ಮಲಗೋದು ಎನ್ನೋ ಶಬ್ದ
ಹೆಣ್ಣಿನ ಪಾಲಿಗೆ ಅನೈತಿಕ...
ಯಾರ ಜೊತೆಗೆ ಎಂಬ
ಜೋಡಿ ಪದ
ತಕ್ಷಣ
ಪ್ರಶ್ನೆಯಾಗಿ ಎರಗುತ್ತದೆ...
ಅವಳು ಗಂಡನ ಜೊತೆ ಮಲಗಬೇಕು..
ಅಥವಾ ಮಗುವಿನ ಜೊತೆಗೆ...
ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತ
ಸಾವಿರ ಕಣ್ಣುಗಳು....
ಅದಕ್ಕಾಗಿಯೆ ಹೆಣ್ಣು
ಗಂಡನ ಕನಸು ಕಾಣುತ್ತಾಳೆ..
ಅದು ನಿಜಕ್ಕೂ
ನೆಮ್ಮದಿಯಿಂದ ಮಲಗುವ ಕನಸು...
ಆದರೆ ಅವಳಿಗೆ ಬೇಗ
ಅರಿವಾಗಿ ಬಿಡೂದು
ನನ್ನ ನಿದ್ದೆ ನನ್ನದಲ್ಲ ಎನ್ನೋದು
ಅವನ ಮಲಗಿಸೋದಕ್ಕಾಗಿ
ಅವನ ಜೊತೆ ಮಲಗಬೇಕೆ
ಹೊರತು ತಾನು ಮಲಗೂದಕ್ಕಲ್ಲ...
ಪ್ರತಿ ಬಾರಿ ಗಂಡ
ಮಲಗಿದ ಬಳಿಕವಷ್ಟೇ
ಅವಳು ಮಲಗಬೇಕು...
ಆತನಿಗೆ ನಿದ್ದೆಯಿಲ್ಲ ಎಂದರೆ
ಇವಳಿಗೂ ನಿದ್ದೆ ಇಲ್ಲ....
ಪ್ರತಿ ಬಾರಿ ಯೋಚಿಸುತ್ತಾಳೆ
ನನಗಾಗಿ ಮಲಗಿದ್ದೆ ಇಲ್ಲ...
ಒಮ್ಮೆ ಕಣ್ತುಂಬಾ ನಾನು
ನನ್ನ ಜೊತೆಯೇ ಮಲಗಬೇಕು...
ನನಗಾಗಿ ಮಲಗಬೇಕು
ಇತ್ತೀಚೆಗೆ....
ಗೋರಿಯೊಳಗೆ
ಗಂಡನ ಹಂಗಿಲ್ಲದೆ
ಒಬ್ಬಂಟಿಯಾಗಿ... ಸುಖವಾಗಿ...
ನಿದ್ದೆ ಹೋದ ಹೆಣ್ಣು ಜೀವಗಳು
ಅವಳ ಕನಸಲ್ಲಿ ಆಗಾಗ
ಕಾಣಿಸಿ ಕೊಳ್ಳುತ್ತಾರೆ...!
ಹೆಣ್ಣಿನ ಪಾಲಿಗೆ ಅನೈತಿಕ...
ಯಾರ ಜೊತೆಗೆ ಎಂಬ
ಜೋಡಿ ಪದ
ತಕ್ಷಣ
ಪ್ರಶ್ನೆಯಾಗಿ ಎರಗುತ್ತದೆ...
ಅವಳು ಗಂಡನ ಜೊತೆ ಮಲಗಬೇಕು..
ಅಥವಾ ಮಗುವಿನ ಜೊತೆಗೆ...
ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತ
ಸಾವಿರ ಕಣ್ಣುಗಳು....
ಅದಕ್ಕಾಗಿಯೆ ಹೆಣ್ಣು
ಗಂಡನ ಕನಸು ಕಾಣುತ್ತಾಳೆ..
ಅದು ನಿಜಕ್ಕೂ
ನೆಮ್ಮದಿಯಿಂದ ಮಲಗುವ ಕನಸು...
