Thursday, July 18, 2013

ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ: ಒಲವು ನಿಲುವು

 ‘ಮುಸ್ಲಿಮ್ ಹೆಣ್ಣು ಮಕ್ಕಳು ಮಸೀದಿಗೆ ನಮಾಝ್‌ಗೆ ಹೋಗುವುದರ ಕುರಿತಂತೆ ನೀನ್ಯಾಕೆ ಮಾತನಾಡುವುದಿಲ್ಲ....?’ಎಂದು ಕೆಲವು ಗೆಳೆಯರು ನನ್ನ ಹಣೆಗೆ ಪಿಸ್ತೂಲ್ ಒತ್ತಿ ಕೇಳುತ್ತಿದ್ದಾರೆ. ಹೀಗೆಂದು ಕೇಳಿದವರಲ್ಲಿ, ಹೆಣ್ಣು ಮಕ್ಕಳು ತಲೆವಸ್ತ್ರ ಹಾಕಿ ಶಾಲೆಗೆ ಹೋಗುವುದನ್ನು ಶತಾಗತಾಯ ವಿರೋಧಿಸಿದವರಿದ್ದಾರೆ. ‘ತಲೆವಸ್ತ್ರ (ಸ್ಕಾರ್ಫ್) ಅವರಿಗೆ ಮುಖ್ಯವೆಂದಾದರೆ ಅವರು ಮನೆಯಲ್ಲೇ ಇರಲಿ’ ಎಂದು ವಾದಿಸಿದ ಕಮ್ಯುನಿಸ್ಟ್ ಗೆಳೆಯರಿದ್ದಾರೆ. ಇದೀಗ ಕೆಲವರಂತೂ ‘ದಲಿತರ ಮೇಲೆ ಪ್ರೀತಿ ತೋರಿಸುವ ನೀನು ಮುಸ್ಲಿಮ್ ಮಹಿಳೆ ಮಸೀದಿಯಲ್ಲಿ ನಮಾಝ್ ಮಾಡುವುದರ ಕುರಿತಂತೆ ಯಾಕೆ ಸುಮ್ಮನಿದ್ದೀಯ?’ ಎಂದು ಪದೇ ಪದೇ ಕೇಳಿ, ನನ್ನ ಬಾಯಿ ಮುಚ್ಚಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ನಾನಿಲ್ಲಿ ಅನಿವಾರ್ಯವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಯಾಕೆಂದರೆ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಬೇಕು, ಹೋಗಬಾರದು ಎನ್ನುವುದು ನನಗೆ ಯಾವತ್ತೂ ಪ್ರಶ್ನೆಯಾಗಿರಲಿಲ್ಲ. ಮಸೀದಿಗೆ ಹೋಗಲೇ ಬೇಕೆಂದರೆ, ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನೀಡುವ ಮಸೀದಿಗಳು ಇದೀಗ ಎಲ್ಲ ಕಡೆ ತಲೆಯೆತ್ತುತ್ತಿವೆ. ನನಗೆ ಮುಖ್ಯವೆನಿಸುವುದು ಶಾಲೆ, ಕಾಲೇಜುಗಳಿಗೆ ಮುಸ್ಲಿಮ್ ಮಹಿಳೆಯರು ಇನ್ನಷ್ಟು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತೆರಳಬೇಕು. ನಾವಿಂದು ಧ್ವನಿಯೆತ್ತಬೇಕಾದುದು ಈ ಕುರಿತಂತೆ.

ಹಾಸನದಲ್ಲಿ ನಡೆದ ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ ವಿವಾದ ಹೊಸತೇನೂ ಅಲ್ಲ. ಮತ್ತು ಈ ಚಳವಳಿಯ ಹಿಂದೆ ಮುಸ್ಲಿಮ್ ಮೂಲಭೂತವಾದಿಗಳೆಂದು ಪ್ರಗತಿಪರರು ಯಾರನ್ನು ಕರೆಯುತ್ತಾರೆಯೋ ಅವರೂ ಇದ್ದಾರೆ ಎಂದರೆ ಎಂದರೆ ನೀವು ಒಪ್ಪುತ್ತೀರೋ ಇಲ್ಲವೋ. ಸುಮಾರು ಹದಿನೈದು ವರ್ಷಗಳ ಹಿಂದೊಮ್ಮೆ ಇಂತಹದೇ ಪ್ರಕರಣ ಹಾಸನದಲ್ಲಿ ನಡೆದಿತ್ತು. ಮಸೀದಿ ಪ್ರವೇಶವನ್ನು ಎತ್ತಿ ಹಿಡಿದ ಭಾನು ಮುಷ್ತಾಕ್ ಮೇಲೆ ಕೆಲವರು ನಿಷೇಧವನ್ನೂ ಹೇರಿದ್ದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಅದನ್ನು ಬಲವಾಗಿ ಖಂಡಿಸಿದವನಲ್ಲಿ ನಾನೂ ಒಬ್ಬ. ಆದರೆ ನಾನು ಈ ಸಂದರ್ಭದಲ್ಲಿ ಇನ್ನೂ ಒಂದು ಸಾಲನ್ನು ಒತ್ತಿ ಹೇಳಿದ್ದೆ. ಮುಸ್ಲಿಮ್ ಮಹಿಳೆಯರ ಸಮಸ್ಯೆ ಮಸೀದಿಯಲ್ಲ. ಶಾಲೆ, ಕಾಲೇಜುಗಳು ಎಂದು ಅಭಿಪ್ರಾಯಿಸಿದ್ದೆ. ಅದಕ್ಕೆ ಕಾರಣವೂ ಇತ್ತು.

