ಪೇಂಟಿಂಗ್
ಒಬ್ಬ ಚಿತ್ರ ಕಲಾವಿದನ ಮನೆಯ ಗೋಡೆಗಳು ಹಲವು ವರ್ಷಗಳಿಂದ ಬಣ್ಣವಿಲ್ಲದೆ ಮಾಸಿ ಹೋಗಿತ್ತು.
ಮಳೆಗಾಲದ ನೀರು ಸೋರಿ, ಪಾಚಿಗಟ್ಟಿ ಗೋಡೆ ತುಂಬ ಹರಡಿಕೊಂಡಿತ್ತು.
ಕಲಾವಿದನ ಅಭಿಮಾನಿಯೊಬ್ಬ ಆ ಮನೆಗೆ ಬಂದ.
ಗೋಡೆಯನ್ನು ನೋಡಿದ್ದೇ ಕಣ್ಣರಳಿಸಿ ಹೇಳಿದ ‘‘ಓಹ್, ಎಂತಹ ಅದ್ಭುತ ಪೇಂಟಿಂಗ್!’’
ರಾಜಕಾರಣ
‘‘ಜಾತಿ ರಾಜಕಾರಣ ಈ ನಾಡಿಗೆ ಅಂಟಿದ ಶಾಪ’’
ಸ್ವಾಮೀಜಿ ಹೀಗೆಂದು ಕರೆಕೊಟ್ಟರು.
ಊಟದ ಸಮಯದಲ್ಲಿ ಮೆಲ್ಲನೆ ತಮ್ಮ ಜಾತಿಯ ಪಂಕ್ತಿಯನ್ನು ಸೇರಿಕೊಂಡರು.
ಸರಕಾರಿ ಬಸ್ಸು
ಭಾರತ ಒಂದು ಸರಕಾರಿ ಬಸ್ ಇದ್ದ ಹಾಗೆ.
ನೀವು ಅದರೊಳಗೆ ಪ್ರವೇಶಿಸಿ ನೋಡಿ.
ಮಹಿಳೆಯರ ಮೀಸಲು ಆಸನದಲ್ಲಿ ತರುಣರು ಕೂತಿದ್ದಾರೆ.
ಸ್ವಾತಂತ್ರ ಹೋರಾಟಗಾರರ ಆಸನದಲ್ಲಿ ಇಬ್ಬರು ಠಕ್ಕರು ಮೀಸೆ ತಿರುವುತ್ತಿದ್ದಾರೆ.ವೃದ್ಧರ ಆಸನದಲ್ಲಿ ತರುಣಿಯರು ಲಲ್ಲೆ ಹೊಡೆಯುತ್ತಿದ್ದಾರೆ.
ಅಂಗವಿಕಲರ ಆಸನದಲ್ಲಿ ಇಬ್ಬರು ಗೂಂಡಾಗಳು...
ಉಳಿದ ಒಂದೆರಡು ಸಾಮಾನ್ಯ ಆಸನಗಳಲ್ಲಿ ಯಾರದೋ ಸರಕುಗಳು...
ವೃದ್ಧರು, ಮಹಿಳೆಯರು, ಅಂಗವಿಕಲರು, ಸ್ವಾತಂತ್ರ ಹೋರಾಟಗಾರರು
ನಿಂತು, ಬಸವಳಿದು, ಹಣೆಯ ಬೆವರು ಒರೆಸಿಕೊಳ್ಳುತ್ತಾ
ಬಸ್ಸಿನೊಳಗೆ ಬರೆದಿದ್ದ ಘೋಷಣೆಯನ್ನು ಓದುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ...
‘‘ಮೇರಾ ಭಾರತ್ ಮಹಾನ್’’
ಕೆಸರು
ಛೀ...ಕೆಸರು ದೂರ ನಿಲ್ಲು...ಅವನೆಂದ.
ಕೆಸರು ತುಳಿಯುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು.
