾರ್ಯಕ್ಕೆ ಸರಕಾರಗಳು ಮುಂದಾಗಬೇಕು. ಗೋಮಾಂಸವನ್ನು ಆಹಾರವಾಗಿ ಸ್ವೀಕರಿಸುವವರಿಗೆ ಅದು ಸುಲಭ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವುದಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಗೋಮಾಂಸವನ್ನು ಜನಪ್ರಿಯಗೊಳಿಸುವುದರಿಂದ ಅಪೌಷ್ಟಿಕತೆ, ಆಹಾರದ ಕೊರತೆ ಮೊದಲಾದವುಗಳಿಗೆ ಒಂದು ಪರಿಹಾರ ದೊರಕಿದಂತಾಗುತ್ತದೆ. ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ? ಸೆಗಣಿಯಲ್ಲಿ ಆಹಾರದ ಗುಣಗಳಿವೆಯೇ? ಎಂಬ ಹಾಸ್ಯಾಸ್ಪದ ಸಂಶೋಧನೆಗಳಿಗೆ ಕೋಟಿಗಟ್ಟಲೆ ಸುರಿಯುವುದಕ್ಕಿಂತ ಅತ್ಯುತ್ತಮ ಗೋಮಾಂಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ಕೆ ಆ ಹಣವನ್ನು ವ್ಯಯ ಮಾಡಲಿ. ಭಾರತದ ಗೋಮಾಂಸ ವಿಶ್ವದಲ್ಲೇ ಜನಪ್ರಿಯ. ನಮ್ಮ ಮಕ್ಕಳೂ ಆ ಗೋಮಾಂಸವನ್ನು ತಿಂದು ಗೋವಿನಂತಹ ಗುಣಗಳನ್ನು ತಮ್ಮದಾಗಿಸಿಕೊಳ್ಳಲಿ.


(ಮಾರ್ಚ್ 28, 2008 ಶುಕ್ರವಾರ)

10 comments:

