ಅಮ್ಮನ ಸೀರೆ...!
ತುಂಬಾ....ಹಳೆಯ ಕವಿತೆ. ನಾನು ಕಾಲೇಜಲ್ಲಿ ಇದ್ದಾಗ ಬರೆದದ್ದು......
ಮನೆ ತುಂಬಾ ಅಮ್ಮನಿಗೆ ತಂದ
ಸೀರೆ ಕುರಿತು ಗುಲ್ಲೇ ಗುಲ್ಲು!
ಹಸಿರು ಅಂಚಿನ ಸೀರೆ;
ತುಂಬಾ ಅರಸಿನ ಬಣ್ಣ
ತಮ್ಮ ಸಿಡುಕಿದ, ದರ್ಗಾ-ಮಸೀದಿ ಮೇಲೆ
ಹಸಿರು ಬಾವುಟ
ಹಾರಿದ್ದು ಸಾಲದೆ?
ಅಂಚು ಹಿಡಿಸಿಲ್ಲವೆಂದು ತಿರುಗಿಸಿದ ಕಣ್ಣ!
ಗುಡುಗಿದ ಅಣ್ಣ
ಈಗೀಗ ಮೆಚ್ಚುತ್ತಿದ್ದಾಳೆ ಅಮ್ಮ ಆರೆಸ್ಸೆಸ್ಸನ್ನ
ಇಲ್ಲವೆಂದರೆ ಸೀರೆಗ್ಯಾಕೆ ಕೇಸರಿ ಬಣ್ಣ?
ಅವಳು ನಕ್ಕಳು ಕನ್ನಡಿಯಂತೆ ಹೊಳೆ ನೀರು
ಕೊಡ ತುಂಬಾ ಹೊತ್ತು ತಂದಳು
ತುಸು ಹೊತ್ತು ನೆನೆಯಿಟ್ಟು ಹೊರತೆಗೆದರೆ;
ಸೀರೆ...
ಥೇಟ್ ಅವಳ ನಗುವಿನಂತೆ
ಬಿಳಿಯ ಬಣ್ಣ!
ಈಗಿನ ಎಲ್ಲಾ ಸೀರೆಗಳು ನಿಮ್ಮ ಅಮ್ಮನ ಸೀರೆಯಂತೆ ಬಣ್ಣ ಬಿಟ್ಟರೇನೆ ಒಳ್ಳೆಯದು ಎಂದನಿಸುತ್ತದೆ!!
ReplyDeleteಬಾನಾಡಿ
Nice sir
ReplyDelete