Sunday, January 12, 2014

ಟೀಪು ಸುಲ್ತಾನ್ ಕುರಿತ ಸತ್ಯಗಳು

ಕನ್ನಡದ ಹಿರಿಯ ಲೇಖಕರಾದ ಕೋ. ಚೆನ್ನಬಸಪ್ಪ ಅವರು ಸಂಗ್ರಹಿಸಿ, ಸಂಪಾದನೆ ಮಾಡಿರುವ ಕೃತಿ ‘ಅಪ್ರತಿಮ ದೇಶಭಕ್ತ ಟೀಪುಸುಲ್ತಾನ್’. ಈ ಕೃತಿ ಸಂಶೋಧನೆಗೆ ಸಂಬಂಧಪಟ್ಚಿರುವುದು. ಆದುದರಿಂದಲೇ, ಇದರಲ್ಲಿ ಲೇಖಕರಾಗಿ ಗುರುತಿಸಿಕೊಳ್ಳದೆ, ಈ ಸಂಶೋಧನೆಯ ಹಿಂದಿರುವ ದಾಖಲೆಗಳಿಗೆ ಲೇಖಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಟೀಪು ಸುಲ್ತಾನ್‌ನ ಕುರಿತಂತೆ ರಾಜಕೀಯ ಕಾರಣಗಳಿಗೆ ಅಪಪ್ರಚಾರ ಮಾಡುತ್ತಿರುವ ಸಂಚುಗಳನ್ನು ಈ ಕೃತಿ ಬಯಲಿಗೆಳೆಯುತ್ತದೆ. ಟೀಪು ಸುಲ್ತಾನ್ ತನ್ನ ಬದುಕಿನುದ್ದಕ್ಕೂ ಹೇಗೆ ‘ರಾಜಧರ್ಮ’ವನ್ನು ಪಾಲಿಸಿದ್ದ ಎನ್ನುವ ಸತ್ಯವನ್ನು ಈ ಕೃತಿ ತೆರೆದಿಡುತ್ತದೆ.
ದಿ. ತೀ. ತಾ. ಶರ್ಮಾರ ಗ್ರಂಥವನ್ನು ಮುಂದಿಟ್ಟುಕೊಂಡು ಟಿಪ್ಪು ಸುಲ್ತಾನ್ ಹೇಗೆ ಮರಾಠರು ಸೇರಿದಂತೆ ಅನ್ಯರಿಂದ ಕನ್ನಡದ ಹಿಂದೂಗಳಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಧಾವಿಸಿದ ಎನ್ನುವುದನ್ನು ಮೊದಲ ಅಧ್ಯಾಯದಲ್ಲಿ ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಟಿಪ್ಪು ಅಪ್ಪಟ ದೇಶಭಕ್ತ ಎನ್ನುವುದನ್ನು ದಾಖಲೆಗಳ ಸಹಿತ ಕೃತಿಯಲ್ಲಿ ನಿರೂಪಿಸುತ್ತಾರೆ. ಟೀಪು ತನ್ನ ಆಳ್ವಿಕೆಯಲ್ಲಿ ರೈತರಿಗೆ, ದಲಿತರಿಗೆ ಹೇಗೆ ನೆರವಾದ ಎನ್ನುವ ಅಂಶವೂ ಈ ಕೃತಿಯಲ್ಲಿದೆ. ಹಾಗೆಯೇ ಟೀಪುವಿನ ಕುರಿತಂತೆ ಹರಡಿರುವ ‘ಮತಾಂತರ’ದ ಹಿಂದಿರುವ ರಾಜಕೀಯ ಏನು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ.
‘ಬ್ರಿಟಿಷರಿಗೆ ನೆರವಾದವರ ಕತೆ’ ಇದರ ಕೊನೆಯ ಅಧ್ಯಾಯ. ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ. ಟಿಪ್ಪುವಿನ ದುರಂತಕ್ಕೆ ಕಾರಣರಾದ ದೇಶದ್ರೋಹಿಗಳನ್ನು ಈ ಅಧ್ಯಾಯ ತೆರೆದಿಡುತ್ತದೆ. ರಾಜಕೀಯ ವಿರೋಧಿಗಳನ್ನು ಟಿಪ್ಪು ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯ. ಆದರೆ ಧರ್ಮದ ಹೆಸರಿನಲ್ಲಿ ಎಂದೂ ಟಿಪ್ಪು ಸುಲ್ತಾನ್ ಯಾರನ್ನೂ ಬೆದರಿಸಿರಲಿಲ್ಲ. ಜೊತೆಗೆ ಅವನು ಜಾತ್ಯತೀತನಾಗಿ ತನ್ನ ಕರ್ತವ್ಯವನ್ನು ಪಾಲಿಸಿದ ಎನ್ನುವುದನ್ನು ಈ ಕೃತಿ ಹೇಳುತ್ತದೆ.
ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 40 ರೂ.