  1. "ಅದು ಹಸುವಲ್ಲಾ ನಿನ್ನಡೆದ ತಾಯಿ"
    ಭಾರತ ಎಂದರೆ ದೇಶ ಇದರ ಅರ್ಥ ಶ್ಲೋಕಗಳಲ್ಲಿ ಇದೆ ಭರತ ಖಂಡೆ, ಭರತವರ್ಷ, ದಂಡ ಕಾರುಣ್ಯೇ ಗೋದಾವರಿ ಎಂದು ಈ ಮಣ್ಣಿನ ಕಣ ಕಣದಲ್ಲಿಯೂ ದೈವ ಶಕ್ತಿ ಇದೆ, ಈ ದೇಶ ಹಿಂದೂ ರಾಷ್ಟ್ರ, ಹಿಂದೂಗಳು ಪ್ರೀತಿ, ವಾತ್ಸಲ್ಯ, ಸಹೋದರ ಭಾವನೆಯಲ್ಲಿ ಇಡೀ ಪ್ರಪಂಚದಲ್ಲಿಯೇ ಮುಂದು, ಹಿಂದುಗಳ ಒಳ್ಳೆತನ, ಪ್ರೀತಿ, ಕರುಣೆಯಿಂದ ಇಂದು ಅನ್ಯಧರ್ಮೀಯರು ಭಾರತದಲ್ಲಿ ಅದರಲ್ಲಿಯೂ ಮುಸಲ್ಮಾನರು ನೆಮ್ಮದಿಯಿಂದ ಬದುಕುತ್ತಿದ್ದಾರೆ.
    ಸಹೋದರ ನಿನ್ನಂತಹ ಅವಿವೇಕಿಗೆ ತಾಯಿ ಸ್ಥಾನ, ಗೋವಿನ ಸ್ಥಾನದ ಬೆಲೆ ಗೊತ್ತಿಲ್ಲ ಏಕೆಂದರೆ ನಿನಗೆ ನಿನ್ನ ಧರ್ಮದ ಬಗ್ಗೆ ಅರಿವಿಲ್ಲ. ಮಹಮದ್ ಪೈಗಂಬರ್ ರವರು ಕುರಾನ್ ನಲ್ಲಿ ಹೇಳಿರುವುದು ಪ್ರೀತಿ, ಪ್ರೇಮ, ವಾತ್ಸಲ್ಯ, ಸಹೋದರ ಹುಣ, ಸ್ತ್ರೀಯರನ್ನು ಗೌರವದಿಂದ ಕಾಣುವ ಗುಣ, ದಾನ ಗುಣ, ಅನ್ಯಧರ್ಮವನ್ನು ಗೌರವಿಸುವವನು ನಿಜವಾದ ಮುಸಲ್ಮಾನ ಎಂದು ಹೇಳಿದ್ದಾನೆ, ಹಾಗಾದರೆ ನೀನು ಮುಸಲ್ಮಾನನು ಅಲ್ಲ, ಮಾನವನೂ ಅಲ್ಲ, ನೀನು ದೆವ್ವವಿದ್ದಂತೆ, ಹಿಂದುಗಳು ಗೋವುಗಳನ್ನು ತಾಯಿಯಂತೆ ಸಮಾನವಾಗಿ ಕಂಡು ಪ್ರೀತಿಸಿ ಪೂಜಿಸುತ್ತಾರೆ, ಅದರ ಪ್ರತಿಯೊಂದು ಭಾಗದಲ್ಲಿ ಔಷದಿಯ ಗುಣವಿದೆಯೆಂದು ನೀನೇ ಒಪ್ಪಿಕೊಂಡು ಅದರ ಮಾಂಸವನ್ನು ಮಕ್ಕಳಿಗೆ ತಿನ್ನಿಸಿದರೆ ಹಸುವಿನಂತ ಗೂನ ಬರುತ್ತದೆಂದು ಧರ್ಮ ತಿಳಿಯದೆ, ಸರಿಯಾಗಿ ವಿದ್ಯಾಭ್ಯಾಸ ಮಾಡದೆ ಬರೆದಿದ್ದೀಯ, ಹಾಗೆಯೇ ಹಿಂದೂ ಧರ್ಮದಲ್ಲಿ ವರಾಹ(ಹಂದಿ)ಗೆ ಲಕ್ಷ್ಮಿಯ ಸ್ಥಾನವಿದೆ, ಅದಕ್ಕೆ ನಿನ್ನಂತಹ ದೆವ್ವಗಳು ಹಂದಿಯನ್ನು ತಿಂದರೆ ನಿಮ್ಮ ಮಕ್ಕಳಿಗೆ ತಿನ್ನಿಸಿದರೆ (ಲಕ್ಷ್ಮೀ) ಹಣ ಒಲಿಯುತ್ತದೆ ಮತ್ತು ಗುಜರಿ ಮಾರುವುದು ತಪ್ಪುತ್ತದೆ ಗುಜರಿ ಬುದ್ದಿ ಹೋಗುತ್ತದೆ.

    ಹಂದಿ ಊರಿನ ಹೇಸಿಗೆ-ಮಲ-ಮೂತ್ರ ಕಸ ತಿಂದು ಊರನ್ನು, ದೇಶವನ್ನು ಸ್ವಚ್ಛವಾಗಿ ಇಟ್ಟು ದೇಶಾಭಿಮಾನ ಮೆರೆಯುತ್ತದೆ. ಆದ್ದರಿಂದ ನಿನ್ನಂತಹವರು ಹಂದಿಯನ್ನು ತಿಂದರೆ ಒಳ್ಳೆಯ ಬುದ್ದಿ ಬಂದು ನೀನು ಸ್ವಚ್ಛವಾಗಿ ನಿನ್ನ ಮನೆ,ನಿಮ್ಮ ತಾಯಿ, ನಿಮ್ಮ ಧರ್ಮ ಸ್ವಚ್ಛವಾಗುತ್ತದೆ ಆಗ ಈ ದೇಶದಲ್ಲಿ ಬದುಕಿದ್ದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಋಣಿಯಾಗಿ ಬದುಕುತ್ತೀಯ.

