tag:blogger.com,1999:blog-3037848766175505211.post1415082757808106056..comments2023-08-24T07:51:41.030-07:00Comments on ಗುಜರಿ ಅಂಗಡಿ: ಬುರ್ಖಾ ಮತ್ತು ಮಹಿಳಾ ಸಬಲೀಕರಣB.M.BASHEERhttp://www.blogger.com/profile/14436644887076126519noreply@blogger.comBlogger11125tag:blogger.com,1999:blog-3037848766175505211.post-83895109073475161262014-09-12T21:23:23.319-07:002014-09-12T21:23:23.319-07:00ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮ...ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮತ್ತು ಉಡುಪಿನ ಕುರಿತಂತೆ ಬೀಸಾಗಿ ಮಾತನಾಡೂದು ಕೆಲವೊಮ್ಮೆ ತಪ್ಪು ಧ್ವನಿಗಳನ್ನು ನೀಡಬಹುದು. ನೀವು ಬುರ್ಖಾ ಯಾಕೆ ಧರಿಸುತ್ತೀರಿ, ಸ್ಕಾರ್ಫ್ ಯಾಕೆ ಧರಿಸುತ್ತೀರಿ ? ಎಂಬ ಪ್ರಶ್ನೆ ನೀವು ಗೋಮಾಂಸ ಯಾಕೆ ಸೇವಿಸುತ್ತೀರಿ ಎಂದು ಕೆಲವರು ಕೇಳಿದಂತೆಯೇ ಧ್ವನಿಸೋದು ಇದೆ ಕಾರಣಕ್ಕೆ. (ಕೆಲವು ಹುಡುಗರು ಬುರ್ಖಾ, ಸ್ಕಾರ್ಫ್, ನಿಕಾಬ್ ಇವುಗಳ ವ್ಯತ್ಯಾಸವೇ ತಿಳಿಯದೆ ವಾದಿಸುತ್ತಿದ್ದರು). ಯಾವುದೇ ಕಾರಣಕ್ಕೆ ಒಂದು ಉಡುಪು ಧಾರಣೆ ಆರಂಭವಾಗಲಿ, ಧರಿಸುತ್ತಾ ಹೋದಂತೆ ಅದು ನಿಧಾನಕ್ಕೆ ಬದುಕಿನ, ಮೈ ಮೇಲಿನ ಸಂವೇದನೆಯ ಭಾಗವಾಗುತ್ತದೆ. ಆದುದರಿಂದಲೇ ಇದು ಯಾವುದೇ ಆದೇಶದಿಂದಲಾಗಲಿ, ನಮ್ಮಂಥವರ ಘೋಶನೆಗಳಿನ್ದಾಗಲಿ(ಬುರ್ಖಾ ಬೇಕು -ಬೇಡ) ಇಲ್ಲವಾಗಿಸೋದು ಸಾಧ್ಯವಿಲ್ಲ. ಬದಲಿಗೆ ಅವರ ಬದುಕಿನಲ್ಲಿ (ಶಿಕ್ಷಣದ ಮೂಲಕ, ಸ್ವಾವಲಂಬಿ ಸಾಧನೆಗಳ ಮೂಲಕ) ಬದಲಾವನೆಗಳಾದಾಗ ಧಿರಿಸಿನಲ್ಲೂ ಸಹಜವಾಗಿ ಬದಲಾವಾನೆ ಆಗುತ್ತದೆ. ಇದನ್ನು ನನ್ನ ಲೇಖನದಲ್ಲಿ ನಾನು ಹೇಳಿದೆ. ಆದರೆ ಇಲ್ಲಿ ಕೆಲವು ಚಿಂತಕರು ಬುರ್ಖಾ ಹೋದರೆ ಅವರ ಬದುಕಿನಲ್ಲಿ ಬದಲಾವಣೆ ಯಾಗುತ್ತೆ ಎಂದು ಚರ್ಚಿಸಿದರು. ನಾನು, ಬದುಕಿನಲ್ಲಿ ಬದಲಾವಣೆಯಾದರೆ ಧಿರಿಸಿನಲ್ಲಿ ಬದಲಾವಣೆಯಾಗುತ್ತದೆ ಎಂದೇ. ಅಷ್ಟೇ. ಇಲ್ಲಿ ಬುರ್ಖಾ ಕುರಿತಂತೆ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಜಿ. ಎನ್. ನಾಗಾರಾಜ್ ರಂಥವರು ಮುಸ್ಲಿಂ ಸಮುದಾಯದ ಕುರಿತಂತೆ ಇಟ್ಟಿರುವ ಕಾಳಜಿಯ ಬಗ್ಗೆ ನನಗಂತೂ ಯಾವ ಅನುಮಾನವೂ ಇಲ್ಲ. ದಲಿತರು, ಅಲ್ಪಸಂಖ್ಯಾತರು, ದುರ್ಬಲರ ಪರವಾಗಿ ಅಮೀನು ಮಟ್ಟು ತಳೆಯುತ್ತಾ ಬಂದಿರುವ ನಿಲುವು ಅತ್ಯಂತ ಶ್ರೇಷ್ಠ ವಾದುದು. ಅದರ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಈ ಚರ್ಚೆಯ ಬಳಿಕ ಮಟ್ಟು, ನಾಗರಾಜ್ ಕುರಿತಂತೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಉಳಿದಂತೆ ನನ್ನ ಲೇಖನದಲ್ಲಿ ಬಳಸಿದ "ಸೆರಗಿಗೆ ಕೈ ಹಾಕಿದಂತೆ" "ವೈಚಾರಿಕ ಮೂಲಭೂತವಾದಿ" ಎನ್ನೋ ಶಬ್ದ ಮಟ್ಟು ಸೇರಿದಂತೆ ಕೆಲವು ಗೆಳೆಯರಿಗೆ ತೀವ್ರ ನೋವು ಕೊಟ್ಟಿದೆ ಎಂದು ತಿಳಿಯಿತು. ಇದು ಉದ್ದೇಶ ಪೂರ್ವಕವಾಗಿ ಅಥವಾ ಯಾರಿಗೋ ವೈಯಕ್ತಿಕವಾಗಿ ಬಳಸಿದ ಶಬ್ದ ಅಲ್ಲ. ಆದರೂ ಈ ಶಬ್ದ ಬಳಕೆ ಋಣಾತ್ಮಕವಾದುದನ್ನು ಧ್ವನಿಸುತ್ತದೆ ಎಂದು ನನಗೂ ಈಗ ಅನ್ನಿಸುತ್ತಿದೆ. ಇದಕ್ಕಾಗಿ ನಾನು ವಿಷಾದಿಸುತ್ತಿದ್ದೇನೆ. ಮತ್ತು ಈ ಎರಡೂ ವಾಕ್ಯವನ್ನು ನಾನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಅದಕ್ಕೆ ಕತ್ತರಿ ಹಾಕಿದ್ದೇನೆ. ನನ್ನ ಬರಹದಿಂದ ಯಾರಿಗೇ ನೋವಾಗಿದ್ದರು ಕ್ಷಮೆ ಇರಲಿ. ಈ ಚರ್ಚೆ ಒಂದು ಒಳ್ಳೆಯ ಸಮಾಜವೊಂದನ್ನು ನಿರ್ಮಿಸಲು ಪೂರಕವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿಗೆ ಈ ಕುರಿತಂತೆ ನನ್ನ ಭಾಗದ ಹೇಳಿಕೆ ಪ್ರತಿ ಹೇಳಿಕೆಗಳನ್ನು ನಿಲ್ಲಿಸಿದ್ದೇನೆB.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-29595348031900663812014-09-10T21:56:11.342-07:002014-09-10T21:56:11.342-07:00ಹುಡುಗಿ ಪುತ್ತೂರು ತಾಲೂಕಿನವಳು. ಯಾಕೆ ನಿಮ್ಮ ತಾಲೂಕನ್ನು ಕ...