ಆ ಕೆಸರನ್ನು ರೈತನೊಬ್ಬ ತುಳಿದ.
ಕೈಯಲ್ಲಿದ್ದ ಬೀಜವನ್ನು ಬಿತ್ತಿದ.
ಈಗ ದಾರಿ ಹೋಕರೆಲ್ಲ ಹೇಳುತ್ತಾರೆ ‘‘ಆಹಾ ಎಷ್ಟು ಸುಂದರವಾದ ಗದ್ದೆ’’
ಮನೆ
ಒಂದು ದೊಡ್ಡ ಬಂಗಲೆ.
ಅದಕ್ಕೆ ಹತ್ತು ವಿಶಾಲ ಕೋಣೆಗಳು.
ಅಲ್ಲಿ ಬದುಕುತ್ತಿರುವವರು ಮಾತ್ರ ಮೂವರು.
ಗಂಡ-ಹೆಂಡತಿ ಮತ್ತು ಒಬ್ಬ ಮಗ.
ಆ ಮನೆಯಲ್ಲಿ ಗಂಡನನ್ನು ಹುಡುಕುತ್ತಾ ಹೆಂಡತಿ, ತಂದೆ ತಾಯಿಯನ್ನು ಹುಡುಕುತ್ತಾ ಮಗ ಕಾಲ ಕಳೆಯುತ್ತಿದ್ದಾರೆ.
ಅಷ್ಟು ದೊಡ್ಡ ಮನೆಯಲ್ಲಿ ಅವರು ಅಪರೂಪಕ್ಕೆ ಒಮ್ಮೆಮ್ಮೆ ಸಂಧಿಸುತ್ತಿರುತ್ತಾರೆ.
ಅಂದು ಅವರಿಗೆ ವಿಶೇಷ ದಿನ.
ಅಸ್ಪೃಶ್ಯತೆ
ಗುಬ್ಬಚ್ಚಿಗಳು ಮಹಾ ಜಾತೀಯವಾದಿಗಳು, ಮನುಷ್ಯ ಮುಟ್ಟಿದ ಗುಬ್ಬಚ್ಚಿಯನ್ನು
ಹಕ್ಕಿಗಳೆಲ್ಲ ಸೇರಿ ತಮ್ಮ
ಜಾತಿಯಿಂದ ಹೊರ ಹಾಕಿದವು

ಇಲ್ಲಿರುವ
ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ.
ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
wow all stories like mini bullets...liked Rajakarana, sarakari bussu and mane, the most!!
ReplyDeletemalathi S
ಗೂಗಲ್ ಇಮೇಜ್ ಅನ್ನುವುದು ಒಂದು ಸರ್ಜ್ ಎಂಜಿನ್. ಅಂದರೆ ಇಂಟರ್ನೆಟ್ಟಿನಲ್ಲಿ ಬೇರೆ ಬೇರೆ ಜಾಲತಾಣಗಳಲ್ಲಿ ಇರುವ ಚಿತ್ರಗಳನ್ನು ನಿಮಗೆ ಹುಡುಕಿ ಕೊಡುತ್ತದೆ. ಆದ್ದರಿಂದ ನೀವು ಚಿತ್ರಗಳನ್ನು ತೆಗೆದುಕೊಳ್ಳುವಾಗ ಅದು ಯಾವ ಜಾಲತಾಣದ್ದು ಅಥವಾ ಯಾರದ್ದು (ಗೊತ್ತಿದ್ದರೆ) ಎಂದು ಉಲ್ಲೇಖಿಸಿ ಅದಕ್ಕೆ ಕ್ರೆಡಿಟ್ಸ್ ಕೊಡುವುದು ಸೂಕ್ತ.
ReplyDeleteಖಂಡಿತ. ಇನ್ನು ಮುಂದೆ ಅದನ್ನು ಪಾಲಿಸುವೆ. ವಂದನೆಗಳು.
ReplyDelete