 ಕರ್ನಾಟಕದಲ್ಲಿ ಮುಸ್ಲಿಮ್ ಮಹಿಳೆಯರೂ ಧರ್ಮದ ಪ್ರಮುಖ ಭಾಗವಾದುದು ಈ ಭಾಗದಲ್ಲಿ ಜಮಾತೆ ಇಸ್ಲಾಮ್ ತಲೆ ಎತ್ತಿದ ಬಳಿಕ ಎನ್ನುವುದನ್ನು ಗಮನಿಸಬೇಕು. ಜಮಾತೆ ಇಸ್ಲಾಮನ್ನು ಕೆಲವರು ಮುಸ್ಲಿಮ್ ಮೂಲಭೂತವಾದಿ ಸಂಘಟನೆಯೆಂದು ಕರೆಯುತ್ತಿರುವುದೂ ಇಲ್ಲಿ ಮುಖ್ಯವಾಗುತ್ತದೆ. ನಿಜಕ್ಕೂ ಇದೊಂದು ಬಿಕ್ಕಟ್ಟೇ ಸರಿ. ನಾವು ಯಾರನ್ನು ಮುಸ್ಲಿಮ್ ಮೂಲಭೂತವಾದಿಗಳೆಂದು ಟೀಕಿಸುತ್ತೇವೆಯೋ ಅವರೇ ಮೊತ್ತ ಮೊದಲಾಗಿ ಕನ್ನಡದಲ್ಲಿ ಕುರ್‌ಆನನ್ನು ತರ್ಜುಮೆ ಮಾಡಿದರು. ಬಹುಸಂಸ್ಕೃತಿಯ ಪ್ರತಿನಿಧಿಗಳೆನಿಸಿಕೊಂಡ ಇಲ್ಲಿನ ದರ್ಗಾದ ಜನರೆಲ್ಲ ಇದನ್ನು ಪ್ರತಿಭಟಿಸಿದ್ದರು. ‘‘ಕನ್ನಡದಲ್ಲಿ ಕುರ್‌ಆನ್...ತರುವುದೇ...’’ ಎಂದು ಆಘಾತ ವ್ಯಕ್ತಪಡಿಸಿದ್ದರು. ನನ್ನ ಬಾಲ್ಯದಲ್ಲಿ, ಮುಸ್ಲಿಮ್ ಸಮುದಾಯದ ಬಹುತೇಕ ಮಂದಿ ಜಮಾತೆ ಇಸ್ಲಾಮಿನ ವಿರುದ್ಧ ಧ್ವನಿಯೆತ್ತಿದ್ದರು. ಕತ್ತಿ ಹಿಡಿದು ಅವರ ಮೇಲೆ ಏರಿ ಹೋದವರೂ ಇದ್ದಾರೆ. ಅದಕ್ಕೆ ಮುಖ್ಯ ಕಾರಣವೊಂದಿತ್ತು. ಜಮಾತೆ ಇಸ್ಲಾಮ್ ದರ್ಗಾಗಳನ್ನು ನಂಬುವುದಿಲ್ಲ. ಅದಕ್ಕೆ ಕುರ್‌ಆನ್‌ನಲ್ಲಿ ಸ್ಥಾನವಿಲ್ಲ ಎಂದು ವಾದಿಸುತ್ತಾರೆ. ದರ್ಗಾದಲ್ಲಿ ದೀಪ ಹಚ್ಚುವುದು, ಉರೂಸ್ ಆಚರಿಸುವುದು ಇತ್ಯಾದಿಗಳೆಲ್ಲ ಇಸ್ಲಾಮ್ ಧರ್ಮಕ್ಕೆ ವಿರುದ್ಧ ಎಂದು ಜಮಾತೆ ಇಸ್ಲಾಮಿನ ಮಂದಿ ವಾದಿಸುತ್ತಾರೆ. ಬಾಬಾಬುಡಾನ್‌ಗಿರಿ ದರ್ಗಾದ ಬಗ್ಗೆ ಯಾವುದೇ ಧಾರ್ಮಿಕ ಭಾವನೆಗಳನ್ನೂ ಜಮಾಅತೆ ಇಸ್ಲಾಮಿ ಪಂಗಡವಾಗಲಿ, ಸಲಫಿ ಪಂಗಡವಾಗಲಿ ಹೊಂದಿಲ್ಲ. ಪರೋಕ್ಷವಾಗಿ ಅದು ಧ್ವಂಸವಾಗಬೇಕು ಎಂದೇ ಅವರು ಆಶಿಸುತ್ತಾರೆ. ಆದರೆ ಸೂಫಿ ಸಂತರ ದರ್ಗಾಗಳ ಬಗ್ಗೆ, ಭಾರತದ ಭಾವನೆ ಭಿನ್ನವಾದುದು. ಅದು ಈ ದೇಶದ ಬಹುಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಗತಿಪರರ ಸಹಿತ ಎಲ್ಲರೂ ವಾದಿಸುತ್ತಾರೆ. ಆದರೆ ಇಂದು ನಮ್ಮ ನಡುವಿನ ದರ್ಗಾಗಳನ್ನು ನೆಲೆ ಮಾಡಿಕೊಂಡ ಸುನ್ನಿಗಳು ಮುಸ್ಲಿಮ್ ಮಹಿಳೆಯರು ಶಾಲಾ ಕಾಲೇಜುಗಳಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಮಸೀದಿಗಳಲ್ಲಿ ಮಹಿಳೆಯರು ನಮಾಝ್ ಮಾಡುವುದನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಾರೆ. ಇಂತಹ ಕಾಲಘಟ್ಟದಲ್ಲಿ, ಇಸ್ಲಾಮ್‌ನ ಮೂಲಭೂತ ತತ್ವಗಳ ಆಧಾರದ ಮೇಲೆ ನಿಂತಿದ್ದೇವೆ ಎನ್ನುವ ಜಮಾತೆ ಇಸ್ಲಾಮಿಗಳು ಮುಸ್ಲಿಮರು ವೇದಿಕೆ ಏರುವುದನ್ನು, ಶಾಲೆಗೆ ಹೋಗುವುದನ್ನು ಪ್ರೋತ್ಸಾಹಿಸಿದರು. ಆದರೆ ಅದು ಧಾರ್ಮಿಕ ಗೆರೆಗಳ ಒಳಗೆ ಎನ್ನುವುದನ್ನು ನಾವು ಗಮನಿಸಬೇಕು.

