Monday, November 25, 2013

ಪ್ರಾರ್ಥನೆ ಅಂದರೆ

 ಪ್ರಾರ್ಥನೆ ಅಂದರೆ
ಏನು ದೊರೆಯೇ,
ಕಣ್ಣೀರಲ್ಲದೆ
ಇನ್ನೇನು?

ಪ್ರಾರ್ಥನೆಗೂ
ಒಂದು ರುಚಿಯಿದೆ
ಎನ್ನೋದು ತಿಳಿಯಿತು
ನನ್ನ ದೊರೆಯೇ,
ನನ್ನ ಕಣ್ಣೀರ ಉಪ್ಪು
ತುಟಿಯನ್ನು ಸೋಕಿದಾಗ

ಪಂಡಿತರ ಮಂತ್ರಗಳ
ಸದ್ದುಗಳ ನಡುವೆ
ನನ್ನ ಕಣ್ಣೀರ ಹನಿಯೊಂದು
ನೆಲಕ್ಕೆ ಬಿದ್ದು ಒಡೆದ ಸದ್ದು
ನಿನಗೆ ಕೇಳಿಸಲಿಲ್ಲವೇ
ನನ್ನ ದೊರೆಯೇ?

"ಹೋ ಪ್ರಾರ್ಥನೆಯ ಹೊತ್ತಾಯಿತು"
ಯಾರೋ ಚೀರಿದರು
ನನ್ನ ದೊರೆಯೇ,
ಇದು ನನ್ನ ಉಣ್ಣುವ ಹೊತ್ತು
ನಿಜ ಭಕ್ತನಿಗೆ
ಉಣ್ಣೂದು ಪ್ರಾರ್ಥನೆಯೇ

ಮಸೀದಿಯಲ್ಲಿ
ಅಜಾನ್ ಕೇಳುತ್ತಿದೆ
ನನ್ನ ದೊರೆಯೇ,
ಮಹಮ್ಮದರ ಹೆಗಲಿಗೆ
ಕಾಲಿಟ್ಟು
ಕಾಬದ ನೆತ್ತಿಯನ್ನು ಏರಿದ
ಬಿಲಾಲ್ ನೆನಪಾದರು

3 comments:

  1. A very good meaningfull peom, which itself is like a prayer

    ReplyDelete
  2. ಕವನ ಸೊಗಸಾಗಿದೆ. ಆದರೆ ಕಾಬಾದ ನೆತ್ತಿಯನ್ನು ಏರಿದ ಬಿಲಾಲರು ಯಾರು ಎಂದು ತಿಳಿಯಲಿಲ್ಲ, ಸ್ವಲ್ಪ ವಿವರಿಸುವಿರಾ?

    ReplyDelete
  3. ಬಿಲಾಲ್ ಒಬ್ಬ ನಿಗ್ರೋ ಆಗಿದ್ದರು. ಗುಲಾಮ ನಾಗಿದ್ದಾಗ ಮಹಮ್ಮದರ ಅನುಯಾಯಿ ಯಾಗಿದ್ದರು. ಮಹಮ್ಮದರು ಬಳಿಕ ಅವನ ಗುಲಾಮತನದಿಂದ ಬಿಡುಗಡೆ ಗೊಳಿಸಿದರು. ಮಹಮ್ಮದರ ಮೊತ್ತ ಮೊದಲ ನೀಗ್ರೋ ಅನುಯಾಯಿ ಬಿಲಾಲ್. ಮೊತ್ತ ಮೊದಲ ಬಾರಿಯ ಆಜಾನ್ ಕರೆಯನ್ನು ನೀಡುವ ಅವಕಾಶವನ್ನು ಮಹಮ್ಮದರು ಬಿಲಾಲ್ ಗೆ ನೀಡಿದರು. ಕಾಬಾ ಭವನದ ಮೇಲೆ ಹತ್ತಿ ಆಜಾನ್ ಅಥವಾ ಪ್ರಾರ್ಥನೆಯ ಕರೆ ನೀಡಿ ಎಂದು ಮಹಮ್ಮದರು ಹೇಳಿದರು. ಬಿಲಾಲ್ ಗೆ ಕಾಬಾ ಭವನವನ್ನು ಹತ್ತಲು ಕಷ್ಟವಾದಾಗ ಮಹಮ್ಮದರು ತನ್ನ ಹೆಗಲನ್ನು ಚಾಚಿದರು. ಮಹಮ್ಮದರ ಹೆಗಲ ಮೇಲೆ ಕಾಲಿಟ್ಟು ಕಾಬಾ ಭವನ ಹತ್ತಿ ಬಿಲಾಲ್ ಮೊತ್ತ ಮೊದಲ ಅಜಾನ್ ಕರೆಯನ್ನು ನೀಡಿದರು

    ReplyDelete