    ಸೈತಾನ/ಕಾಪೀರಾ ನಿನ್ನಂತಹ ಸೂ. ಮಕ್ಕಳಿಂದಲೇ ಇಂದು ದ್ವೇಷ-ಅಸೂಯೆ, ಭಯೋತ್ಪಾದನೆಗಳು ಜಾಸ್ತಿಯಾಗಿ, ಕಷ್ಟಪಡ್ಡು ದುಡಿದು ತಿನ್ನುವ ದೇಶಾಭಿಮಾನಿಗಳಾದ ಹಿಂದೂ-ಮುಸಲ್ಮಾನ-ಜೈನ-ಪಾರಸಿ-ಕ್ರೈಸ್ತರಿಗೆ ನೆಮ್ಮದಿ ಇಲ್ಲದಂತಾಗಿದೆ, ಇನ್ನು ಮೇಲಾದರೂ ಕುರಾನ್ ನಲ್ಲಿ ಹೇಳಿದಂತೆ ನಡೆದು ನಿಜವಾದ ಮುಸಲ್ಮಾನನಾಗು, ಜೈ ಪೈಗಂಬರ.
    "ಜೈ ಭಾರತ್ ಮಾತಾ"

    ReplyDelete
  2. ನನ್ನ ಹಾಲನು ಕುಡಿದು ಬೆಳೆದು ನನ್ನನೇ ಕೊಲ್ಲುವೇಯಲ್ಲ ಮಗು ??
    ನಿನ್ನ ಅಮ್ಮನನ್ನು ನನ೦ತೆ ಕೊಲ್ಲುವೇಯ ?? ಕೂ೦ದು ತಿನ್ನುವೆಯ ?
    ಸುವರ್ ಕೆ ಬಚ್ಚೆ

    ReplyDelete
  3. Kodi Mohammad HaneefMarch 30, 2012 at 11:16 AM

    -" ನಮ್ಮೆಲ್ಲ ಮುಸಲ್ಮಾನರ ವತಿಯಿಂದ ಸಮಸ್ತ ಹಿಂದು ಭಾಂದವರಲ್ಲಿ ಕ್ಷಮೆ ಕೇಳುತ್ತ "-

    ಗುಜರಿ ಆಯುವ ದಾಂಡಿಗನೇ....
    ನಿನಗೆ ನಾಚಿಕೆ ಇಲ್ಲವೇನೋ.

    "ನಮ್ಮ ಮಕ್ಕಳೂ ಆ ಗೋಮಾಂಸವನ್ನು ತಿಂದು ಗೋವಿನಂತಹ ಗುಣಗಳನ್ನು ತಮ್ಮದಾಗಿಸಿಕೊಳ್ಳಲಿ"
    ಅಂತ ಹೇಳಿದ್ದೀಯಾ..... ಥೂ ಪೆದ್ ಬಡ್ಡಿ ಮಗನೇ,,, ಹಾಗಾದ್ರೆ ನಿನ್ನ ಹೆತ್ತ ತಂದೆ ತಾಯಿಯ ಗುಣ ನಿನಗೆ ಬರಬೇಕೆಂದರೆ ಅವರ ಮಾಂಸ ತಿನಬೇಕೇನೋ ಬೇವಕೂಫ್....

    ಹೀಗೆ ನಮ್ಮ ಮತ್ತು ಹಿಂದು ಭಾಂದವರಲ್ಲಿರುವ ಸಾಮರಸ್ಯವನ್ನ ನಿನ್ನ ದರಿದ್ರ ಕಂತ್ರಿ ಭಾಷೆಯ ಲೇಖನಗಳಿಂದ ಹಾಳು ಮಾಡುತ್ತಿದ್ದೀಯಾ. ಭಿಕ್ಷೆ ಬೇಡಿ ತಿಂದರೂ ಪರವಾಗಿಲ್ಲಾ ಆದರೆ ನಿನ್ನಂತಹ ದೇಶದ್ರೋಹಿ ಲೇಖನಗಳಿಂದಾದ ಸಂಪಾದನೆ ಹಂದಿ ಹೇಸಿಗೆಗೆ ಸಮ. ಹೆತ್ತ ತಾಯಿಯೊಡನೆ ಬೆಳೆದ ಯಾವ ಮಗನೂ ಹೀಗೆ ಬರೆಯುವುದಿಲ್ಲಾ.

    ನೀನಿರುವ ನಾಡು ದೇಶ ಸಂಸ್ಕೃತಿಗೆ ಬೆಲೆ ಕೊಡದ ನೀನು ಮುಸಲ್ಮಾನನೇ ಅಲ್ಲಾ.
    ಅಲ್ಲಾಹು ನಿನ್ನನ್ನು ಕ್ಷಮಿಸುವುದಿಲ್ಲಾ----

    ReplyDelete
  4. ಲೋ ಸುವರ್ ನನ್ನ ಮಗನೆ, ಮೊನ್ನೆ ತಿಂದ ಹೇಸಿಗೆ ಇನ್ನೂ ಜೀರ್ಣವಾಗಿಲ್ಲ ಅಂತ ಕಾಣುತ್ತೆ.. ಪದೇ ಪದೇ ಇಂತ ಕೆಲಸಕ್ಕೆ ಬಾರದ ಬರಹಗಳಿಂದ ನಮ್ಮ ಧರ್ಮಕ್ಕೆ ಕೆಟ್ಟ ಹೆಸರು ತರ್ತಾ ಇದಿಯಾ.. ಸಾಕು ಮಾಡು

    ಎಲ್ಲಾ ಹಿಂದೂ ಸಹೋದರರಲ್ಲಿ ನಾನು ಕ್ಷಮೆ ಕೇಳ್ತಿದೇನೆ.. ಸಹೋದರರೇ ಇವನು ಧರ್ಮಾಂದ ಮುಸಲ್ಮಾನ.. ಯಾವುದೋ ಕಲಬೆರಕೆ ಕುಡಿ.. ಅದಕ್ಕೆ ಹಾಗೆ ಆಡ್ತಿದಾನೆ, ಹಿಂದು ಸಹೋದರರನ್ನು ಅನಗತ್ಯವಾಗಿ ಕೆಣಕುವಂತ ಕೆಲಸ ಯಾವುದೇ ಮುಸಲ್ಮಾನ ಮಾಡಲಾರ

    ReplyDelete
  5. ಈ ತರಹ ಲೇಖನ ಬರೆಯೋ ನಿಮ್ಮನ್ನು ನೋಡಿದರೆ ಕೊಚ್ಚೆಯಲ್ಲಿ ಬಿದ್ದ ಹಂದಿ ಮಾಂಸ ನೀವು ತಿಂದಂದತೂ ಗ್ಯಾರಂಟಿ. ಅದರ ಬುದ್ದಿಯೇ ನಿಮಗೆ ಬಂದಿದೆ. ಹೊಲಸು ಯೋಚನೆಗಳಿಂದ ಹೊರಗೆ ಬನ್ನಿ. ಪತ್ರಕರ್ತನಾಗಿ ನಿಮಗಿದು ತರವಲ್ಲ. ಸಾಮರಸ್ಯ ಬೆಳೆಸಿ. ವೈಷಮ್ಯವನ್ನಲ್ಲ.

    ReplyDelete
  6. Dear Basheerbhai,

    I admire your mastery of the Kannada language and writing style. I came here through Mrs. Malathi''s blog.