ಹುಡುಗಿ ಪುತ್ತೂರು ತಾಲೂಕಿನವಳು. ಯಾಕೆ ನಿಮ್ಮ ತಾಲೂಕನ್ನು ಕಡೆಗಣಿಸುತ್ತಿದ್ದೀರಿ.?ಅಮೀನ್ ಅಹ್ಸನ್noreply@blogger.comtag:blogger.com,1999:blog-3037848766175505211.post-48435066439839319722014-09-10T07:52:00.325-07:002014-09-10T07:52:00.325-07:00ಈ ಮಾತನ್ನು ಒಬ್ಬ ಬುರ್ಕಾ ತೊಡುವ ಮಹಿಳೆ ಹೇಳಿ ವಾದ ಮಾಡಿದ್ದ...ಈ ಮಾತನ್ನು ಒಬ್ಬ ಬುರ್ಕಾ ತೊಡುವ ಮಹಿಳೆ ಹೇಳಿ ವಾದ ಮಾಡಿದ್ದರೆ ಅದಕ್ಕೆ ಮೌಲ್ಯ ಬರುತ್ತಿತ್ತು. ಪುರುಷ ಪ್ರಧಾನ ಸಮಾಜದ ಧೋರಣೆ ಇಲ್ಲೂ ಒಬ್ಬ ಪ್ರಗತಿ ಪರ ಅನ್ನಿಸಿಕೊಂಡ ಬರಹಗಾರನಿಂದ ಬಂದಿರೋದು ವಿಷಾದದ ಸಂಗತಿ. ದಿನೇಶ್ ರಂಥ ಉದಾರವಾದಿಗಳು ಸಮಾಜದ ಆರೋಗ್ಯ ಸುಧಾರಿಸಲು ಹೇಳಿದ ಒಂದು ಸಂಧರ್ಬೋಚಿತ ಮಾತಿನ ಹೆಳೆಯನ್ನು ಎಳೆದು ತನ್ನ ಧರ್ಮದ ಅಂಧಕಾರದ ಪ್ರದರ್ಶನ ತೋರುವ ಅಗತ್ಯ ಇರಲಿಲ್ಲ.Dilipnoreply@blogger.comtag:blogger.com,1999:blog-3037848766175505211.post-25379157068373799222014-09-10T03:45:23.649-07:002014-09-10T03:45:23.649-07:00ಬಷೀರ್ ಅವರಿಗೆ-- ತಮ್ಮ ಲೇಖನ ಇಂದು ಬುರ್ಖಾ ಅನಿವಾರ್ಯವೇನೂ...ಬಷೀರ್ ಅವರಿಗೆ-- ತಮ್ಮ ಲೇಖನ ಇಂದು ಬುರ್ಖಾ ಅನಿವಾರ್ಯವೇನೂ ಅಲ್ಲ ಎಂಬ ನಿಲುವು ತಳೆಯುವುದಕ್ಕಿಂತ ಬದಲಾಗಿ ಬುರ್ಖಾ ಹಾಕಿಕೊಂಡರೆ ಇತರರಿಗೆ ಏನು ಕಷ್ಟ? ಅವರವರ ಇಷ್ಟ. ಇತರರಿಗೇಕೆ ಈ ಎಲ್ಲಾ ಉಸಾಬರಿ? ಎಂಬ ನಿಲುವನ್ನು ಬಲವಾಗಿ ಸಮರ್ಥಿಸುತ್ತಿದೆ. ಅದರ ಬದಲು ಹೆಣ್ಣಿಗೆ ಮಾತ್ರ ಏಕೆ ಬಟ್ಟೆಯ ವಿಷಯದಲ್ಲಿ restrictions? ಮುಸ್ಲಿಂ ಗಂಡಸರಿಗೆ ಏಕೆ ಇಲ್ಲ? ಇದು ಅಸಮಾನತೆ ಅಲ್ಲವೇ? ಮುಸ್ಲಿಮೇತರರು ಅವರವರ ಇಷ್ಟದಂತೆ ತಮ್ಮ ತಮ್ಮ ಆಚರಣೆಗಳನ್ನು ಆಚರಿಸುತ್ತಿದ್ದರೆ ಅದನ್ನು 'ಪ್ರಗತಿ ಪರರು', ವೈಚಾರಿಕ ಮನೋಭಾವನೆಯವರು' ವಿರೋಧಿಸುವುದೂ , ಅಸಮಾನತೆ ಎನ್ನುವುದೂ ತಪ್ಪು ಅಲ್ಲವೇ? ಎಂಬ ಒಂದೆರೆಡು ಸಾಲು ನಿಮ್ಮ ಲೇಖನದಲ್ಲಿದ್ದರೆ ನಿಮ್ಮದು ಸಮ ತೂಕದ ಮಾತುಗಳಾಗುತ್ತಿತ್ತು. ಆದರೆ ನಿಮ್ಮ ಲೇಖನ ಹಾಗೆ ಆಗಿಲ್ಲ . ಈ ಲೇಖನದಲ್ಲಿನ ತಮ್ಮ ಒಂದೆರೆಡು ಅಭಿಪ್ರಾಯಗಳ ಬಗ್ಗೆ ----