6 comments:


  1. Jbrswamy Rangaswamy shared a link.

    Jbrswamy Rangaswamy: ಬೇರೊಂದು ತಾಣದಲ್ಲಿ ಈ ಪುಸ್ತಕದ ಬಗ್ಗೆ ಟೀಕೆ ಮಾಡಿದವರೊಬ್ಬರು , ಡಾ. ಚಿದಾನಂದಮೂರ್ತಿಗಳ ಸಂಶೋಧನೆಯೇ ಅಂತಿಮ ಎಂಬಂತೆ ಮಾತಾಡಿದ್ದರು. ಅದಕ್ಕೆ ಬರೆದ ಪ್ರತಿಕ್ರಿಯೆ ಇದು. :

    ಚಿದಾನಂದ ಮೂರ್ತಿಗಳು ದೊಡ್ಡ ಗೌರವಾರ್ಹ ಸಂಶೋಧಕರು ನಿಜ. ಹಿಂದೂ ಧರ್ಮಕ್ಕೆ ಅನ್ಯಾಯವಾಗಿದೆಎಂಬ ನಿಲುವಿನಿಂದ ಅವರ ಸಂಶೋಧನೆ ಹೊರಡುವುದರಿಂದ, ಚರ್ಚಾಸ್ಪದ. ತಮ್ಮ ನಿಲುವಿನ ಸಮರ್ಥನೆಗೆ ಪೂರಕವಾಗಿ ವಾದ ಮಾಡುತ್ತಾ ಹೋಗುತ್ತಾರೆ. ಹೀಗಾಗಿ ಪೂರ್ಣ ನಂಬಿಕಾರ್ಹವಲ್ಲ.
    * ಆದರೆ ಕೊ.ಚೆ. ನ್ಯಾಯಾಧೀಶರಾಗಿದ್ದವರು. ಎರಡೂ ಕಡೆಯ ವಾದಗಳನ್ನು ತೂಗಿ ನೋಡಬಲ್ಲವರು. ವ್ಯಾಪಕ ಅನುಭವಶಾಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವರು. ಮತ್ತು ಜಾತ್ಯಾತೀತರಾಗಿ ಬದುಕು ಮಾಡಿದವರು. ಅವರ ಅಧ್ಯಯನವನ್ನು ಲಘುವಾಗಿ ನೋಡಲಾಗದು.