ಆದರೆ ಅವಳಿಗೆ ಬೇಗ
ಅರಿವಾಗಿ ಬಿಡೂದು
ನನ್ನ ನಿದ್ದೆ ನನ್ನದಲ್ಲ ಎನ್ನೋದು
ಅವನ ಮಲಗಿಸೋದಕ್ಕಾಗಿ
ಅವನ ಜೊತೆ ಮಲಗಬೇಕೆ
ಹೊರತು ತಾನು ಮಲಗೂದಕ್ಕಲ್ಲ...
ಪ್ರತಿ ಬಾರಿ ಗಂಡ
ಮಲಗಿದ ಬಳಿಕವಷ್ಟೇ
ಅವಳು ಮಲಗಬೇಕು...
ಆತನಿಗೆ ನಿದ್ದೆಯಿಲ್ಲ ಎಂದರೆ
ಇವಳಿಗೂ ನಿದ್ದೆ ಇಲ್ಲ....
ಪ್ರತಿ ಬಾರಿ ಯೋಚಿಸುತ್ತಾಳೆ
ನನಗಾಗಿ ಮಲಗಿದ್ದೆ ಇಲ್ಲ...
ಒಮ್ಮೆ ಕಣ್ತುಂಬಾ ನಾನು
ನನ್ನ ಜೊತೆಯೇ ಮಲಗಬೇಕು...
ನನಗಾಗಿ ಮಲಗಬೇಕು
ಇತ್ತೀಚೆಗೆ....
ಗೋರಿಯೊಳಗೆ
ಗಂಡನ ಹಂಗಿಲ್ಲದೆ
ಒಬ್ಬಂಟಿಯಾಗಿ... ಸುಖವಾಗಿ...
ನಿದ್ದೆ ಹೋದ ಹೆಣ್ಣು ಜೀವಗಳು
ಅವಳ ಕನಸಲ್ಲಿ ಆಗಾಗ
ಕಾಣಿಸಿ ಕೊಳ್ಳುತ್ತಾರೆ...!
wah killer lines. liked this a lot!!
ReplyDeletemalathi S
Super..
ReplyDeletehennu maguvinondigey malagodu.... saavira reethi....
ReplyDeletegandinondigey ....Swalpa sathya idru, swalpa one sided kavanaannisatthey.The woman is appears to be completely helpless and sacrificing and man the villain. The man woman relationship is simplified. I feel that the poem is not balanced in view, though poetic....
Why woman is always glorified at the cost of man
ReplyDeletegreat words
ReplyDeleteಅಸ್ತಿತ್ವದ ಅರಿವು ? ನಿರಶದಯಕವಗಬೇಕೆ ?
ReplyDeleteಚೆನ್ನಾಗಿದೆ. ಕೊನೆಯ ಪ್ಯಾರಾ ಇಲ್ಲದಿದ್ದರೂ ಚೆನ್ನಾಗಿರುತ್ತಿತ್ತು.
ReplyDelete:D
ReplyDeleteಉತ್ತಮವಾದ ಕವನ.
ReplyDeleteRajalakshmi yavare dayavittu satya oppikolari
ReplyDeletesoo nice.
ReplyDeleteಮಕ್ಕಳು ಅಮ್ಮನಿಗೆ ಸ್ವಲ್ಪ ಜಾಸ್ತಿ ಕಾಟ ಕೊಡುತ್ತವೆ, ಬಹುಶಃ ನಿಜ. ಆದರೆ ಗಂಡನ ಬಗ್ಗೆ ಹೆಂಡತಿಯ ಭಕ್ತಿ ತುಂಬಾ ಹಳೆಯ ಕಥೆಏನೋ. ನಗರ ಜೀವನದಲ್ಲಿ ಇಂಥಹ ಸಂದರ್ಭಗಳು ತುಂಬಾ ವಿರಳ. ದುಡಿಯುವ ಮಧ್ಯಮವರ್ಗದ ಗಂಡಸು ಬಹುಶಃ ಹೆಣ್ಣಿಗಿಂತ ಹೆಚ್ಚು ಶೋಷಿತ ಪ್ರಾಣಿ.
ReplyDeleteI liked it
ReplyDelete