(೧)>>>'ಬಟ್ಟೆ ಎನ್ನುವುದು ಧರಿಸುವವರ ಆಯ್ಕೆಯೇ ಹೊರತು, ನೋಡುವವರ ಆಯ್ಕೆ ಅಲ್ಲ >>>' ಈ ಮಾತು ಅತಾರ್ಕಿಕ . ಮದುವೆ , ಗೃಹ ಪ್ರವೇಶ, ಕಾಲೇಜಿನ get together , ಇತ್ಯಾದಿ ಒಂದು ಶುಭ ಸಮಾರಂಭದಲ್ಲಿ ಗಂಡಾಗಲಿ ಹೆಣ್ಣಾಗಲಿ ಧರಿಸುವ ಬಟ್ಟೆ ನೋಡುವವರ ಆಯ್ಕೆಯೇ ಆಗಿರುತ್ತದೆ. ಅಲ್ಲಿ ಎಷ್ಟು grand ಆಗಿ ಹೋದರೂ ಚೆನ್ನವೇ. ಆದರೆ ಸಾವಿನ ಸೂತಕದ ಮನೆಗೆ ಹೋಗುವುದು ಸತ್ತವರ ಸಂಬಂಧಿಕರನ್ನು ಸಂತೈಸಲಿಕ್ಕಾಗಿಯೇ ಹೊರತು ನಾವು ಧರಿಸುವ ಬಟ್ಟೆಯ ಪ್ರದರ್ಶನಕ್ಕಲ್ಲ. ಸಾವಿನ ಮನೆಗೆ ಹೋಗುವಾಗ ನಾವು ತುಂಬಾ ಸರಳವಾಗಿರಬೇಕಾದ್ದು ಮುಖ್ಯ.
(೨)>>> 'ಬಟ್ಟೆಗಾಗಿ ಬದುಕು ಅಲ್ಲ. ಬದುಕಿಗಾಗಿ ಬಟ್ಟೆ'>>> ಮುಸ್ಲಿಮೇತರ ಹೆಣ್ಣು ಮಕ್ಕಳು, ವಯಸ್ಕರು ಬುರ್ಖಾ ಇಲ್ಲದೆ ಬದುಕು ಸಾಗಿಸುತ್ತಿರುವಾಗ ಮುಸ್ಲಿಂ ಹೆಣ್ಣು ಮಕ್ಕಳನ್ನು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿರುವ 'ಶಕ್ತಿ' ಯಾವುದು? ಧರ್ಮವೇ? ಸಂಸ್ಕೃತಿಯೇ? ಆಚರಣೆಯೇ? ರೂಢಿಯೇ? ಅಥವಾ ಮೂಢ ನಂಬಿಕೆಯೇ? ಇವುಗಳಲ್ಲಿ ಕನಿಷ್ಠ ಯಾವುದಾದರೊಂದರ "ಒತ್ತಾಯ" ಇರಲೇಬೇಕಲ್ಲವೇ? ಅದು ಯಾವುದು? ಬುರ್ಖಾ ಧರಿಸದೆ ಬದುಕುವುದು ಮುಸ್ಲಿಂ ಸಮಾಜದಲ್ಲಿ ಕಷ್ಟ ಆಗುವುದು ಏಕೆ? ( ರಾಜಕೀಯ,ಕ್ರೀಡೆ,ಸಿನಿಮಾ ಇತ್ಯಾದಿ ರಂಗಗಳಲ್ಲಿರುವ celebrity ಗಳನ್ನು ಹೊರತುಪಡಿಸಿ)
(೩)>>>'ನಾನು ಧರಿಸುವ ಧಿರಿಸನ್ನು ಬದಲಾಯಿಸುವ ಕಡೆಗೆ ಹೆಚ್ಚು ಆಸಕ್ತನಾಗಿಲ್ಲ '>>> ಏಕೆ? ನಿಮ್ಮದು ಒಂಟಿ ದನಿ ಆಗುತ್ತದೆ ಎಂಬ ಕಳವಳವೇ? ಅನಗತ್ಯವಾಗಿ ನಿಮ್ಮ ಸಮಾಜದಲ್ಲಿ, ಬಂಧು-ಬಾಂಧವರಲ್ಲಿ ನಿಮಗೆ ಆಗುವ ಇರಿಸು ಮುರಿಸನ್ನು ತಪ್ಪಿಸುವುದಕ್ಕೊಸ್ಕರವೇ?