ಜಮಾತೆ ಇಸ್ಲಾಮಿನ ನಂತರ ಕರಾವಳಿಯಾದ್ಯಂತ ತಲೆಯೆತ್ತಿದ ಸಂಘಟನೆ ಸಲಫಿ ಮೂವ್‌ಮೆಂಟ್. ಅದೀಗ ತನ್ನ ರೆಕ್ಕೆಗಳನ್ನು ಬಿಚ್ಚಿದೆ. ಇದು ಜಮಾತೆ ಇಸ್ಲಾಮಿಗಿಂತಲೂ ಕಟುವಾಗಿ ಇಸ್ಲಾಮ್ ಮೂಲಭೂತ ತತ್ವಗಳನ್ನು ಪಾಲಿಸಲು ಹೆಣಗುತ್ತಿದೆ. ಮುಸ್ಲಿಮ್ ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು, ಅದಕ್ಕೆ ಕುರ್‌ಆನ್‌ನ ಸಾಕ್ಷಗಳನ್ನು ಒದಗಿಸಿದ್ದು ಇದೇ ಸಲಫಿಗಳು. ಕರಾವಳಿಯಲ್ಲಿ ಉಳ್ಳಾಲ ದರ್ಗಾಕ್ಕೆ ಸವಾಲಾಗಿ ಸಲಫಿಗಳು ಹುಟ್ಟಿಕೊಂಡರು. ಸೌದಿ ಅರೇಬಿಯಾದ ಸಲಫಿಗಳು ಇವರಿಗೆ ಆದರ್ಶವಾದರು. ದರ್ಗಾಗಳ ವಿರುದ್ಧ ಇವರ ಹೋರಾಟ ಹಲವು ಮನೆಗಳನ್ನು, ಕುಟುಂಬಗಳನ್ನು ಒಡೆದಿದೆ. ಪ್ರವಾದಿಯ ಹುಟ್ಟು ಹಬ್ಬ ದಿನಾಚರಣೆಯನ್ನು, ಸಾರ್ವಜನಿಕ ಮೆರವಣಿಗೆಯನ್ನು ಇವರು ಶತಾಯಗತಾಯ ವಿರೋಧಿಸುತ್ತಾರೆ. ಒಂದೇ ಮನೆಯಲ್ಲಿ ತಂದೆ ಸುನ್ನಿ, ಮಗ ಸಲಫಿಗಳಾಗಿ ಬದುಕುವುದಿದೆ. ಅವರ ನಡುವೆಯೇ ಜಗಳಗಳಾಗುವುದಿದೆ. ಮನೆಯಲ್ಲಿ ಪ್ರವಾದಿಯ ಪಾರಾಯಣ(ವೌಲೂದು)ವನ್ನು ತಂದೆ ಒಪ್ಪಿದ್ದರೆ ಮಗ ವಿರೋಧಿಸುವುದಿದೆ. ಇದೇ ಸಲಫಿಗಳು ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು ಮತ್ತು ಮಂಗಳೂರು ಸೇರಿದಂತೆ ಇವರ ಎಲ್ಲ ಮಸೀದಿಗಳಲ್ಲಿ ಮಹಿಳೆಯರು ಮಸೀದಿಗೆ ಹೋಗುತ್ತಾರೆ. ಮಾತ್ರವಲ್ಲ, ಇವರ ಶಾಲಾ ಕಾಲೇಜುಗಳಿವೆ. ಅಲ್ಲಿ ಮುಸ್ಲಿಮ್ ಮಹಿಳೆಯರು ಕೇವಲ ಅರಬೀ ಅಕ್ಷರ ಮಾತ್ರ ಕಲಿಯುವುದಲ್ಲ, ಅದರ ಅರ್ಥ ಸಹಿತ ಕಲಿಯುತ್ತಾರೆ. ಸಲಫಿಯ ಮಹಿಳೆಯರು ಯಾವುದೇ ಮುಸ್ಲಿಮ್ ಧರ್ಮಗುರುವನ್ನು ಮೀರುವಂತೆ ಧಾರ್ಮಿಕ ಜ್ಞಾನವನ್ನು ಹೊಂದಿರುತ್ತಾರೆ. ಸುನ್ನಿ ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಲು ಅವಕಾಶ ನೀಡಬೇಕು ಎಂದು ಮಂಗಳೂರಿನ ಕೆಲವು ಸಲಫಿ ಮಹಿಳೆಯರು ನ್ಯಾಯಾಲಯಕ್ಕೂ ತೆರಳಿದ್ದಾರೆ.