    * **** ಚರಿತ್ರೆಯ ವಿದ್ಯಾರ್ಥಿಯಾಗಿ ಟೀಪೂ ಕುರಿತ ಹತ್ತಾರು ಕೃತಿಗಳನ್ನು ನಾನು ಮೊದಲಿಂದ ಅಧ್ಯಯನ ಮಾಡಿದ್ದೇನೆ. ಆತ ಮೊದಲಿಂದಲೂ ಹೋರಾಟ ಮಾಡುತ್ತಲೇ ಮಡಿದವನು. ರಣರಂಗದಲ್ಲಿಯೆ ಸಾವನ್ನಪ್ಪಿದ ಅಪರೂಪದ ರಾಜ. [ ರಣಾಂಗಣದಲ್ಲಿ ಯಾವುದೇ ರಾಜರು ಸತ್ತದ್ದು ತುಂಬಾ ಕಡಿಮೆ.]. ಸುತ್ತಲೂ ಇದ್ದ ಎಲ್ಲ ರಾಜರೂ ಅವನ ವಿರೋಧಿಗಳು; ಬ್ರಿಟಿಷರ ಅಡಿಯಾಳುಗಳಾಗಿದ್ದವರು . ಯಾವುದೇ ನೆಪದಲ್ಲಿ ಅವನ ರಕ್ತ ಹೀರಲು ಸಜ್ಜಾಗಿ ನಿಂತಿದ್ದವರು. ಹಿಂದೂಗಳನ್ನು , ಅದ್ರಲ್ಲೂ ಕೊಡವರನ್ನು, ನಂಬೂದರಿಗಳನ್ನು ಟೀಪುವಿನ ಮೇಲೆ ಎತ್ತಿಕಟ್ಟಿದವರೇ ಅವರು. * ತನಗೆ ನಿಷ್ಟರಾಗಿದ್ದ ಕೊಡವರು, ಮಲಬಾರಿಗಳು ದ್ರೋಹಬಗೆದರೆಂಬ ಕಾರಣಕ್ಕೆ ಟೀಪು ವ್ಯಾಪಕವಾಗಿ ಮತಾಂತರ ಮಾಡಿಸಿದ, ಅದು ರಾಜಕೀಯ ಸ್ಟ್ರಾಟೆಜಿಯೇ ಹೊರತು , ಉಳಿದಾರಾಜರು ಮಾಡಿಸುತ್ತಿದ್ದ ರೀತಿಯ ಮತಾಂಧ ಕೃತ್ಯ ವಾಗಿರಲಿಲ್ಲ.[ ಈ ಕುರಿತು ಕೆಳಗೆ ಇನ್ನಷ್ಟು ವಿವರಗಳಿವೆ] ಇದಕ್ಕೆ ತುಂಬಾ ನಂಬಿಕಾರ್ಹ ಆಧಾರಗಳಿವೆ. ನಿಜವಾದ ಮತಾಂಧನಾಗಿದ್ದಿದ್ದರೆ ಆತನ ಪ್ರಧಾನಿ ಪೂರ್ಣಯ್ಯ; ನಂ. ಗೂಡು , ಶೃಂಗೇರಿ ಮುಂತಾದ ದೇವಾಲಯ್ಗಳಿಗೇಕೆ ದೇಣಿಗೆ, ಕಾಣಿಕೆ ಕೊಡುತ್ತಿದ್ದ? ಆತನ ಕಾಂಟಾಕ್ಟ್ ಗಳು ಅವನ ಕಾಲಕ್ಕಿಂತ ತುಂಬಾ ಮುಂದೆ ಇತ್ತು. ಕ್ಷಿಪಣೀಯ ಪ್ರಯೋಗ ಮಾಡಿದ್ದ. ಕೆ.ಆರ್.ಎಸ್ ಇರುವ ಜಾಗದಲ್ಲಿ ಚಿಕ್ಕ ಅಣೆಕಟ್ಟು ಕಟ್ಟಿಸಿದ್ದ;ಹದಿನೆಂಟು ಆಡಳಿತವಿಭಾಗಗಳ ಅಠಾರ ಕಚೇರಿ ಆತನ ಕೊಡುಗೆ. [ ಪೂರ್ಣಯ್ಯ] ಫ್ರೆಂಚರು, ಪರ್ಷಿಯನ್ನರೊಂದಿಗೆ ಅದಾಗಲೇ ಸಂಪರ್ಕ ಸಾಧಿಸಿದ್ದ. ಆಡಳಿತಗಾರನಾಗಿ ಕೂಡ ಅವನ ಸಾಧನೆ ದೊಡ್ಡ ಮಟ್ಟದ್ದು. ' ಬಿಟಿಶರನ್ನು ಭಾರತದ ಶತ್ರುಗಳು ' ಅಂತ ಭಾವಿಸಿ ಮೊತ್ತ ಮೊದಲಿಗೆ ಅವರನ್ನು ಎದುರಿಸಿದ ರಾಜ ಅವನು. ನಿಮ್ಮ ತಪ್ಪು ರಾಜಕೀಯ ಸಿದ್ಧಾಂತ ಗಳಿಗಾಗಿ ಅವನನ್ನು ಮತಾಂಧ ಅಂದರೆ , ಜೀವಮಾನವಿಡೀ ಜರ್ಜರಿತನಾಗಿದ್ದ ಒಬ್ಬ ನಿಜವಾದ ಸೇನಾನಿಗೆ ಮಾಡುವ ದ್ರೋಹ ವಾಗುತ್ತದೆ. ಕೊ.ಚೆ. ಅವರ ಪುಸ್ತಕ ಇನ್ನೂ ಓದಿಲ್ಲ . ಈಗ ಓದಬೇಕು. [ಉಳಿದದ್ದು ಕೆಳಗೆ] .....

