ಪ್ರವಾದಿ
ನಾನು ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಹೊರಬಂದ ‘ಪ್ರವಾದಿಯ ಕನಸು’ ಕವನ ಸಂಕಲನದ ಒಂದು ಪುಟ್ಟ ಕವಿತೆಯನ್ನು ಇಲ್ಲಿ ನೀಡಿದ್ದೇನೆ. ಈ ಕವಿತೆಯನ್ನು ನೀವು ಈ ಹಿಂದೆ ಓದಿರುವ ಸಾಧ್ಯತೆ ತೀರಾ ಕಡಿಮೆ.
ದೇವರ ಪಟ-
ದ ಮೇಲೆ ಗುಬ್ಬಚ್ಚಿ
ಬೆಳಕಿನ ಕಡ್ಡಿ
ಕೊಕ್ಕಲ್ಲಿ ಕಚ್ಚಿ
ನಿವೇಶ ಕೋರಿ
ಕಣ್ಣಲ್ಲಿ ಸಣ್ಣ ಅರ್ಜಿ
ಎಡವಿ ಅಮ್ಮನ
ಭಕ್ತಿ-
ಹಚ್ಚಿಟ್ಟ ಬತ್ತಿ
ದೇವರ ನೆತ್ತಿ ಮೇಲೆ ಪಾದ
ಇದಾವ ಚಾರ್ವಾಕ ವಾದ!?
ನಿಂತಲ್ಲೇ ಸೆಟೆದ
ದಿಟ್ಟ
ಪುಟ್ಟ ಸಾಮ್ರಾಟ
ಗರಿಗಳೆಡೆ ಬಚ್ಚಿಟ್ಟ
ಹತ್ಯಾರುಗಳ ಪಟಪಟ ಬಿಚ್ಚಿಟ್ಟ
ಕಟ್ಟುವುದಕ್ಕೀಗ ರೆಡಿ
ಬಹುಶಃ ಪುಟ್ಟ ಒಂದು ಗುಡಿ!
ಇರುಳು ಮುಗಿಯುವುದರಲ್ಲಿ
ಮನೆ ತುಂಬಾ
ಪ್ರೀತಿಗೆ ಭಾಷೆ
ಭಕ್ತಿಯ ಮಡಿಯುಟ್ಟು ಉಷೆ!
ಈ ಕವನದ ಬಗ್ಗೆ ಕಾಯ್ಕಿಣಿ ಎಲ್ಲೋ ಏನೋ ಬರೆದಿದ್ರು ಅನ್ಸುತ್ತೆ ಅಲ್ವಾ?.. ನೈಸ್!
ReplyDeleteಬಶೀರ್ ಸರ್, ಶಬ್ದ ಮತ್ತು ಪದ ಬಳಕೆ..ತೀರಾ ಸರಳ ಮತ್ತು ಸಾಧಾರಣ ರಚನೆ ಮಾಡುವ ನಮಗೆ ಸ್ವಲ್ಪ ಅರ್ಥೈಸುಕೊಳ್ಳುವುದು ಕಷ್ಟವೇ... ಹತ್ಯಾರುಗಳ-ಇದು ಆಯುಧಕ್ಕೆ ಪರ್ಯಾಯವೋ ಅಥವಾ ಕೊಲೆಗಡುಕ ಅನ್ನೋ ಪದಕ್ಕೆ ಸಮಾನಾರ್ಥವೋ ತಿಳಿಯಲಿಲ್ಲ...ಭಕ್ತಿಯ ಮಡಿಯುಟ್ಟ ಉಷೆ-ಈ ಪ್ರಯೋಗ ತುಂಬಾ ಇಷ್ಟವಾಯ್ತು.
ReplyDelete