ಮಸೀದಿಗೆ ತೆರಳಿದಾಕ್ಷಣ ಮುಸ್ಲಿಮ್ ಮಹಿಳೆಯರ ಹಕ್ಕುಗಳು ಸಿಕ್ಕೇ ಬಿಡುತ್ತವೆ ಎಂದು ನಾನು ಈ ಕಾರಣಕ್ಕಾಗಿಯೇ ನಂಬುವುದಿಲ್ಲ. ಕೆಲವು ಕಟ್ಟಾ ಸಲಫಿಗಳು ಮುಸ್ಲಿಮ್ ಮಹಿಳೆಯ ಕುರಿತಂತೆ ಅಷ್ಟೇ ಕಟ್ಟಾ ನಿಲುವನ್ನು ತಳೆದಿದ್ದಾರೆ. ಕಣ್ಣು ಮಾತ್ರ ಕಾಣುವಂತೆ ಮುಖ ಮುಚ್ಚಿಕೊಳ್ಳುವ ಬುರ್ಖಾಗಳು ಬಂದಿರುವುದು ಈ ಸಲಫಿಗಳ ಮೂಲಕವೇ ಎನ್ನುವುದನ್ನು ನಾವು ಗಮನಿಸಬೇಕು. ಕೆಲವು ಸಲಫಿಗಳ ಗಡ್ಡಗಳು ವಿಕಾರವಾಗಿ ಬೆಳೆದಿರುತ್ತವೆ. ಮತ್ತು ಅವರು ಅದನ್ನು ಉದ್ದೇಶಪೂರ್ವಕವಾಗಿ, ಪ್ರದರ್ಶನಕ್ಕಾಗಿಯೇ ಬಿಟ್ಟಿರುತ್ತಾರೆ. ಪ್ರವಾದಿಯವರು ಮಧ್ಯಮ ನಿಲುವಿಗೆ ಆದ್ಯತೆ ನೀಡಿದವರು. ಪ್ರೀತಿ, ದ್ವೇಷ ಮಾತ್ರವಲ್ಲ ಆರಾಧನೆಯೂ ತನ್ನ ಮಧ್ಯಮ ನಿಲುವನ್ನು ದಾಟ ಬಾರದು ಎಂದು ಹೇಳಿದವರು. ಮನುಷ್ಯನ ಸೌಂದರ್ಯಕ್ಕೆ ಒತ್ತುಕೊಟ್ಟವರು. ಗಡ್ಡ ಆಧ್ಯಾತ್ಮದ ಸಂಕೇತ. ಅದು ಮನುಷ್ಯನ ಮುಖದಲ್ಲಿ ಆಧ್ಯಾತ್ಮದ ಬೆಳಕನ್ನು ಚಿಮ್ಮಿಸಬೇಕು. ನನ್ನ ಸಲಫಿ ಗೆಳೆಯನಿದ್ದ. ಅವನಿಗೆ ಗಲ್ಲದಲ್ಲಿ ಅದಾಗಷ್ಟೇ ನಾಲ್ಕೈದು ಕೂದಲುಗಳಷ್ಟೇ ಮೂಡಿತ್ತು. ಅದನ್ನು ವಿಕಾರವಾಗಿ ನೇತಾಡಿಸಿಕೊಂಡು ಓಡಾಡುತ್ತಿದ್ದ. ನಾನು ಹೇಳಿದೆ ‘‘ಅದನ್ನು ಸ್ವಲ್ಪ ಟ್ರಿಮ್ ಮಾಡಿಸು. ಇನ್ನಷ್ಟು ಸುಂದರವಾಗಿ ಕಾಣುತ್ತೀಯ’’
‘‘ಇಲ್ಲ, ಗಡ್ಡದಲ್ಲಿ ಮಲಾಯಿಕ್‌ಗಳು ನೇತಾಡುತ್ತಾರಂತೆ...ಪ್ರವಾದಿಯವರು ಹೇಳಿದ್ದಾರೆ...’’
ಇಸ್ಲಾಮ್‌ನಲ್ಲಿ ಯಾವುದೇ ಆಚರಣೆಗಳಿಗೂ ಲೌಕಿಕ ಕಾರಣವೊಂದು ಇರುತ್ತದೆ. ಇದೇ ಸಲಫಿಗಳು ತಮ್ಮ ಪ್ಯಾಂಟನ್ನು ಮೊಣಕಾಲುವರೆಗೆ ಮಾತ್ರ ಬಿಡುತ್ತಾರೆ. ಬಟ್ಟೆಯನ್ನು ನೆಲ ತಾಗುವಂತೆ ಬಿಡುವುದನ್ನು ಪ್ರವಾದಿಯವರು ದ್ವೇಷಿಸಿದ್ದರು. ಅದು ದುರಹಂಕಾರದ, ಅಶುಚಿತ್ವದ ಸಂಕೇತ ಎಂದೂ ಹೇಳಿದ್ದರು. ಲೌಕಿಕ ಕಾರಣವಿಲ್ಲದ ಯಾವ ಆಚರಣೆಯೂ ಇಸ್ಲಾಮ್ ಧರ್ಮದಲ್ಲಿಲ್ಲ.
‘‘ಸುಂದರವಾಗಿ ಕಾಣುವುದು ಪ್ರವಾದಿಯವರ ಆಗ್ರಹವಾಗಿತ್ತು. ನೀನು ಗಡ್ಡ ತೆಗೆದರೆ ಗಡ್ಡದಲ್ಲಿ ನೇತಾಡುವ ಮಲಾಯಿಕ್‌ಗಳೇನು ನೆಲೆಯಿಲ್ಲದೆ ಮರದಲ್ಲಿ ನೇತಾಡುವ ಪ್ರಸಂಗ ಬರುವುದಿಲ್ಲ. ಗಡ್ಡವನ್ನು ಚೆಂದ ಬಾಚಿ, ಟ್ರಿಮ್ ಮಾಡು’’ ಎಂದು ಆ ಸಲಫಿ ಹುಡುಗನಿಗೆ ಸಲಹೆ ನೀಡಿದ್ದೆ. ಆದರೆ ಅವನು ನನಗೇ ಗಡ್ಡ ಬಿಡಲು ಪ್ರತಿ ಸಲಹೆ ಕೊಟ್ಟಿದ್ದ.