----ಮು ಅ ಶ್ರೀರಂಗ ಬೆಂಗಳೂರು srirangahttps://www.blogger.com/profile/14134929258897892694noreply@blogger.comtag:blogger.com,1999:blog-3037848766175505211.post-68053844117707632402014-09-10T03:03:38.242-07:002014-09-10T03:03:38.242-07:00ಅನ್ಯರ ತಪ್ಪುಗಳನ್ನು ಹುಡುಕುವಾಗ ನಿಷ್ಠುರ ನ್ಯಾಯಾದೀಶರಾಗು...ಅನ್ಯರ ತಪ್ಪುಗಳನ್ನು ಹುಡುಕುವಾಗ ನಿಷ್ಠುರ ನ್ಯಾಯಾದೀಶರಾಗುವ ನಾವು, ನಮ್ಮದೇ ವಿಚಾರಗಳು ಬಂದಾಗ ಬಹುಶಃ ವ್ಯತಿರಿಕ್ತವಾಗಿ ವರ್ತಿಸಿಬಿಡುತ್ತೇವೆ ಅನ್ನೋದು ನಿಜ ಆಯ್ತು ಬಿಡಿ ಸಾರ್.Anonymousnoreply@blogger.comtag:blogger.com,1999:blog-3037848766175505211.post-45688108567252330732014-09-09T21:05:09.674-07:002014-09-09T21:05:09.674-07:00Wah! Empty logic to justify burkha!Wah! Empty logic to justify burkha!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3037848766175505211.post-18601769631602136902014-09-09T19:15:57.488-07:002014-09-09T19:15:57.488-07:00ಬುರ್ಖ ಹಾಕೋದಿದ್ರೆ ಹಾಕ್ಬೋದು, ಬೇಡ ಅನ್ನೋರು ಬಿಡಬಹುದು ಅನ...ಬುರ್ಖ ಹಾಕೋದಿದ್ರೆ ಹಾಕ್ಬೋದು, ಬೇಡ ಅನ್ನೋರು ಬಿಡಬಹುದು ಅನ್ನೋ ಥರದ ಸಮರ್ಥನೆ! ಇಸ್ಲಾಂ ಮೈತುಂಬ ಬಟ್ಟೆ ಹಾಕುವುದನ್ನಷ್ಟೇ ಹೇಳುತ್ತದೆ ಎನ್ನುವವರು ಬಟ್ಟೆಯ ಮೇಲೆ ಹಾಕುವ ಬುರ್ಖವನ್ನೇಕೆ ಸಮರ್ಥಿಸುತ್ತೀರಿ? ಬಟ್ಟೆ ಸಮಸ್ಯೆಯನರಿತು ಅಗತ್ಯ ಬಟ್ಟೆಗಳನ್ನಷ್ಟೇ ತೊಟ್ಟು ಬದುಕಿದ ಗಾಂಧಿಯೇಕೆ ನಮಗೆ ಆದರ್ಶವಾಗುವುದಿಲ್ಲ? ದಿನೇಶ್ ಅಮೀನ್ ಮಟ್ಟು ಸರ್ ಪ್ರತಿಪಾದಿಸಿದ್ದರಲ್ಲಿ ಸತ್ಯವಿದೆ, ನಮ್ಮಲ್ಲಿನ ಹುಳುಕುಗಳನ್ನು ಹೆಕ್ಕಿ ಗುಡಿಸಿಕೊಳ್ಳದ ಹೊರತು ಪರರ ಮನೆಯಂಗಳ ಹಾಗಿದೆ, ಹೀಗಿದೆ ಅನ್ನೋದು ಹಾಸ್ಯಾಸ್ಪದಬಾಗಬಹುದು.