    As for the contents of this particular post, frankly I do not know the veracity of the claims made by the propagandists of cow urine. Maybe they are wrong and maybe you could be right in your advocacy of beef as good nutrition.

    All that I can say is that one should have an open mind. Mind is like a parachute - It functions only when it is open.

    I just want to draw your kind attention to certain facts and then decide for yourself about the desirability of keeping an open mind.

    Fact 1: In Hassan district, ( and probably elsewhere too), farmers pay money to shepherds to let the sheep come to graze in their fields. The reason is: the excreta of the sheep ( kuri-hikke) is very good for the crops.

    Fact 2: Mrs. Rohini Nilekani's Foundation financed a study by University of Agriculture scientists to find out the effect of human urine on banana crops. The Research project concluded with proof that the banana crop productivity increased substantially with such urine input.

    ( Maize, banana and radish were fertilized using human urine (Anthropogenic Liquid Waste, ALW), and compared with plants fertilized using chemical fertilizer to provide an equivalent amount of nutrient. It was found that anthropogenic liquid waste performed well in comparison to chemical fertilizer, consistently showing better results in all parameters like grain and stover yields in maize and yield in banana. Sensory parameters in a blind test also showed good results....)

    http://www.arghyam.org/node/172



    Fact 3: Japan, China and U.S.A. are extracting a very valuable substance called urokinase out of human urine collected from public urinals. This extract is useful for dissolving the blood clots in heart and lung disease. A method of obtaining urokinase directly from human urine is patented as per details in this website:
    http://www.patentgenius.com/patent/RE29980.html

    Fact 4: You have probably tasted coffee and possibly liked it. Do you know which is the world's costliest and tastiest coffee?

    It is Kopi Luwak produced in the world's most populous Muslim country, Indonesia.

    It is made from the beans of coffee berries which have been eaten by the Asian Palm Civet (Paradoxurus hermaphroditus) and other related civets, then passed through its digestive tract.[1] A civet eats the berries for their fleshy pulp. In its stomach, proteolytic enzymes seep into the beans, making shorter peptides and more free amino acids. Passing through a civet's intestines the beans are then defecated, keeping their shape. After gathering, thorough washing, sun drying, light roasting and brewing, these beans yield an aromatic coffee with much less bitterness.[citation needed] This coffee was widely noted as the most expensive coffee in the world with prices reaching $ 160/pound.

    http://en.wikipedia.org/wiki/Kopi_Luwak

    Fact 5: The base of most Unani medicines is honey. And I don't need to tell you how honey is produced by the honeybees.

    <>


    The comments that your post has attracted make me sad.

    ReplyDelete
  7. My dear Basheerbhai,

    I came to your blog through Mrs. Malathi Shenoy's blogroll.

    Your mastery over Kannada language is to be appreciated.

    Mind is like a parachute - functions only when open.

    Bias and prejudice cloud our judgment and lead to wrong conclusions.

    If I understand you right, you argue that excrement - both animal and human - is not good for anything. It is simply waste or tyaajya to be disposed off as per your views.

    Consider the following facts which prove otherwise.

    Fact 1: Sheep excrement

    The farmers in Hassan district ( and maybe elsewhere too) pay money to shepherds to get sheep to graze in their fields because the sheep's droppings (kuri hikke) is very good for increasing the soil fertility.

    Fact 2: Human urine

    A private Foundation in Bangalore financed a research project undertaken by the University of Agriculture scientists which concluded with proof that human urine input resulted in substantial increase in yield of banana, maize, and radish.

    http://www.indiawaterportal.org/node/4550

    http://www.arghyam.org/node/172

    Fact 3: Urokinase extracted from public urinals in Japan

    Urokinase helps dissolve bloodclots and Japanese have a patent on the process of obtaining urokinase from public urinals.