 ಪ್ರಗತಿ ಪರರು ಸೇರಿದಂತೆ ಕೆಲವು ಮಹಿಳಾವಾದಿಗಳು ‘‘ಮುಸ್ಲಿಮ್ ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಅವಕಾಶ ನೀಡಬೇಕು’’ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ಅದಕ್ಕೆ ಪ್ರೋತ್ಸಾಹ ನೀಡುವ ಜಮಾಅತೆ ಇಸ್ಲಾಮಿ ಮತ್ತು ಸಲಫಿ ಮೂವ್‌ಮೆಂಟ್‌ಗಳನ್ನು ಮೂಲಭೂತವಾದಿಗಳು ಎಂದೂ ಕರೆಯುತ್ತಾರೆ. ಇದು ನಿಜಕ್ಕೂ ನಮ್ಮ ಮುಂದಿರುವ ಬಿಕ್ಕಟ್ಟು. ಈ ಬಿಕ್ಕಟ್ಟಿನಿಂದ ಪಾರಾಗಲು ನಾನು ಆರಿಸಿದ್ದು ಒಂದೇ. ನಾನೇ ಮಸೀದಿಗೆ ಹೋಗುವುದು ಅಪರೂಪವಾಗಿರುವಾಗ, ಇನ್ನು ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶದ ಕುರಿತಂತೆ ಆಗ್ರಹಿಸುವುದು ಹಾಸ್ಯಾಸ್ಪದ. ಆದರೆ ಮುಸ್ಲಿಮ್ ಮಹಿಳೆಯರು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳಿಗೆ ತೆರಳಬೇಕು, ಅದಕ್ಕೆ ಅವಕಾಶ ನೀಡಬೇಕು ಎನ್ನುವುದು ನನ್ನ ಆಗ್ರಹ.

ಇತ್ತೀಚೆಗೆ ಮುಸ್ಲಿಮ್ ಮಹಿಳೆಯರು ವ್ಯಾಪಕವಾಗಿ ಕಾಲೇಜು ಮೆಟ್ಟಲುಗಳನ್ನು ಹತ್ತುತ್ತಿದ್ದಾರೆ. ಇಂಜಿನಿಯರ್, ಡಾಕ್ಟರ್‌ಗಳಾಗಿ ಮೆರೆಯುತ್ತಿದ್ದಾರೆ. ಇದು ಮುಸ್ಲಿಮ್ ಸಮುದಾಯಕ್ಕೆ ತುಂಬಾ ಸಂತೋಷ ತರುವ ವಿಚಾರ. ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಮುಸ್ಲಿಮ್ ಬಾಲಕಿಯರ ಫೋಟೋಗಳು ಪತ್ರಿಕೆಯ ಸಂಪಾದಕೀಯ ವಿಭಾಗಗಳಲ್ಲಿ ರಾಶಿರಾಶಿಯಾಗಿ ಬೀಳುತ್ತಿರುವುದು ನೋಡುವಾಗ ಎದೆ ತುಂಬುತ್ತದೆ. ದುರದೃಷ್ಟಕ್ಕೆ ಮಸೀದಿ ಪ್ರವೇಶ ಪಕ್ಕಕ್ಕಿರಲಿ, ಮುಸ್ಲಿಮ್ ಮಹಿಳೆಯರಿಗೆ ಶಾಲೆಗಳಿಗೆ ಪ್ರವೇಶ ನೀಡಲು ನಾವು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಮಹಿಳೆ ಶಾಲೆ ಮೆಟ್ಟಿಲು ಹತ್ತುವುದೇ ಕಷ್ಟಕರವಾಗಿತ್ತು. ಇಂದು ಅದಕ್ಕೆ ಭಿನ್ನವಾಗಿ ಮಹಿಳೆಯರೇ ಆಸಕ್ತಿಯಿಂದ ಶಾಲೆಯ ಮೆಟ್ಟಿಲನ್ನು ತುಳಿಯುವಾಗ, ಸ್ಕಾರ್ಫ್ ಹಾಕಿದರೆ ಪ್ರವೇಶವಿಲ್ಲ ಎಂದು ಅವರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ.