    • Vasanth Kumar ಟಿಪ್ಪು ಸುಲ್ತಾನ್ ಬಗ್ಗೆ ಅಷ್ಟು ಆಳವಾಗಿ ಅಧ್ಯಯನ ಮಾಡಿಲ್ಲ, ಆದುದರಿಂದ ಟೀಪು ಬಗ್ಗೆ ಮಾತನಾಡುವುದಿಲ್ಲ... ಆದರೆ ಆ ಗುಜುರಿ ಅಂಗಡಿಯ ಬರಹವನ್ನು ಮಾತ್ರ ನಂಬುವುದಿಲ್ಲ... !
    8 minutes ago • Edited • Like

    ReplyDelete

  2. Jbrswamy Rangaswamy Jbrswamy Rangaswamy Raghavendra M Naik political strategy...??? ಹೌದೌದು political strategy.ಯೆ ? ತನಗೆ ನಿಷ್ಟರಾಗಿದ್ದಾರೆ ಅಂತ ನಂಬಿದ್ದ ಕೊಡವರು, ನಂಬೂದಾರಿಗಳು ಯಾವಾಗ ಮಂಗಳೂರು ಯುದ್ಧದ ನಂತರ ಬ್ರಿಟಿಷರ ಪರ ನಿನ್ತರೋ ಟೀಪು ರಾಜಕೀಯ ಮತಾಂತರ ಪ್ರತೀಕಾರ ಕೈಗೊಳ್ಳುತ್ತಾನೆ. ಅವರನ್ನು ತನ್ನ ಅಂಕಿತಕ್ಕೆ ತೆಗೆದುಕೊಳ್ಳುತ್ತಾನೆ. ಹೇಳಿ ಕೇಳಿ ಈ ಎರಡೂ ಜಾತಿಯವರೂ ನಿಷ್ಟೆಗೆ ಹೆಸರಾದವರು. ಒಮ್ಮೆ ಅವರು ಮುಸ್ಲೀಮರಾಗಿ ಬದಲಾದರೆ ತನಗೇ ನಿಷ್ಟರಾಗಿ ಉಳಿಯುತ್ತಾರೆ ಎಂಬ ಎಣಿಕೆ ಟೀಪುವಿನದು. ಈ ನಿರ್ಧಾರವನ್ನು ಹಿಂದೂ ಮುಖಂಡರೊಂದಿಗೆ ಸಮಾಲೋಚಿಸಿಯೇ ಕೈಗೊಳ್ಳುತ್ತಾನೆ. ದಟ್ಟಕಾಡುಗಳಿಂದ ಕೂಡಿದ್ದ ಕೊಡಗು, ಮಲಬಾರ್ ಪ್ರಾಂತ್ಯಗಳಲ್ಲಿ ಅವನಿಗೆ ಬಲವಾದ ರಕ್ಷಣೆಯಾಗಿ , ಅತ್ಯಂತ ನಿಷ್ಟರಾಗಿ ಕೋಟೆಯಂತೆ ಇದ್ದವರೇ ಕೊಡವರು ಮತ್ತು ಮಲಬಾರಿಗಳು. ಸಕಲೇಶಪುರದ ಬಳಿಯ ಮಂಜರಾಬಾದ್ ಕೋಟೆ ಇದ್ದೀತಾದರೂ ಪಶ್ಚಿಮದ ದತ್ತ ಕಾಡಿನ ಭಾಗಕ್ಕೆ ಒತ್ತಾಸೆಯಾಗಿದ್ದ ವರಲ್ಲಿ ಯಾರ್ಯಾರು ಬ್ರಿಟಿಷರಿಗೆ ನೆರವಾಗುತ್ತಿದ್ದರೋ ಅವರೆಲ್ಲರನ್ನೂ ಮತಾಂತರ ಮಾಡಿಸಿ ತನ್ನವರಾಗಿಸಿ ಕಟ್ಟುಪಾಡಿಗೆ ಪ್ರತಿಬಂಧಿಸಿದ. ಉಳಿದವರು ಜಾತಿಕೆಡಬಾರದೆಂದು ಟೀಪುವಿಗೆ ಶರಣಾದರು. ಮತಾಂತರಗೊಂಡವರೂ ಕೂಡ ಬ್ರಿಟಿಷರ ಪರ ಹೋಗಲಿಲ್ಲ. ಇದಕ್ಕೆ ನಾನಾ ವಿವರಣೆಗಳಿವೆ. ರಾಜನೀಷ್ಟೆ ಅನ್ನುವುದು ಕೊಡವ, ಮಲಬಾರಿಗಳಿಗೆ ರಕ್ತದಲ್ಲೇ ಬಂದಿರುವುದರಿಂದ , ಮುಸ್ಲೀಮರನ್ನಾಗಿಸಿದರೆ ಅವರು ಎಂದೆಂದಿಗೂ ತನ್ನನ್ನು ಬಿಟ್ಟು ಹೋಗಲಾರರು. ಮತಾಂತರ ಉಳಿದವರಿಗೆ ಭಯಾನಕ ಪಾಠ .; ದಟ್ಟ ಕಾಡು ಪ್ರದೇಶದಲ್ಲಿದ್ದ ಇವರ ಮೇಲೆ ಸದಾ ಹಿಡಿತ ಸಾಧಿಸಲು ಅನೇಕಬಾರಿ ಯತ್ನಿಸಿ ಟೀಪು ವಿಫಲನಾಗಿದ್ದ. *** ಈಗಿನ ಚಿಂತನೆಗಳಲ್ಲಿ ಮತಾಂತರ ಘೋರ ಅಪರಾಧ, ಬಲಾತ್ಕಾರ ಎಂಬಂತೆ ಕಾಣುತ್ತದೆ. ಆಗಿನ ಸಂಧರ್ಭಕ್ಕೆ ಅದು ಲಾಭದಾಯಕವಾದ ದಂಧೆಯೂ ಆಗಿತ್ತು ಎಂಬ ವಾಸ್ತವ ಸತ್ಯವನ್ನು ಮರೆಯುವಂತಿಲ್ಲ. near to king ಅಂದರೆ ರಾಜನ ಆಶ್ರಯದಲ್ಲಿ ಬೆಚ್ಚಗಿರುವುದು. ಈಗಿನ ಪಕ್ಷಾಂತರಿಗಳಂತೆಯೇ ಆಗಿನ ಬಹುತೇಕ ಮತಾಂತರಿಗಳು. ಸಮಯಸಾಧಕರಾಗಿದ್ದ ಇವರುಗಳಲ್ಲಿ ಬಹುತೇಕರು ರಾಜನ ಜಾತಿಗೆ ತಾವಾಗಿ ಸೇರಿಕೊಳ್ಳುತ್ತಿದ್ದರು . ನಮ್ಮ ಹಿಂದೂ ರಾಜರ ' ಧರ್ಮವನ್ನು ಸ್ವೀಕರಿಸಿದ್ದ ಗೌರವಾನ್ವಿತರನ್ನೂ ' ಸ್ವಲ್ಪ ಚೆನ್ನಾಗಿ ನೋಡಿ.! ಆದ್ದರಿಂದ ಮತಾಂತರವನ್ನು ರೇಪ್ ಎಂಬಂತೆ ನೋಡಬೇಕಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅದೊಂದು ಪ್ರೇಮವಿವಾಹವೇ ಆಗಿರುತ್ತಿತ್ತು. ಮತಾಂತರಗೊಂಡವರಲ್ಲಿ ಬಹುತೇಕರನ್ನು ಇಂದಿನ ಸಮಯಸಾಧಕ ಪಕ್ಷಾಂತರಿಗಳಿಗೆ ಹೋಲಿಸಬಹುದು. ಇವರುಗಳು ಮತಾಂತರ ಹೊಂದಿದಮೇಲೆ , ಒಳ್ಳೆ ಜಾಗ ಗಿಟ್ಟಿಸಿಕೊಂಡು ಉಳಿದ ಅಮಾಯಕರನ್ನು ಓಲೈಸಿ, ಪುಸಲಾಯಿಸಿ ಮತ್ತು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದರು.. ಇವೆಲ್ಲವೂ ಚರಿತ್ರೆಯ ಬೇರೊಂದು ಮುಖದಲ್ಲಿಯ ವಾಸ್ತವಗಳು.