    Fact 4: World's costliest and tastiest coffee

    Kopi luwak or civet coffee, is one of the world's most expensive and low-production varieties of coffee. It is made from the beans of coffee berries which have been eaten by the Asian Palm Civet (Paradoxurus hermaphroditus) and other related civets, then passed through its digestive tract. A civet eats the berries for their fleshy pulp. In its stomach, proteolytic enzymes seep into the beans, making shorter peptides and more free amino acids. Passing through a civet's intestines the beans are then defecated, keeping their shape. After gathering, thorough washing, sun drying, light roasting and brewing, these beans yield an aromatic coffee with much less bitterness.

    By the by, this coffee is produced and consumed in the world's most populous Muslim country, Indonesia.

    Fact 4: How honey is produced.

    Honey is the base for most Unani medicines. I am sure you know how the bees produce honey.

    Now, would you still say that all excrements are useless and waste?

    ReplyDelete
  8. ಗೋಮಾ೦ಸ ಯಾಕೆ ತಿನ್ನಬಾರದು?ಸರಿ ಹಿ೦ದುಗಳಿಗೆ ದೇವರು ಅಲ್ಲದ ಪ್ರಾಣಿ ಯಾವುದು..ಕೊ೦ದ ಪಾಪ ತಿ೦ದು ಪರಿಹಾರ ಅಲ್ವೆ? ಕೊಡಿ ಹನೀಫ್ ನೀವು ಗೊಮಾ೦ಸ ತಿ೦ದೆ ಇಲ್ವೆ?ಸರಿ ನಿನಗೆ ಈ ಲೆಖನ ಹಿಡಿಸದೆ ಹೊದರೆ ನೀನು ಗೋಪೂಜೆ ಮಾಡಿ ಗೋಮೂತ್ರ ಕುಡಿಯುದಕ್ಕೆ ಯಾರ ಅಬ್ಯ೦ತರನೂ ಇಲ್ಲ.

    ReplyDelete
    Replies
    1. Kodi Mohammad HaneefApril 4, 2012 at 10:37 AM

      ಹಿಂದುಗಳು ನಮಗೆ ಹಂದಿ ತಿನ್ನಲು ಹೇಳಿದರೆ ????
      ನಾನು ಇದುವರೆಗೂ ಗೊಮಾ೦ಸ ತಿ೦ದಿಲ್ಲಾ,,, ಅಪ್ಪ ಹಾಕಿದ ಆಲದ ಮರಕ್ಕೆ ನಿಮ್ಮಂತೆ ನಾನು ನೇಣು ಹಾಕಿಕೊಳ್ಳಲಾರೆ.... ನಾನು ಶುದ್ಧ ಸಸ್ಯಹಾರಿ. ಪ್ರಾಣಿ ಹಿಂಸೆ ಮಹಾ ಪಾಪ.

      ಗೋಪೂಜೆ ಮಾಡುತ್ತೀನೊ ಬಿಡ್ತೀನೊ ಆದರೆ ಔಷದೀಯ ಗುಣವಿರುವ ಗೋಮೂತ್ರ ಕುಡಿಯುವುದಕ್ಕೆ ನನಗೆ ಯಾವ ಅಬ್ಯ೦ತರನೂ ಇಲ್ಲ. ಒಮ್ಮೆ ನೀನೂ ಕುಡಿದು ಆರೋಗ್ಯವಂತನಾಗು.

      Delete
  9. Interesting perspective. I'm a Vegetarian myself living in US. And I notice that the beef & pork consumption is at a record high level out here.

    Banning beef will only encourage an unhealthy underground supply of the meat. As long I lived in India, I opposed cow slaughtering (and to your reference I belong to the community that Pejavar Seer belongs to). But USA has thought me that 'personal freedom/choice' is essentially a much bigger aspect of a healthy democracy. As much I'm pained at you calling 'Sanskrit a dead language' - I support this blog of you. Provide a healthy way of supplying beef to stop under world supplies.

    Raj

    ReplyDelete