 ಮನೆಯಲ್ಲಿ ತಂದೆ ತಾಯಿಗಳನ್ನು ಒಲಿಸಿ, ಮುಸ್ಲಿಮ್ ಬಾಲಕಿಯರು ಶಾಲೆಗೆ ಬಂದರೆ, ಅಲ್ಲಿ ‘ನೀನು ಸ್ಕಾರ್ಫ್ ಹಾಕಿದರೆ ಶಾಲೆಗೆ ಪ್ರವೇಶವಿಲ’್ಲ ಎಂದು ವಿದ್ಯಾವಂತರೆನಿಸಿಕೊಂಡವರೇ ತಡೆಯುವುದು ಅಮಾನವೀಯ, ಕ್ರೌರ್ಯ. ಮಸೀದಿಯ ಪ್ರವೇಶಕ್ಕಿಂತಲೂ ಶಾಲೆಯ ಪ್ರವೇಶ ಬಹಳ ಮುಖ್ಯ. ಆದರೆ ವಿದ್ಯಾವಂತರೆನಿಸಿಕೊಂಡವರೇ ಇದಕ್ಕೆ ತಡೆಯಾಗಿರುವಾಗ, ಮಸೀದಿಯ ಪ್ರವೇಶದ ಬಗ್ಗೆ ನಾವು ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವಿದೆ? ಶಿಕ್ಷಣಕ್ಕೆ ಪೂರಕವಾಗಿ ಯುನಿಫಾರ್ಮ್ ಹೊರತು, ಯುನಿಫಾರ್ಮ್‌ಗಾಗಿ ಶಿಕ್ಷಣವಲ್ಲ. ಯುನಿಫಾರ್ಮ್ ಬಣ್ಣದ ಸ್ಕಾರ್ಫನ್ನೇ ತಲೆಗೆ ತೊಟ್ಟುಕೊಳ್ಳುತ್ತೇವೆ ಎಂದರೂ ಆಸ್ಪದ ನೀಡದೆ ಅದೆಷ್ಟೋ ಮುಸ್ಲಿಮ್ ಬಾಲಕಿಯರನ್ನು ಕರಾವಳಿಯಲ್ಲಿ ಶಾಲೆಯಿಂದ ಹೊರ ಹಾಕಿದರಲ್ಲ, ಅದು ಇಂದಿನ ನಿಜವಾದ ಸಮಸ್ಯೆ. ಮುಸ್ಲಿಮರು ಮಾತ್ರವಲ್ಲ, ಇಡೀ ಸಮಾಜ ಇಂದು ಇದರ ವಿರುದ್ಧ ಧ್ವನಿಯೆತ್ತಬೇಕು. ಮುಸ್ಲಿಮ್ ವಿದ್ಯಾರ್ಥಿನಿಯರ ಶಾಲಾ ಕಲಿಕೆಯ ಪರವಾಗಿ ನಿಲ್ಲಬೇಕು. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು, ಚರ್ಚೆಗಿಳಿಯಬೇಕಾಗಿದೆ. ಮುಸ್ಲಿಮ್ ಮಹಿಳೆಯರನ್ನೂ, ಸಮಾಜವನ್ನು, ದೇಶವನ್ನು ಒಟ್ಟಾಗಿ ಮೇಲೆತ್ತಬೇಕಾಗಿದೆ.

17 comments:

  1. ನಿಜ ಬಷೀರ್ ರವರೇ, ಮಂದಿರ , ಮಸೀದಿಗಳ ಪ್ರವೇಶಕ್ಕಿಂತ ಶಾಲೆಯ ಪ್ರವೇಶ ಮುಖ್ಯ. ಮಸೀದಿ ಒಳ ಹೊಕ್ಕು ಪ್ರಾರ್ಥನೆ ಮಾಡಿದರೆ ಅದೇನು ಸಿಗುತ್ತೆ ಅಂತ ಅವರು ಹಟ ಮಾಡ್ತಾ ಇದ್ದಾರೆ.

    ReplyDelete
  2. ayya basheer anna , nivu iruvudu bharatadalli , illinavara hage badaukalu kali, adu bittu bobbe hoditiya.., namma hudigiru bandange nimma hudgiru barli bido.., samanate kaliyiro nalayakka nan makla ..., tu .., baiokku manasse bartha illa..., kshudra jeevigalu

    ReplyDelete
    Replies
    1. samanate kaliyiro nalayakka nan makla ... antha helo bolimakkalu modlu illina dalitaranna samanagi nododannakalibeku nima hennumakkalannu kottu maduvemadro boli makla

      Delete
    2. yeno halka nann magane ninna maneli ninna tayi akka tangi hendthi illaveno.......ninna janmakke benki haka......ninu obba manushyana....chi...

      Delete
  3. ನಿಮ್ಮ ಮಾತು ನಿಜ ಬಶೀರ ಅವರೇ , ಮುಸ್ಲಿಮ್ ಮಹಿಳೆಯರ ಸಮಸ್ಯೆ ಮಸೀದಿಯಲ್ಲ. ಶಾಲೆ, ಕಾಲೇಜುಗಳು ಪ್ರವಾದಿಯವರು ಮಧ್ಯಮ ನಿಲುವಿಗೆ ಆದ್ಯತೆ ನೀಡಿದವರು. ಪ್ರೀತಿ, ದ್ವೇಷ ಮಾತ್ರವಲ್ಲ ಆರಾಧನೆಯೂ ತನ್ನ ಮಧ್ಯಮ ನಿಲುವನ್ನು ದಾಟ ಬಾರದು ಎಂದು ಹೇಳಿದವರು. ಈ ಮಾತು ಸತ್ಯ ಸತ್ಯ … ಆದರೆ ಯೂನಿಫಾರ್ಮ ವಿಷಯದಲ್ಲಿ ನಿಮ ವಾದ ಒಪ್ಪುವಂಥದ್ದಲ್ಲ. ಶಾಲೆಯ ಸಮವಸ್ತ್ರವೇ ಮೊದಲ ಪಾಠ ಕಲಿಸುತ್ತೆ. ಅದು ಈ ಸಮಾಜದಲ್ಲಿ ಎಲ್ಲರೂ ಒಂದೇ.. ನಾವೇಲ್ಲರೂ ಸಮಾನರು ಅಂತ… ಅಲ್ಲಿ ಹಿಂದೂ…. ಮುಸ್ಲಿಂ…. ಕ್ರೈಸ್ತ್ ಯಾರೇ ಆಗಿರಲಿ ಎಲ್ಲರಿಗೂ ಒಂದೇ ಸಮವಸ್ತ್ರ ಎಂಬ ನಿಲುವು ಸರಿಯಾದುದು. ಮುಸ್ಲಿಂ ಸೋದರಿಯರು ಧಾರ್ಮಿಕ ಅಡಚಣೆಗಳನ್ನು ಮೀರಿಯೂ ವಿದ್ಯಾವಂತರಾಗುತ್ತಿರುವುದು ತುಂಬಾ ಖುಷಿಯ ಸಂಗತಿ. ಜೊತೆಗೆ ಅವರನ್ನು ಬುರ್ಖಾದೊಳಗೆ ಬಂಧಿಸಿಡುವ ಪ್ರಯತ್ನವೂ ನಡೀತಿದೆ.