    12-01-2014
    ಗುಜರಿ ಅಂಗಡಿ: ಟೀಪು ಸುಲ್ತಾನ್ ಕುರಿತ ಸತ್ಯಗಳು

    ReplyDelete
  3. ಜೆ ಬಿ ಅರ್ ಸ್ವಾಮಿಯವರೇ , ತನಗೆ ನಿಷ್ಟರಗಿರಲಿ ಎಂದು ಮತಾಂತರ ಮಾಡುವವನು ಜಾತ್ಯತೀತ ಹೇಗಾಗುತ್ತಾನೆ ? ಮತಾಂಧ ಅನಿಸಿಕೊಲ್ಲುತ್ತಾನೆ ಅಷ್ಟೇ , ಇವನು ಮತಾಂತರ ಮಾಡಿದ್ದು ಇಸ್ಲಾಂ ನ್ನು ಬೆಳೆಸಲು ಹೊರತು ಬೇರೇನೂ ಅಲ್ಲ, ಇವನು ಟರ್ಕಿ ಯ ರಾಜನಿಗೆ ಭಾರತದ ಮೇಲೆ ಜೆಹಾದ್ ಸಾರೋಣ ಅಂತ ಆಹ್ವಾನಿಸಿದ್ದು ನಿಮಗೆ ಗೊತ್ಹಿಲ್ವೆ ? ಕುರಾನ್ ಹೇಳುತ್ತದೆ ಯಾರು ಅಲ್ಲಾ ನನ್ನು ನಮ್ಬುವದಿಲ್ಲವೋ ಅವರನ್ನು ಮತ್ತು ಮೂರ್ತಿ ಪೂಜೆ ಮಾಡುವವರನ್ನು ಸಂಹಾರ ಮಾಡಿ ಅಂತ ಅವನು ಅದನ್ನು ಪಲಿಸಿದ್ದಾನೆ ಆಷ್ಟೇ. ಮತಾಂತರ ಮಾಡಿ ರಾಜ ನಿಷ್ಠೆ ಗಳಿಸಿಕೊಳ್ಳುವ ನೀಚ ಬುದ್ಧಿ ಈ ದೇಶವನ್ನಾಳಿದ ನೂರಾರು ಹಿಂದೂ ರಾಜರಿಗೆ ಇರಲಿಲ್ಲ , ಇದು ಬರೆ ಮುಸ್ಲಿಮರಿಗೆ ಮಾತ್ರ ಇತ್ತು .

    ReplyDelete
  4. ಟಿಪ್ಪು ಯಾರು ಅಂತಾ ಎಲ್ಲರಿಗೂ ಗೊತ್ತಿದೆ. ಅವರ ಅಪ್ಪ ಹೇಗೆ ಅಧಿಕಾರ ಪಡೆದ ಅದೂಗೊತ್ತಿದೆ. ಟಿಪ್ಪು ಆತನ ಕತ್ತಿಮೇಲೆ ಏನು ಬರೆಸಿಕೊಂಡಿದ್ದ ಅದೂಗೊತ್ತಿದೆ. ಕೋಚೆಗೆ ಏನು ಗೊತ್ತಿದೆ,ಕೆಲವು ಲದ್ದಿಜೀವಿಗಳ ಕಡೆಯಿಂದ ಶಬಬ್ಬಾಷ್ ಅನ್ನಿಸಿಕೊಳ್ಳೋದನ್ನು ಬಿಟ್ಟು.ಆ ಧರ್ಮಾಂದನ ಬಗ್ಗೆ ಸಮಗ್ರವಾಗಿ ಎಲ್ಲಾ ಭಾಷೆಗಳಲ್ಲೂ ಬಂದಿರುವ ಆತನ ವಿಚಾರಗಳನ್ನು ಓದಿ ತಿಳಿದರೆ ಆತನ ಬಗ್ಗೆ ಮಾತನಾಡಲೂ ಸಹ ಹೇಸಿಗೆಯಾಗುತ್ತದೆ.

    ReplyDelete
  5. ಈಗಿನ ಯುವ ಪೀಳಿಗೆಗೆ ಯಾರು ಮೋಸ ಮಾಡಕ್ಕಾಗಲ್ಲ, ಅಷ್ಟು ದಡ್ಡರಿಲ್ಲ, ಎಲ್ಲರಿಗೂ ಗೊತ್ತು vote bank ಗೋಕಾಕರ ಈ ಜಯಂತಿ ನಾಟಕ. ಇನ್ನು ಎನೇನ್ ಹಾಳ್ ಮಾಡ್ಬೇಕು ಅಂತಿದಿರೊ ಮಾಡಿ, ಕಾಲ ಉತ್ತರಿಸುತ್ತದೆ.

    ReplyDelete