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3037848766175505211.post-83237400950986761812014-09-09T09:18:11.103-07:002014-09-09T09:18:11.103-07:00Main difference between muslim and non-muslim wome...Main difference between muslim and non-muslim women is code of dress. by maintaining her code of dress a muslim women is having liberty to undertake any permissible education or profession. vis-a-vis she can become a doctor, engineer, pilot, politician, defence personal etc. etc. here code of dress prescribed for muslim women is full dress covering head. so, that full dress need not to be only burkha...it can be anything else. in precise she has to be fuily covered that's it!
Anonymousnoreply@blogger.comtag:blogger.com,1999:blog-3037848766175505211.post-9420557660486423252014-09-09T04:47:22.989-07:002014-09-09T04:47:22.989-07:00Alaashh!
you failed to understand the very simple...Alaashh!
you failed to understand the very simple but important question Sir Dinesh Mattu raised!! Mr. Basheer, pls understand even "Mades Snana" will also dissappear with the time , education and knowledge..not by force..your own words.." ಕಿತ್ತೆಗೆಯಲು ಹೋದಂತೆಯೇ ಅದು ಬಿಗಿಯಾಗುತ್ತಾ ಹೋಗುತ್ತದೆ. .." the way you defended burkha...allow every relegion people to follow thier own style Basheer..who are you to put your hand on others life...""ಹೀಗಿರುವಾಗ ಒಬ್ಬ ಮಹಿಳೆ ಧರಿಸಿದ ಧಿರಿಸಿಗೆ ನಾವು ಕೈ ಹಾಕುವುದು ಎಂದರೆ ಪರೋಕ್ಷವಾಗಿ ಆಕೆಯ ಸೆರಗಿಗೆ ಕೈ ಹಾಕಿದಂತೆಯೇ ಹೌದು..." some relegious offerings too thier very personal... Yess i too agree it should go..but as you only said..." ಉದುರುವುದಿದ್ದರೂ ಅದೇ ದಾರಿಯಲ್ಲಿ ಉದುರಬೇಕೇ ಹೊರತು, ..".

how difficult you felt to deffend Burkha Basheer..!! Just tell me , what new thing..new "Gyaan" you gave in this write up??? Nothing... So be sensitive with every human life & its behavioural Pattern Basheer...dont be cynic...

P M Kathalsar.Anonymousnoreply@blogger.comtag:blogger.com,1999:blog-3037848766175505211.post-79082584379970208892014-09-09T03:39:23.192-07:002014-09-09T03:39:23.192-07:00Most of muslim womans who wearing burka is by choi...Most of muslim womans who wearing burka is by choice , not by force..This article justifies that..Nice ArticleShameernoreply@blogger.comtag:blogger.com,1999:blog-3037848766175505211.post-17062722326861951642014-09-09T02:06:50.449-07:002014-09-09T02:06:50.449-07:00Balanced, thoughtfull Balanced, thoughtfull S V Hegdekattehttps://www.blogger.com/profile/00129259024853669538noreply@blogger.com