    ReplyDelete
  4. ನಿಜ ಅನಿಸುತ್ತಿದೆ..ಮೊದಲಾಗಿ ಶಿಕ್ಷಣ ದೊರಕಬೇಕು.. ಚೆನ್ನಾಗಿದೆ ಸರ್ ಲೇಖನ..

    ReplyDelete
  5. Dear Guajari beary. Good Article. I am with you.

    ReplyDelete
  6. Gujaari angadiyalli aayalebekaada amulya lekhana

    ReplyDelete
  7. nija yochisa bekada sangathi, thumba channagide

    ReplyDelete
  8. ಬಶೀರ್, ಬಹಳ ಚಾಕ ಚಕ್ಯತೆಯಿ೦ದ ಲೇಖನ ಬರೆದಿದ್ದೀರ. ಅಡ್ಡಗೋಡೆಯ ಮೇಲೆ ದೀಪ ಇಟ್ಟಹಾಗೆ ಮಾಡಿ, ಇಸ್ಲಾಮಿನ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹಾಗೇ ಇರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದೀರ. "ಹೆಣ್ಣುಮಕ್ಕಳು ಶಾಲೆಗೆ ಹೋಗಲಿ, ಆದರೆ ಬೂರ್ಖಾ ಹಾಕಿಕೊ೦ಡು ಹೋಗಲಿ" ಎ೦ಬುದು ನಿಮ್ಮ ಇಡೀ ಲೇಖನದ ಸಾರಾ೦ಶ. ಆದರೆ ನಿಮ್ಮ ಲೇಖನದ ಹೆಡ್ಡಿ೦ಗ್ ಇರುವುದು "ಮುಸ್ಲಿಮ್ ಮಹಿಳೆಯರ ಮಸೀದಿಪ್ರವೇಶ" ಇದರ ಬಗ್ಗೆ. ನೀವು ಅದೂ ಇದೂ ಕತೆಯನ್ನು ಬಿಡುತ್ತಾ ಆ ವಿಷಯವನ್ನೇ ಓದುಗರಿ೦ದ ದೂರ ತೆಗೆದುಕೊ೦ಡು ಹೋಗಿಬಿಟ್ಟಿದ್ದೀರಾ! ಇದು ನಿಮ್ಮ ಬುದ್ದಿವ೦ತಿಕೆ ಇರಬಹುದು. ಆದರೆ ಅದು ಲೇಖನದ ನಿಲುವಿಗೆ, ಕೊನೇಪಕ್ಷ ಅದರ ’ಹಣೆಬರಹಕ್ಕೆ’ ಇರುವ ಉತ್ತರವಲ್ಲ. ನೀವು ಪತ್ರಕರ್ತರಾಗಿ ಯಾವ ಜಮಾನಾದಲ್ಲಿ ಇದ್ದೀರಾ? ಸೌದಿಯ ಪಕ್ಕದಲ್ಲೇ ಇರುವ ಇರಾನಿನಲ್ಲಿ ಮುಸ್ಲಿಮ್ ಹೆ೦ಗಸರು ತು೦ಡುಲ೦ಗ ಹಾಕಿಕೊ೦ಡು ತಮ್ಮ ಸು೦ದರ ಕಾಲು, ತೊಡೆಗಳನ್ನು ಪ್ರದರ್ಶನ ಮಾಡುತ್ತಾ ಇರುವಾಗ ನಾಲ್ಕೈದುಸಾವಿರ ಮೈಲು ದೂರವಿರುವ ಹಿ೦ದೂಸ್ಥಾನದಲ್ಲಿ ಇನ್ನೂ ಪ್ರಪ೦ಚವನ್ನೇ ಕಣ್ಣುಬಿಟ್ಟು ನೋಡಿರದ ಹುಡುಗಿಯರು ತಮ್ಮ ಮುಖ-ಮೈ ಕಾಣದ೦ತೆ (ಕಣ್ಣುಗಳು ಮಾತ್ರ ಹೊರಜಗತ್ತನ್ನು ನೋಡುವ೦ತೆ) ಅವರನ್ನು ನಿರ್ಬ೦ಧಿಸುತ್ತಿದ್ದೀರಲ್ಲಾ, ನೀವು ಮೂಲಭೂತವಾದಿಯಲ್ಲದೆ ಇನ್ನೇನು? ಸುಮ್ಮನೆ ದಲಿತ, ದೌರ್ಜನ್ಯ ಮು೦ತಾದ ಶಬ್ದಗಳನ್ನು ಉಪಯೋಗಿಸಿ ಒ೦ದು ಕಡೆ ಸಮಾಜವನ್ನು ಹಾಳುಗೆಡವುತ್ತಾ ಇನ್ನೊ೦ದು ಕಡೆ ಮುಸ್ಲಿಮ್ ಮಹಿಳೆಯರನ್ನು ಕಟ್ಟಿಹಾಕುತ್ತಿರುವುದು ಯಾವ ನ್ಯಾಯ? ಮೊದಲು ಭಾರತವೆ೦ಬ -ಮುಸ್ಲಿಮರಿಗೆ ಸ್ವರ್ಗದ೦ಥಾ- ದೇಶದಲ್ಲಿ ಎಲ್ಲರ೦ತೆ ಬಾಳುವೆ ಮಾಡಲು ಕಲಿಯಬೇಕು. ಸಾಮಾಜಿಕ ನ್ಯಾಯ - ಸಮಾನತೆ ಅ೦ದರೆ ಅದು, ಸ್ವಾತ೦ತ್ರ್ಯ ಅ೦ದರೆ ಅದು. ಮುಸ್ಲಿಮರು ಈ ದೇಶದ ಸ೦ಸ್ಕೃತಿಗೆ ತಕ್ಕ ಹಾಗೆ ಇರಬೇಕೇ ಹೊರತು ಸೌದಿ ಅರೇಬಿಯಾ ಸ೦ಸ್ಕೃತಿಯನ್ನು ಇಲ್ಲಿ ತರಬಾರದು. ಇ೦ಥಹಾ ನಿಮ್ಮ ಮೂಲಭೂತ ಭಾವನೆಗಳೇ -ನಾವು ಅಣ್ಣ ತಮ್ಮ೦ದಿರ೦ತೆ- ನಾವು ಸೌಹಾರ್ದಯುತವಾಗಿ ಇರಬೇಕಾದ ಜಾಗದಲ್ಲಿ ಕಿತ್ತಾಡಿಕೊಳ್ಳುತ್ತಿದ್ದೇವೆ. ಬಶೀರ್, ನಿಮ್ಮ ಉತ್ತರ ನಿರೀಕ್ಷಿಸುತ್ತೇನೆ.

    ReplyDelete
  9. ಬಶೀರ್ ಅವರಿಗೆ -
    ೧. (ಮಸೀದಿಗೆ ತೆರಳಿದಾಕ್ಷಣ ಮುಸ್ಲಿಂ ಮಹಿಳೆಯರಿಗೆ ಹಕ್ಕುಗಳು ಸಿಕ್ಕೇ ಬಿಡುತ್ತವೆ ಎಂದು ನಾನು ಈ ಕಾರಣಕ್ಕಾಗಿಯೇ ನಂಬುವುದಿಲ್ಲ)---ಇಲ್ಲಿ ಮಸೀದಿ ಪ್ರವೇಶಕ್ಕೆ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಾತ್ರ ಮುಖ್ಯವಾದ ಅಂಶ; ಹಕ್ಕುಗಳದ್ದಲ್ಲ. ಹಿಂದೂ ದೇವಸ್ಥಾನಗಳ ಕಮಿಟಿಯವರೋ ಅಥವಾ ಆ ಊರಿನವರೋ ಯಾವುದೋ ಒಂದು ಸಂಪ್ರದಾಯದ ಕಾರಣ ಮುಂದಿಟ್ಟು ಮಹಿಳೆಯರಿಗೆ/ದಲಿತರಿಗೆ ಈ ರೀತಿ ಮಾಡಿದರೆ ಅದು ಮಾನವ ವಿರೋಧಿ ನೀತಿ (discrimination) ಆಗುತ್ತದೆ; ಪ್ರಗತಿಪರರ ಪ್ರಕಾರ ಅವರು "ಮನುವಾದಿ"ಗಳಾಗುತ್ತಾರೆ. ಅಲ್ಲವೇ?
    ೨. (ಲೌಕಿಕ ಕಾರಣವಿಲ್ಲದ ಯಾವ ಆಚರಣೆಯೂ ಇಸ್ಲಾಂ ಧರ್ಮದಲ್ಲಿಲ್ಲ)--- ಇದೇ ರೀತಿ ಹಿಂದೂಗಳು ಹೇಳಿದರೆ ಅದು ಏಕೆ ತಪ್ಪಾಗುತ್ತದೆ? ಅವರೂ ತಮ್ಮ ಬಳಿಯೂ ಸಹ ಲೌಕಿಕ ಕಾರಣಕ್ಕೆ ಅನುಗುಣವಾದ ಸಾಕಷ್ಟು ಆಚರಣೆಯಿದೆ ಎಂದು ಹೇಳುತ್ತಾ ಬಂದಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಏಕೆ? ಈ ಬೆಣ್ಣೆ ಮತ್ತು ಸುಣ್ಣದ ನೀತಿಯೇ ಹಿಂದೂ ಮತ್ತು ಮುಸ್ಲಿಂ ಬಾಂಧವರ ನಡುವಿನ ಸಾಮರಸ್ಯಕ್ಕೆ ಇರುವ ದೊಡ್ಡ ಕಂದರ/ಕಾರಣ ಎಂದು ತಮಗೆ ಅನಿಸುವುದಿಲ್ಲವೇ?

    ReplyDelete
  10. Nina JIH na hottapa maoudodiyondige avana anoyayi galo Porkistanake hogidare 99% bharatiya muslimaro shanti ya jeevana madabahodito.
    nina yedebidangi tana torisa beda..

    ReplyDelete